ಮುಂಬೈ: ನನಗೂ ಅಮೀರ್ ಖಾನ್ ಅವರಿಗೂ ಆ ದೃಶ್ಯ ಮಾಡುವಾಗ ಸಾಕಾಗಿ ಹೋಗಿತ್ತು ಎಂದು ಬಾಲಿವುಡ್ನ 90ರ ದಶಕದ ಬೆಡಗಿ ಕರಿಷ್ಮಾ ಕಪೂರ್ ಅವರು ಹೇಳಿದ್ದಾರೆ.
1996ರಲ್ಲಿ ಕರಿಷ್ಮಾ ಕಪೂರ್ ಮತ್ತು ಅಮೀರ್ ಖಾನ್ ಅಭಿನಯದ ರಾಜಾ ಹಿಂದೂಸ್ತಾನಿ ಎಂಬ ಚಿತ್ರ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಕರಿಷ್ಮಾ ಮತ್ತು ಅಮಿರ್ ಖಾನ್ ಅವರ ಕೆಮಿಷ್ಟ್ರಿ ವರ್ಕ್ ಆಗಿತ್ತು. ಅದರಲ್ಲೂ ಚಿತ್ರದಲ್ಲಿ ಈ ಇಬ್ಬರ ಲಿಪ್ಲಾಕ್ ದೃಶ್ಯ ಸಖತ್ ಸದ್ದು ಮಾಡಿತ್ತು. ಈಗ ಇದೇ ದೃಶ್ಯದಲ್ಲಿ ನಮಗಿಬ್ಬರಿಗೂ ಅಭಿನಯಿಸುವುದರಲ್ಲಿ ಸಾಕಾಗಿ ಹೋಗಿತ್ತು ಎಂದು ಕಪೂರ್ ಹೇಳಿದ್ದಾರೆ.
Advertisement
Advertisement
ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಕರಿಷ್ಮಾ, ಅಂದು ರಾಜಾ ಹಿಂದೂಸ್ತಾನಿ ಚಿತ್ರದಲ್ಲಿ ಮೂಡಿಬಂದಿದ್ದ ಆ ಚುಂಬನದ ದೃಶ್ಯ ಸಖತ್ ಮೋಡಿ ಮಾಡಿತ್ತು. ಈಗ ಎಲ್ಲ ಸಿನಿಮಾಗಳಲ್ಲೂ ಲಿಪ್ಲಾಕ್ ಮಾಡುತ್ತಾರೆ. ಆದರೆ ಅಂದು ಕಿಸ್ಸಿಂಗ್ ಸೀನ್ಗಳು ಹೆಚ್ಚು ಬರುತ್ತಿರಲಿಲ್ಲ. ಆದರೆ ಆ ಚಿತ್ರದಲ್ಲಿ ನಾವು ಕಿಸ್ಸಿಂಗ್ ಸೀನ್ ಅಲ್ಲಿ ಅಭಿನಯಿಸಬೇಕಿತ್ತು. ಜನರು ಚಿತ್ರದಲ್ಲಿ ನೋಡಿದಷ್ಟು ಸುಲಭವಾಗಿ ಆ ದೃಶ್ಯವನ್ನು ನಾವು ಚಿತ್ರೀಕರಣ ಮಾಡಿರಲಿಲ್ಲ. ಆ ದೃಶ್ಯದಲ್ಲಿ ನಟಿಸಲು ನನಗೂ ಮತ್ತು ಅಮೀರ್ ಗೂ ಸಖತ್ ಕಷ್ಟವಾಗಿತ್ತು ಎಂದು ಹೇಳಿದ್ದಾರೆ.
Advertisement
Advertisement
ಈ ದೃಶ್ಯದ ಚಿತ್ರೀಕರಣವನ್ನು ನಾವು ಫೆಬ್ರವರಿ ತಿಂಗಳಲ್ಲಿ ಊಟಿಯಲ್ಲಿ ಮಾಡಿದ್ದೇವು. ಜೊತೆಗೆ ಈ ಒಂದು ದೃಶ್ಯವನ್ನು ಮೂರು ದಿನ ಶೂಟ್ ಮಾಡಿದ್ದೇವು. ನಾನು ಮತ್ತು ಅಮೀರ್ ಖಾನ್ ಈ ದೃಶ್ಯದ ಚಿತ್ರೀಕರಣ ಯಾವಾಗ ಮುಗಿಯುತ್ತೋ ಎಂದು ಸೆಟ್ನಲ್ಲಿ ಮಾತನಾಡಿಕೊಳ್ಳುತ್ತಿದ್ದೆವು. ಅಂದು ಊಟಿಯಲ್ಲಿ ಸಖತ್ ಚಳಿ ಅದರಲ್ಲೂ ನಮ್ಮಿಬ್ಬರ ಮೇಲೆ ತಣ್ಣೀರನ್ನು ಸುರಿಯಲಾಗಿತ್ತು. ಜೊತೆಗೆ ಗಾಳಿ ಬರಲೆಂದು ದೊಡ್ಡ ಫ್ಯಾನ್ ಕೂಡ ಹಾಕಿದ್ದರು. ಆ ಚಳಿಯಲ್ಲಿ ಸಿನಿಮಾ ಶೂಟ್ ಮಾಡುವುದು ತುಂಬಾ ಕಷ್ಟವಾಗುತ್ತಿತ್ತು ಎಂದು ಕರಿಷ್ಮಾ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
1996 ನವೆಂಬರ್ 15 ರಂದು ಬಿಡುಗಡೆಯಾಗಿದ್ದ ರಾಜಾ ಹಿಂದೂಸ್ತಾನಿ ಚಿತ್ರ ಬಾಲಿವುಡ್ ಚಿತ್ರರಂಗದಲ್ಲೇ ಸಖತ್ ಹಿಟ್ ಆಗಿತ್ತು. ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ಅಮಿರ್ ಖಾನ್ ಅದ್ಭುತವಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಕರಿಷ್ಮಾ ಕಪೂರ್ ಮತ್ತು ಅಮೀರ್ ಖಾನ್ ಅವರ ರೊಮ್ಯಾನ್ಸ್ ನೋಡಿದ್ದ ಪ್ರೇಕ್ಷಕ ಚಿತ್ರವನ್ನು ಒಪ್ಪಿ ಅಪ್ಪಿಕೊಂಡಿದ್ದ. ಈ ಚಿತ್ರ 2002ರಲ್ಲಿ ಕನ್ನಡಕ್ಕೆ ‘ನಾನು ನಾನೇ’ ಹೆಸರಿನಲ್ಲಿ ರೀಮೇಕ್ ಮಾಡಲಾಗಿತ್ತು ಇದರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿದ್ದರು.