ಮುಂಬೈ: ಕೆನಡಾ ಪ್ರವಾಸಕ್ಕೆ ತೆರಳಲು ನನ್ನ ಸ್ನೇಹಿತರ ಜೊತೆ ಮಲಗಿ ಹಣ ಕೊಡು ಅಂತ ಪ್ರಿಯಕರನೊಬ್ಬ ಯುವತಿಗೆ ಬೆದರಿಕೆ ಹಾಕಿದ ಪ್ರಕರಣವೊಂದು ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಯುವತಿ ನೀಡಿದ ದೂರಿನಂತೆ ಸದ್ಯ ಪೊಲೀಸರು ಆರೋಪಿ ಪ್ರಿಯಕರನನ್ನು ಬಂಧಿಸಿದ್ದಾರೆ. ಅಲ್ಲದೇ ಆತನ ವಿರುದ್ಧ ಎಲ್ ಟಿ ಮಾರ್ಗ್ ಹಾಗೂ ವಾಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತ ವರದಿಯಾಗಿದೆ.
ದೂರಿನಲ್ಲೇನಿತ್ತು?:
ಯುವತಿಯ ದೂರಿನಂತೆ ಸದ್ಯ ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಸೆಪ್ಟೆಂಬರ್ 9ರಂದು ತಾನು ವಿರೋಧಿಸಿದ್ರೂ ಪ್ರಿಯತಮ ಧರಣ್ ಶಾ, ನನ್ನ ಬಟ್ಟೆ ಬಿಚ್ಚಿ ಅತ್ಯಾಚಾರ ಮಾಡಿದ್ದಾನೆ. ಪ್ರಿಯತಮ ಶಾ ತನ್ನ 4 ಮಂದಿ ಸಹಪಾಠಿಗಳ ಜೊತೆ ಸೇರಿ ಹರಿತವಾದ ಆಯುಧದೊಂದಿಗೆ ತನ್ನ ಮನೆಗೆ ಏಕಾಏಕಿ ಬಂದು ನುಗ್ಗಿದ್ದ. ಅಲ್ಲದೇ ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ನನ್ನ ಬಟ್ಟೆ ಬಿಚ್ಚಿದ್ದಾರೆ. ಇದರಿಂದ ಗಾಬರಿಗೊಂಡಿದ್ದರಿಂದ ಜ್ಞಾನ ತಪ್ಪಿ ಬಿದ್ದಿದ್ದೆ ಅಂತ ತಿಳಿಸಿದ್ದಾಳೆ.
Advertisement
Advertisement
ಕೆಲ ಸಮಯದ ಬಳಿಕ ಎಚ್ಚೆತ್ತ ನಂತ್ರ ನೇರವಾಗಿ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ. ಅಲ್ಲಿಂದ ವೈದ್ಯಕೀಯ ಪರೀಕ್ಷೆಗೆ ತೆರಳಿದಾಗ ಆಕೆಯ ಎದೆ ಹಾಗೂ ಕುತ್ತಿಗೆ ಭಾಗದಲ್ಲಿ ಗಾಯಗಳಾಗಿರುವುದು ಬೆಳಕಿಗೆ ಬಂದಿದೆ.
Advertisement
ಸ್ನೇಹಿತರೊಂದಿಗೆ ಮಲಗಿ ಹಣ ನೀಡು!
ಸೆಪ್ಟೆಂಬರ್ 3 ರಂದು ಕೂಡ ಪ್ರಿಯಕರ ಸಂತ್ರಸ್ತೆಯ ಮೇಲೆ ದಾಳಿ ಮಾಡಿದ್ದಾನೆ. ಅಲ್ಲದೇ ಅತ್ಯಾಚಾರ ಕೂಡ ಮಾಡಿದ್ದನು. ಈ ಬಗ್ಗೆಯೂ ಆಕೆ ದೂರು ದಾಖಲಿಸಿದ್ದಳು. ಇದೀಗ ಮತ್ತೆ ದೂರು ದಾಖಲಿಸಿರೋ ಸಂತ್ರಸ್ತೆ, ಈಗಾಗಲೇ ದಾಖಲಿಸಿದ್ದ ದೂರನ್ನು ಹಿಂಪಡೆಯುವಂತೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ ಈ ಕುರಿತು ಬೆದರಿಕೆ ಕೂಡ ಹಾಕಿದ್ದಾನೆ ಆತ ಎರಡನೇ ಬಾರಿ ದೂರು ದಾಖಲಿಸಲು ಹೋದಾಗ ಸಂತ್ರಸ್ತೆ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.
Advertisement
ತನ್ನನ್ನು ಮದುವೆ ಮಾಡಿಕೊಳ್ಳುವುದಾಗಿ ಮಾತು ಕೊಟ್ಟಿದ್ದ ಆರೋಪಿ ಪ್ರಿಯತಮ ಈ ಮೊದಲೇ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆದ್ರೆ ಮದುವೆ ಬಗ್ಗೆ ಮಾತೆತ್ತಿದ್ರೆ, ತನ್ನ ವರಸೆ ಬದಲಿಸುತ್ತಾನೆ. ಅಲ್ಲದೇ ಬ್ಲ್ಯಾಕ್ ಮೇಲ್ ಮಾಡುತ್ತಾನೆ. ಪ್ರಿಯತಮನ ಕಾಟದಿಂದ ಬೇಸತ್ತ ಸಂತ್ರಸ್ತೆ ಸೌತ್ ಮುಂಬೈನಲ್ಲಿರುವ ತನ್ನ ಮನೆ ತೊರೆದು ನವಿ ಮುಂಬೈಗೆ ತೆರಳಿದ್ದು, ಸೆಪೆಟಂಬರ್ 3ರಂದು ಪ್ರಿಯತಮನ ವಿರುದ್ಧ ದೂರು ದಾಖಲಿಸಿದ್ದಳು.
ಸೆ.3ರಂದೇ ಸಂತ್ರಸ್ತೆಗೆ ಕರೆ ಮಾಡಿದ ಆರೋಪಿ ಪ್ರಿಯತಮ, ತನಗೆ ಕೆನಡಾ ಪ್ರವಾಸ ತೆರಳಲು ಹಣ ಕೇಳಿದ್ದಾನೆ. ಆದ್ರೆ ಪ್ರಿಯತಮನ ಮಾತನ್ನು ಈಕೆ ನಿರಾಕರಿಸಿದ್ದಾಳೆ. ಈ ವೇಳೆ ಆತನ ತನ್ನ ಸ್ನೇಹಿತರ ಜೊತೆ ಮಲಗಬೇಕು. ಆಗ ಅವರು ಕೊಟ್ಟ ಹಣವನ್ನು ನನಗೆ ಪ್ರವಾಸ ಹೋಗಲು ಕೊಡಬೇಕು ಅಂತ ಹೇಳಿದ್ದಾನೆ. ಒಂದು ವೇಳೆ ನೀನು ಇದನ್ನು ನಿರಾಕರಸಿದ್ರೆ ನನ್ನ ಬಳಿಯಿರುವ ನಿನ್ನ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾನೆ. ಈ ಹಿಂದೆ ಆರೋಪಿ ಸಂತ್ರಸ್ತೆಯ ಜೊತೆ ಒತ್ತಾಯಪೂರ್ವಕವಾಗಿ ಫೋಟೋ ಹಾಗೂ ವಿಡಿಯೋ ಮಾಡಿಸಿಕೊಂಡಿದ್ದನು. ಇಷ್ಟು ಮಾತ್ರವಲ್ಲದೇ ಆಕೆಯ ಬಳಿಯಿದ್ದ 3 ಲಕ್ಷ ನಗದು, 1.13ರೂ ಮೌಲ್ಯದ ಚಿನ್ನಾಭರಣ, ಲ್ಯಾಪ್ ಟಾಪ್, ಐಪ್ಯಾಡ್ ಹಾಗೂ ಹೆಡ್‍ಫೋನ್ಸ್ ಕೂಡ ತೆಗೆದುಕೊಂಡಿದ್ದನು.
ಸದ್ಯ ಸಂತ್ರಸ್ತೆಯ ದೂರಿನಂತೆ ಆರೋಪಿ ವಿರುದ್ಧ ಎಲ್ ಟಿ ಮಾರ್ಗ್ ಠಾಣೆಯಲ್ಲಿ ಅತ್ಯಾಚಾರ, ಬ್ಲ್ಯಾಕ್ ಮೇಲ್ ಹಾಗೂ ವಂಚನೆ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದ್ದು, ವಾಶಿ ಠಾಣೆಯಲ್ಲಿ ಸಂತ್ರಸ್ತೆಯ ಮೇಲೆ ದಾಳಿ ಹಾಗೂ ಬಟ್ಟೆ ಬಿಚ್ಚಿದ ಪ್ರಕರಣದ ಕುರಿತು ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂಬುದಾಗಿ ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv