CrimeLatestMain PostNational

ಮುಂಬೈನ ನಾಲ್ವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ ನೈಜೀರಿಯನ್ ವ್ಯಕ್ತಿ ಅರೆಸ್ಟ್

Advertisements

ಮುಂಬೈ: ನಾಲ್ಕು ಜನರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ನೈಜೀರಿಯಾ ಪ್ರಜೆಯೊಬ್ಬನನ್ನು ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಜನರು ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ. ಘಟನೆಯ ವೇಳೆ ವ್ಯಕ್ತಿ ಡ್ರಗ್ಸ್ ನ ಅಮಲಿನಲ್ಲಿದ್ದ ಎನ್ನಲಾಗಿದೆ. ಕಳೆದ ತಿಂಗಳು, 20 ಗ್ರಾಂ ಕೊಕೇನ್ ಹೊಂದಿದ್ದಕ್ಕಾಗಿ ಇದೇ ನೈಜೀರಿಯನ್ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮಾದಕ ವಸ್ತುಗಳ ಮೌಲ್ಯ 6 ಲಕ್ಷ ರೂ. ಆಗಿದ್ದು, ಆರೋಪಿಯು ವಿಕ್ರೋಲಿಯ ಗಾರ್ಮೆಂಟ್ಸ್‌ವೊಂದರಲ್ಲಿ ಮಾರಾಟಗಾರನಾಗಿದ್ದನು.

ಕಳೆದ ತಿಂಗಳ ಆರಂಭದಲ್ಲಿ, ನಗರದ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಆರು ನೈಜೀರಿಯನ್ನರ ಗುಂಪನ್ನು ಮೇಘಾಲಯದಲ್ಲಿ ಬಂಧಿಸಲಾಗಿತ್ತು. ಪೊಲೀಸರ ಪ್ರಕಾರ, ಆರೋಪಿಗಳು ವಾಣಿಜ್ಯ ಪ್ರವಾಸಿ ಕಾರಿನಲ್ಲಿ ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದರು.

Leave a Reply

Your email address will not be published.

Back to top button