ಮುಂಬೈ: ಭೂಗತ ಪಾತಕಿ ದಾವುದ್ ಇಬ್ರಾಹಿಂನ ಸಹಚರರು ಹಾಗೂ ಹವಾಲಾ ಆಪರೇಟರ್‌ಗಳಿಗೆ ಸಂಬಂಧಪಟ್ಟ ಮುಂಬೈನ 20 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ)ಯು ದಾಳಿ ನಡೆಸಿದೆ.
ನಾಗ್ಪಾಡಾ, ಗೋರೆಗಾಂವ್, ಬೋರಿವಿಲಿ, ಸಾಂತಾಕ್ರೂಜ್, ಮುಂಬ್ರಾ, ಭೆಂಡಿ ಬಜಾರ್ ಸೇರಿದಂತೆ ಇತರ ಸ್ಥಳಗಳಲ್ಲಿ ಸೋಮವಾರ ಎನ್‍ಐಎ ದಾಳಿ ನಡೆಸಿದೆ. ದಾಳಿಯ ವೇಳೆ ಪಾಕಿಸ್ತಾನ ಮೂಲದ ದರೋಡೆಕೋರನ ಸಹವರ್ತಿ ಸಲೀಂ ಫ್ರೂಟ್ ಅವರನ್ನು ಮುಂಬೈನಲ್ಲಿರುವ ನಿವಾಸದಿಂದ ಬಂಧಿಸಿದ್ದಾರೆ. ಅವನಿಂದ ದಾಹುದ್ ಇಬ್ರಾಹಿಂಗೆ ಸೇರಿದ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಫೆಬ್ರವರಿಯಲ್ಲಿ ವಿದೇಶದಲ್ಲಿ ನೆಲೆಸಿರುವ ಅನೇಕರಿಂದ ಭಯೋತ್ಪಾದನಾ ಚಟುವಟಿಕೆಗಳು ಹಾಗೂ ಭಾರತದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಕೃತ್ಯಗಳಲ್ಲಿ ತೊಡಗಿರುವುದಕ್ಕೆ ಕುರಿತು ದಾವೂದ್‍ನೊಂದಿಗೆ ಸಂಬಂಧ ಹೊಂದಿದ್ದ ಹವಾಲಾ ಆಪರೇಟರ್‌ಗಳು, ಶಾರ್ಪ್ ಶೂಟರ್ಸ್, ಕಳ್ಳ ಸಾಗಣಾದಾರರು ಮತ್ತು ಡ್ರಗ್ ಪೆಡ್ಲರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ದಾಳಿ ನಡೆದಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ದೆಹಲಿಯ ಶಾಹೀನ್‌ಬಾಗ್ ಪ್ರದೇಶದಲ್ಲಿ ಜೆಸಿಬಿಗಳ ಘರ್ಜನೆ
ಪಾಕಿಸ್ತಾನದ ಕರಾಚಿಯಿಂದ ದಾವೂದ್ ಇಬ್ರಾಹಿಂ ನಡೆಸುತ್ತಿರುವ ಕ್ರಿಮಿನಲ್ ಮತ್ತು ಭಯೋತ್ಪಾದಕ ಕೃತ್ಯಗಳ ಸಂಪೂರ್ಣ ಮೇಲ್ವಿಚಾರಣೆ ಹಾಗೂ ತನಿಖೆ ನಡೆಯುತ್ತಿದೆ. ದಾವೂದ್ ಇಬ್ರಾಹಿಂ ಹಾಗೂ ಆತನ ಸಹಚರರು ನಡೆಸುತ್ತಿರುವ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುವುದರ ಜೊತೆಗೆ, ದಾವೂದ್ ಹಿಂಬಾಲಕರಾದ ಛೋಟಾ ಶಕೀಲ್, ಜಾವೇದ್ ಚಿಕ್ನಾ, ಟೈಗರ್ ಮೆನನ್, ಇಕ್ಬಾಲ್ ಮಿರ್ಚಿ, ಹಸೀನಾ ಪಾರ್ಕರ್ ವಿರುದ್ಧವು ತನಿಖೆಯನ್ನು ನಡೆಸಲಿದೆ ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ದೇವೇಂದ್ರ ಫಡ್ನವಿಸ್‍ರಿಂದ ಠಾಕ್ರೆ ಆಡಳಿತ ನಡೆಸೋದನ್ನ ಕಲಿಬೇಕು: ನವನೀತ್ ರಾಣಾ