ಜೊತೆಗಿರದ ಜೋಡಿಗಳು ಲಾಕ್‍ಡೌನ್ ಹೇಗೆ ಕಳೆಯುತ್ತಿದ್ದಾರೆ ಊಹಿಸಲು ಆಗುತ್ತಿಲ್ಲ: ಕೃತಿ

Public TV
2 Min Read
Kriti Kharbanda Pulkit Samrat

– ಅವನು ನನ್ನ ಜೊತೆ ಇರುವುದಕ್ಕೆ ಖುಷಿಯಿದೆ

ಮುಂಬೈ: ಲಾಕ್‍ಡೌನ್ ಸಮಯದಲ್ಲಿ ಬೇರೆ ಬೇರೆ ಇರುವ ಜೋಡಿಗಳು ಹೇಗೆ ಕಾಲ ಕಳೆಯುತ್ತಿದ್ದಾರೆ ನನಗೆ ಗೊತ್ತಿಲ್ಲ ಎಂದು ಗೂಗ್ಲಿ ಬೆಡಗಿ ಕೃತಿ ಕರಬಂಧ ಹೇಳಿದ್ದಾರೆ.

ಕೊರೊನಾ ವೈರಸ್ ಭಯದಿಂದ ದೇಶವೇ ಲಾಕ್‍ಡೌನ್ ಆಗಿದೆ. ಯಾರೂ ಕೂಡ ತಮ್ಮ ಮನೆಬಿಟ್ಟು ಆಚೆಗೆ ಬರುತ್ತಿಲ್ಲ. ನಟಿ-ನಟಿಯರು ಕೂಡ ಸಿನಿಮಾ ಕೆಲಸವನ್ನು ಬಿಟ್ಟು ಗೂಡ ಸೇರಿದ್ದಾರೆ. ಈ ವೇಳೆ ಬಾಲಿವುಡ್‍ನ ಕ್ಯೂಟ್ ಕಪಲ್ಸ್ ಕೃತಿ ಕರಬಂಧ ಮತ್ತು ಪುಲ್ಕಿತ್ ಸಾಮ್ರಾಟ್ ಲಾಕ್‍ಡೌನ್ ಸಮಯವನ್ನು ಒಂದೇ ಮನೆಯಲ್ಲಿ ಉಳಿದು ಎಂಜಾಯ್ ಮಾಡುತ್ತಿದ್ದಾರೆ.

kriti and pulkit

ಈ ವಿಚಾರವಾಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಕೃತಿ, ನಾವು ಮೊದಲೇ ಟ್ರಾಫಿಕ್ಸ್ ಸಮಸ್ಯೆಯಿಂದ ಒಂದೇ ಮನೆಯಲ್ಲಿ ಇರಲು ತೀರ್ಮಾನಿಸಿದ್ದೆವು. ಈಗ ಲಾಕ್‍ಡೌನ್ ಸಮಯದಲ್ಲೂ ಒಂದೇ ಮನೆಯಲ್ಲಿ ಇರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ. ಆದರೆ ಈ ಲಾಕ್‍ಡೌನ್ ಸಮಯದಲ್ಲಿ ಬೇರೆ ಬೇರೆ ಇರುವ ಜೋಡಿಗಳು ಹೇಗೆ ಕಾಲ ಕಳೆಯುತ್ತಿದ್ದಾರೆ ಎಂದೂ ನನಗೆ ಊಹಿಸಲು ಆಗುತ್ತಿಲ್ಲ ಎಂದು ಕೃತಿ ಹೇಳಿದ್ದಾರೆ.

Kriti Karabanda

ಲಾಕ್‍ಡೌನ್ ಸಮಯದಲ್ಲಿ ಒಟ್ಟಿಗೆ ಇರುವ ಕೃತಿ ಮತ್ತು ಪುಲ್ಕಿತ್ ಬಹಳ ಎಂಜಾಯ್ ಮಾಡುತ್ತಿದ್ದಾರೆ. ಮನೆಯಲ್ಲೇ ಕುಳಿತು ವಿಡಿಯೋ ಗೇಮ್ ಆಡುತ್ತಿದ್ದಾರೆ. ಗುರುವಾರ ಪುಲ್ಕಿತ್ ಸಾಮ್ರಾಟ್ ಇಬ್ಬರು ಜೊತೆಗೆ ಪಿಯಾನೋ ನುಡಿಸುತ್ತಿರುವ ಮತ್ತು ಜೊತೆಗೆ ಹಳೆಯ ಸಾಂಗ್ ಗಳಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ನಡುವೆ ಕೃತಿ ಇನ್‍ಸ್ಟಾಗ್ರಾಮ್ ಮೂಲಕ ಮಾಧ್ಯಮಗಳಿಗೆ ಸಂದರ್ಶನವನ್ನು ನೀಡುತ್ತಿರುತ್ತಾರೆ.

https://www.instagram.com/p/B-u3YMUhYoO/

ಈ ಹಿಂದೆ ಮಾಧ್ಯಮವೊಂದಕ್ಕೆ ಕೃತಿ ಇನ್‍ಸ್ಟಾ ಲೈವ್‍ನಲ್ಲಿ ಸಂದರ್ಶನ ನೀಡಿದ್ದರು. ಈ ವೇಳೆ ನಟ ಪುಲ್ಕಿತ್ ಸಾಮ್ರಾಟ್ ಅವರಿಗೆ ಈಗಲೇ ಮದುವೆಯಾಗಲು ಇಷ್ಟವಿಲ್ಲ. ನಾನು ಕೂಡ ಮದುವೆಗೆ ರೆಡಿಯಾಗಿಲ್ಲ. ಆತ ಇನ್ನೂ ಬಚ್ಚಾ. ಹಾಗಾಗಿ ಮದುವೆಯಾಗಲು ನಾವು ಈಗಲೇ ರೆಡಿ ಇಲ್ಲ. ಪುಲ್ಕಿತ್ ನನ್ನನ್ನು ಕೇರ್ ಮಾಡುವಂತೆ ಇದುವರೆಗೂ ಯಾರು ಮಾಡಿಲ್ಲ. ಲಾಕ್‍ಡೌನ್ ಆಗಿದ್ದು, ನಾವಿಬ್ಬರು ಒಟ್ಟಿಗೆ ಇದ್ದೇವೆ. ಈ ವೇಳೆ ಪುಲ್ಕಿತ್ ನನಗೆ ಮನೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದಿದ್ದರು.

pulkit kriti

ಕ್ಯೂಟ್ ಬೆಡಗಿ ಕೃತಿ `ಚಿರು’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿ ಗೂಗ್ಲಿ ಚಿತ್ರದ ಮೂಲಕ ಪ್ರಖ್ಯಾತಿ ಪಡೆದಿದ್ದಾರೆ. ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. `ಮಾಸ್ತಿಗುಡಿ’ ಚಿತ್ರದ ನಂತರ ಕೃತಿ ಬೇರೆ ಯಾವ ಕನ್ನಡ ಸಿನಿಮಾದಲ್ಲಿ ನಟಿಸಲಿಲ್ಲ. ಸದ್ಯ ಕೃತಿ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ಬಾಲಿವುಡ್‍ನಲ್ಲಿ 2019ರಿಂದ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *