ಮುಂಬೈ: ಸ್ಥಳೀಯ ರೈಲಿನಲ್ಲಿ 22 ವರ್ಷದ ಯುವತಿಯೊಬ್ಬಳ ಎದುರು ವ್ಯಕ್ತಿಯೊಬ್ಬ ಹಸ್ತ ಮೈಥುನ ಮಾಡಿಕೊಂಡಿರುವ ಘಟನೆ ಜೂನ್ 15 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಹೇಯ ಕೃತ್ಯದ ಕುರಿತು ಬೆಂಗಳೂರು ಮೂಲದ ಯುವತಿ ಕೂಡಲೇ ರೈಲ್ವೆ ಹೆಲ್ಪ್‍ಲೈನ್‍ಗೆ ಕಾಲ್ ಮಾಡಿ ತಿಳಿಸಿದ್ದಾರೆ. ಆದರೆ ಅಲ್ಲಿಯ ಅಧಿಕಾರಿಗಳು ಯಾವುದೇ ಗಂಭೀರತೆ ಇಲ್ಲದೆ ಹಾಸ್ಯದದ ಮೂಲಕ ನಕ್ಕು ಫೋನ್ ಕರೆ ಸ್ಥಗಿತಗೊಳಿಸಿದ್ದಾರೆ.
Advertisement
ಈ ಘಟನೆಯ ಕುರಿತು ಫೇಸ್‍ಬಕ್‍ನಲ್ಲಿ ಸವಿವರವಾಗಿ ಬರೆದುಕೊಂಡಿದ್ದು ಪೋಸ್ಟ್ ವೈರಲ್ ಆಗಿದೆ. ಇದೀಗ ವಿಚಾರ ತಿಳಿದ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ.
Advertisement
ರೈಲ್ವೆ ಸಚಿವ ಸುರೇಶ್ ಪ್ರಭು ಅವರು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದು ಆರೋಪಿಯನ್ನು ಶೀಘ್ರ ವಶಕ್ಕೆ ಪಡೆಯಲು ಸೂಚಿಸಿದ್ದಾರೆ.
Advertisement
ದಾದರ್ ಮೂಲದ ರೈಲಿನಲ್ಲಿ ಮಧ್ಯಾಹ್ನ ಈ ಘಟನೆ ನಡೆದಿದ್ದು, ಅಂಗವಿಕಲರ ಕಂಪಾರ್ಟ್‍ಮೆಂಟ್ ನಲ್ಲಿದ್ದ ವ್ಯಕ್ತಿ ಮಹಿಳೆಯರ ಕಂಪಾರ್ಟ್ ಮೆಂಟ್ ಬಳಿ ಬಂದು ಹಸ್ತಮೈಥುನ ಮಾಡಿರುವುದಾಗಿ ಯುವತಿ ವಿವರವಾಗಿ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾಳೆ. ಮಾತ್ರವಲ್ಲದೆ ಹೆಲ್ಪ್ ಲೈನ್ ನಂಬರ್ ಗಳು ನಿಜವಾಗಿಯೂ ಉಪಯೋಗಕ್ಕೆ ಬರುತ್ತಾವೋ ಎಂದು ಪ್ರಶ್ನಿಸಿದ್ದಾಳೆ.
Advertisement
ಇದನ್ನೂ ಓದಿ: ಬೆಂಗಳೂರಿನಿಂದ ಹೊರಟ ವಿಮಾನದಲ್ಲಿ ಮಹಿಳೆಯನ್ನು ಟಚ್ ಮಾಡಿ ಹಸ್ತಮೈಥುನ ಮಾಡ್ತಿದ್ದ ಉದ್ಯಮಿ ಅರೆಸ್ಟ್!