ಮುಂಬೈ: 23 ವರ್ಷದ ಮಾಡೆಲ್ ಒಬ್ಬ ತಾಯಿಯೊಂದಿಗೆ ಹಣದ ವಿಚಾರವಾಗಿ ಜಗಳವಾಡುತ್ತಾ ಸ್ನಾನಗೃಹದಲ್ಲಿ ಆಕೆಯನ್ನು ತಳ್ಳಿ ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಸುನಿತಾ ಸಿಂಗ್ ಮಗನಿಂದಲೇ ಹತ್ಯೆಗೊಳಗಾದ ತಾಯಿ. ಮಗ ಲಕ್ಷ್ಯ ಸಿಂಗ್ ನನ್ನು ಓಶಿವಾರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ನ್ಯಾಯಾಲಯ ಅಕ್ಟೋಬರ್ 8 ರವರೆಗೆ ಪೊಲೀಸ್ ಕಸ್ಟಡಿಗೆ ಆತನನ್ನು ನೀಡಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ತಾಯಿ ಮತ್ತು ಮಗ ಮಾದಕ ವ್ಯಸನಕ್ಕೆ ಒಳಗಾಗಿದ್ದರು. ಆರೋಪಿಯನ್ನು ವಿಚಾರಣೆಗೊಳಪಡಿಸುತ್ತೇವೆ ಮತ್ತು ಹತ್ಯೆಗೆ ನಿಖರವಾಗಿ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಠಾಣೆಯ ಇನ್ಸ್ ಪೆಕ್ಟರ್ ಎಂದು ಹೇಳಿದ್ದಾರೆ.
ಏನಿದು ಘಟನೆ?
ಬುಧವಾರ ಮಧ್ಯರಾತ್ರಿ ತಾಯಿ ಸುನಿತಾ ಸಿಂಗ್ ಮಾದಕ ವಸ್ತುಗಳನ್ನು ಸೇವಿಸಿದ್ದಾಳೆ. ನಂತರ ಹಣದ ವಿಷಯವಾಗಿ ತಾಯಿ ಸುನಿತಾ ಜೊತೆ ಮಗ ಲಕ್ಷ್ಯ ಸಿಂಗ್ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತೆರಳಿದ್ದು, ಮಗ ಸ್ನಾನಗೃಹಕ್ಕೆ ಆಕೆಯನ್ನು ತಳ್ಳಿದ್ದಾನೆ. ತಾಯಿಯ ತಲೆಯನ್ನು ಬಾತ್ ರೂಮಿನಲ್ಲಿರುವ ಟಬ್ ಗೆ ಹೊಡೆದು ಬಳಿಕ ಹೊರಗಡೆ ಲಾಕ್ ಮಾಡಿದ್ದಾನೆ. ಲಕ್ಷ್ಯ ಬೆಳಿಗ್ಗೆ ಬಾಗಿಲು ತೆರೆದಾಗ, ತಾಯಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಈ ಘಟನೆಯ ಸಮಯದಲ್ಲಿ ಫ್ಲಾಟ್‍ನಲ್ಲಿ ಸುನೀತಾ, ಲಕ್ಷ್ಯ, ಆಕೆಯ ಪ್ರೇಯಸಿ ಮತ್ತು ಇಬ್ಬರು ವ್ಯಕ್ತಿಗಳು ಇದ್ದರು ಎಂದು ತಿಳಿದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv