ಮುಂಬೈ: ಅನಾಮಧೇಯ ನಂಬರ್ ನಿಂದ ಕಾಲ್ ಮಾಡಿ ಮಹಿಳೆಯೋರ್ವರನ್ನು ಸೆಕ್ಸ್ ಕರೆಯುತ್ತಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿಸಿದ ಆರೋಪಿಯನ್ನು ನೋಡಿದ ಮಹಿಳೆ ಕೆಲ ಕ್ಷಣ ಶಾಕ್ ಆಗಿದ್ದಾರೆ. ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಸಹೊದ್ಯೋಗಿಯೇ ಫೋನ್ ಮಾಡುವ ಮೂಲಕ ಕಿರುಕುಳ ನೀಡುತ್ತಿದ್ದ ಎಂದು ತಿಳಿದಿದೆ. 45 ವರ್ಷದ ಆರೋಪಿ ಕಂಪನಿಯ ಮಾಲೀಕರ ಕಾರಿನ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು.
ಜುಲೈನಲ್ಲಿ ಮಹಿಳೆಗೆ ಆರೋಪಿ ಮೂರು ದಿನಗಳಿಂದ ನಿರಂತರವಾಗಿ ಹೊಸ ನಂಬರ್ ಗಳಿಂದ ಕಾಲ್ ಮಾಡಿ ತನ್ನ ಜೊತೆ ಸೆಕ್ಸ್ ಬರುವಂತೆ ಆಹ್ವಾನಿಸುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನು.
ಇದರಿಂದ ಬೇಸತ್ತ ಮಹಿಳೆ ನಗರದ ಸಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದರು. ಇತ್ತ ಮಹಿಳೆ ದೂರು ದಾಖಲಿಸಿದ ವಿಷಯ ತಿಳಿದ ಆರೋಪಿ ಉತ್ತರ ಪ್ರದೇಶದ ತನ್ನ ಊರಿಗೆ ತೆರಳಿದ್ದನು. ದೂರು ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಕಾಲ್ ರೆಕಾರ್ಡ್ ಗಳನ್ನು ಪರಿಶೀಲನೆ ನಡೆಸಿದಾಗ ಮಹಿಳೆಯ ಸಹದ್ಯೋಗಿಯೇ ಕಾಲ್ ಮಾಡುತ್ತಿರುವುದು ವಿಚಾರಣೆಯಿಂದ ತಿಳಿದಿದೆ.
ಇದನ್ನೂ ಓದಿ: ನನ್ನ ಜೊತೆ ಒಂದು ರಾತ್ರಿ ಕಳೆದ್ರೆ, ನಿನ್ನ ಕನಸುಗಳನ್ನು ಪೂರ್ಣ ಮಾಡ್ತೇನೆ ಎಂದ ಮ್ಯಾನೇಜರ್
ಪೊಲೀಸರು ಮೊಬೈಲ್‍ನ ಎಲ್ಲ ಕಾಲ್ ರೆಕಾರ್ಡ್ ದಾಖಲೆ ಮತ್ತು ಟೆಕ್ನಿಕಲ್ ಸಾಕ್ಷಿಗಳನ್ನು ಕಲೆ ಹಾಕಿದ್ದರು. ಆರೋಪಿ ಬಹುದಿನಗಳ ನಂತರ ಮುಂಬೈ ನಗರಕ್ಕೆ ಆಗಮಿಸಿದ್ದನು. ಆರೋಪಿ ನಗರಕ್ಕೆ ಆಗಮಿಸಿರುವ ವಿಷಯ ತಿಳಿಸ ಪೊಲೀಸರು ಪಶ್ಚಿಮ ಅಂಧೇರಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಕೋರ್ಟ್ ಗೆ 15 ಸಾವಿರ ರೂ. ಠೇವಣಿ ಇಟ್ಟು ಜಾಮೀನು ಪಡೆಯಲಾಗಿದೆ ಎಂದು ಆರೋಪಿಯ ಪರ ವಕೀಲರಾದ ಸಂದೀಪ್ ಶೇರ್‍ಖಾನೆ ತಿಳಿಸಿದ್ದಾರೆ.