ಮುಂಬೈ: ನ್ಯಾಯಾಧೀಶರ ಫೇಸ್‍ಬುಕ್ ಫೋಸ್ಟ್‌ಗೆ ಕಮೆಂಟ್ ಹಾಗೂ ಲೈಕ್ ಮಾಡಿದ್ರು ಅಂತಾ ವಕೀಲರೊಬ್ಬರು ವಾದಿಸುತ್ತಿದ್ದ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದ ಘಟನೆ ಬಾಂಬೆ ಹೈಕೋರ್ಟ್ ನಲ್ಲಿ ನಡೆದಿದೆ.
2018ರ ಏಪ್ರಿಲ್‍ನಿಂದ ಎರಡು ಕುಟುಂಬಗಳ ನಡುವೆ ಆಸ್ತಿ ವಿಚಾರಕ್ಕಾಗಿ ಕಲಹ ನಡೆದಿದ್ದು, ಪ್ರಕರಣದ ವಿಚಾರಣೆ ಸೆಷನ್ ಕೋರ್ಟ್ ನಲ್ಲಿ ನಡೆಯುತ್ತಿತ್ತು. ಇದರಲ್ಲಿ ಒಂದು ಪಕ್ಷದವರ ಪರವಾಗಿ ವಾದಿಸುತ್ತಿದ್ದ ವಕೀಲ ಅದೇ ಕುಟುಂಬದ ಸದಸ್ಯರಾಗಿದ್ದು, ತಾವು ವಾದಿಸುತ್ತಿರುವ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರ ಫೇಸ್‍ಬುಕ್ ಫೋಸ್ಟ್‌ವೊಂದಕ್ಕೆ ಲೈಕ್ ಹಾಗೂ ಕಮೆಂಟ್ ಮಾಡಿದ್ದರು.
Advertisement
ನಂತರ ಹೆಚ್ಚುವರಿ ಸೆಷನ್ ನ್ಯಾಯಾಧೀಶರು, ವಿಭಾಗೀಯ ಪೀಠವು ವಕೀಲರ ನಡತೆಯನ್ನು ಮುಖ್ಯ ನ್ಯಾಯಾಧೀಶರ ಗಮಕ್ಕೆ ತಂದಿದ್ದರು. ಹೀಗಾಗಿ ವಕೀಲರು ವೃತ್ತಿ ಅಶಿಸ್ತು ತೋರಿದ್ದಾರೆ ಎಂದು ಪ್ರಕರಣವನ್ನು ಮತ್ತೊಂದು ಕೋರ್ಟ್ ಗೆ ವರ್ಗಾಯಿಸಲಾಯಿತು.