Sunday, 22nd July 2018

Recent News

ಹಳಿ ತಪ್ಪಿದ ಮುಂಬೈ ಸಬ್ ಅರ್ಬನ್ ರೈಲು- ಐವರಿಗೆ ಗಾಯ

ಮುಂಬೈ: ಕಳೆದ ಒಂದು ವಾರದಲ್ಲಿ ಮೂರನೇ ಬಾರಿಗೆ ರೈಲು ಹಳಿ ತಪ್ಪಿರೋ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಮುಂಬೈನ ಮಹೀಮ್ ರೈಲ್ವೆ ನಿಲ್ದಾಣದ ಬಳಿ ಸಬ್ ಅರ್ಬನ್ ರೈಲಿನ 4 ಬೋಗಿಗಳು ಹಳಿ ತಪ್ಪಿವೆ. ಘಟನೆಯಲ್ಲಿ 5 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪಶ್ಚಿಮ ರೈಲ್ವೆ ಹೇಳಿದೆ.

ರೈಲು ಹಳಿ ತಪ್ಪಿದ ಪರಿಣಾಮ ವದಾಲಾ- ಅಂಧೇರಿ ಭಾಗದಲ್ಲಿ ರೈಲು ಸಂಚಾರಕ್ಕೆ ತೊಂದರೆಯಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್(ಸಿಎಸ್‍ಎಮ್‍ಟಿ)ನಿಂದ ಹೊರಟ ರೈಲು ಅಂಧೇರಿ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ ತೊಂದರೆ ಕಾಣಿಸಿಕೊಂಡಿತ್ತು. ರೈಲು ಚಾಲನೆಗೆ ಪವರ್ ಪೂರೈಕೆ ಮಾಡುವ ಓವರ್‍ಹೆಡ್ ಉಪಕರಣದಲ್ಲಿ ದೋಷ ಕಾಣಿಸಿಕೊಂಡಿತ್ತು. ಈ ಕಾರಣದಿಂದ ರೈಲನ್ನು ಮತ್ತೊಂದು ಟ್ರ್ಯಾಕ್‍ಗೆ ವರ್ಗಾಯಿಸಬೇಕಿತ್ತು. ಪ್ಲಾಟ್‍ಫಾರ್ಮ್‍ನಲ್ಲಿ ಸುಮಾರು 9.55ರ ವೇಳೆಯಲ್ಲಿ ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ರೈಲಿನ ಮುಂದಿನ 4 ಬೋಗಿಗಳು ಹಳಿ ತಪ್ಪಿತು ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರವಿಂದರ್ ಭಟ್ಕರ್ ಹೇಳಿದ್ದಾರೆ.

ಎರಡು ದಿನಗಳ ಹಿಂದಷ್ಟೆ ಕೈಫಿಯತ್ ಎಕ್ಸ್‍ಪ್ರೆಸ್ ರೈಲು ಹಳಿ ತಪ್ಪಿ 80 ಮಂದಿ ಗಾಯಗೊಂಡಿದ್ದರು. ಹಾಗೂ ಆಗಸ್ಟ್ 19ರಂದು ಉತ್ಕಲ್ ಎಕ್ಸ್‍ಪ್ರೆಸ್‍ನ 14 ಬೋಗಿಗಳು ಹಳಿ ತಪ್ಪಿ 24 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ 156ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಎರಡೂ ಘಟನೆಗಳು ಉತ್ತರಪ್ರದೇಶದಲ್ಲಿ ನಡೆದಿತ್ತು.

Leave a Reply

Your email address will not be published. Required fields are marked *