ಮುಂಬೈ: ತಲಾಖ್ (Triple Talaq) ಕುರಿತು ರೀಲ್ಸ್ ಮಾಡಿದ್ದಕ್ಕೆ ತನ್ನ ಪತ್ನಿಗೆ ವ್ಯಕ್ತಿಯೊಬ್ಬ ನಿಜವಾಗಿಯೂ ತಲಾಖ್ ನೀಡಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ. ಈ ಸಂಬಂಧ ಮುಂಬೈನ (Mumbai) ಸಹರ್ ಪೊಲೀಸರು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕುರ್ಲಾ ನಿವಾಸಿ ರುಖ್ಸಾರ್ ಮುತಕೀಮ್ ಸಿದ್ದಿಕಿ (23) ದೂರು ದಾಖಲಿಸಿದ ಮಹಿಳೆ. ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡಿದ್ದಕ್ಕೆ ನನ್ನ ಪತಿ ತಲಾಖ್ ನೀಡಿದ್ದಾನೆ. ಅಲ್ಲದೇ ಸೋಷಿಯಲ್ ಮೀಡಿಯಾದಿಂದ ಆ ವೀಡಿಯೋ ಡಿಲೀಟ್ ಮಾಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ಪತಿ ಹಾಗೂ ಅತ್ತೆ ವಿರುದ್ಧ ವರದಕ್ಷಿಣಿ ಕಿರುಕುಳ ಆರೋಪ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಚಾಕ್ಲೇಟ್, ಆಟಿಕೆ ಬೇಕೆಂದು ಹಠ ಹಿಡಿದ ಮಗಳನ್ನು ಕಲ್ಲು ಎತ್ತಿ ಹಾಕಿ ಕೊಂದೇ ಬಿಟ್ಟ ಪಾಪಿ ತಂದೆ
Advertisement
Advertisement
ರುಖ್ಸಾರ್ ಮುತಕೀಮ್ ಸಿದ್ದಿಕಿ ಕಳೆದ ವರ್ಷ ಅಂಧೇರಿ (ಪೂರ್ವ) ನಿವಾಸಿ ಮುತಕೀಮ್ ಸಿದ್ದಿಕಿ ಅವರನ್ನು ವಿವಾಹವಾದರು. ರುಖ್ಸಾರ್ ಅವರ ದೂರಿನ ಪ್ರಕಾರ, ಮುತಕೀಮ್ ಪೋಷಕರು ಮತ್ತು ಸಹೋದರಿಯರು ವರದಕ್ಷಿಣೆಯಾಗಿ 5 ಲಕ್ಷ ರೂ. ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದರು. ನಮ್ಮ ಮನೆಗೆ ಆಗಾಗ್ಗೆ ಬರುವ ಇನ್ನೊಬ್ಬ ಮಹಿಳೆಯೊಂದಿಗೆ ಮುತಕೀಮ್ ಸಂಬಂಧ ಹೊಂದಿದ್ದಾನೆ ಎಂದು ರುಖ್ಸಾರ್ ಆರೋಪಿಸಿದ್ದಾರೆ.
Advertisement
ಅನಾರೋಗ್ಯಕ್ಕೆ ತುತ್ತಾಗಿದ್ದ ರುಖ್ಸಾರ್ ತನ್ನ ಪೋಷಕರ ಮನೆಗೆ ಹೋಗಿ ಅಲ್ಲಿಯೇ ಉಳಿದಿದ್ದರು. ತನ್ನ ಪತಿ ಜೊತೆಗಿರುವ ರೀಲ್ಸ್ ಮಾಡಿ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು. ಈ ರೀಲ್ಸ್ ನೋಡಿ ಕೋಪಗೊಂಡಿದ್ದ ಪತಿ, ಅದನ್ನು ತಕ್ಷಣ ಡಿಲೀಟ್ ಮಾಡುವಂತೆ ಹೇಳಿದ್ದ. ರುಖ್ಸಾರ್ ಡಿಲೀಟ್ ಮಾಡದಿದ್ದಕ್ಕೆ ಆಕೆಗೆ ಕೊಲೆ ಬೆದರಿಕೆ ಹಾಕಿದ್ದಾನೆ. ನಂತರ ಆಕೆ ಚುನಭಟ್ಟಿ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಉದ್ದೇಶಪೂರ್ವಕವಾಗಿಯೇ ಕೆಡವಲಾಗಿದೆ: 1700 ಕೋಟಿಯ ಸೇತುವೆ ಕುಸಿತಕ್ಕೆ ಬಿಹಾರ ಡಿಸಿಎಂ ಸಮರ್ಥನೆ
Advertisement
ರುಖ್ಸಾರ್ ಮುತಕೀಮ್ ತನ್ನ ಪತಿ ಕುಟುಂಬದವರ ವಿರುದ್ಧ ದೂರು ದಾಖಲಿಸಿದ್ದಾರೆ. ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆ, 2019 ಮತ್ತು ಐಪಿಸಿ ಸೆಕ್ಷನ್ 498A (ಗಂಡ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಆತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.