ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲ. ಎಲ್ಲಿ ನೋಡಿದ್ರೂ ಅಕ್ರಮ ಸಂಬಂಧ. ಸೆಲೆಬ್ರಿಟಿಗಳಲ್ಲಿಯೇ ಹೆಚ್ಚಾಗಿ ಕಾಣಿಸುತ್ತಿದ್ದ ಇಂಥ ಸಂಬಂಧಗಳು ಜನಸಾಮಾನ್ಯರಲ್ಲಿಯೂ ಹೆಚ್ಚಾಗಿಬಿಟ್ಟಿವೆ. ಅದರಲ್ಲೂ ಇತ್ತೀಚೆಗೆ ದಾಂಪತ್ಯಕ್ಕೆ ಅರ್ಥವೇ ಇಲ್ಲ ಅನ್ನೋ ಸ್ಥಿತಿಗೆ ಬಂದಿದೆ. ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಮುಹೂರ್ತ ಇಡುವ, ಶಿಕ್ಷಕಿ ವಿದ್ಯಾರ್ಥಿಯೊಂದಿಗೆ ಸೆಕ್ಸ್ ಮಾಡಿದ್ಲು ಅನ್ನುವಂಥ ಸಂಗತಿಗಳು ಒಂದು ದಿನವನ್ನೂ ಬಿಟ್ಟಿರುತ್ತಿಲ್ಲ. ಇದರ ನಡುವೆ ಅಚ್ಚರಿ ವರದಿಯೊಂದು ಬೆಳಕಿಗೆ ಬಂದಿದೆ.
ಮ್ಯಾರೆಜ್ ಡೇಟಿಂಟ್ ಪ್ಲಾಟ್‌ಫಾರಂ ಆಗಿರುವ ಆಶ್ಲೇ ಮ್ಯಾಡಿಸನ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರ ಡೇಟಾವನ್ನ ಬಿಡುಗಡೆ ಮಾಡಿದೆ. ಈ ವೇದಿಕೆಯು ವಿವಾಹಿತ ಅಥವಾ ಸಂಬಂಧದಲ್ಲಿರುವ ಜನರಿಗೆ ಮತ್ತು ಅವರು ರಹಸ್ಯವಾಗಿ ಇನ್ನೊಬ್ಬ ವ್ಯಕ್ತಿಯನ್ನು ಡೇಟ್ ಮಾಡಲು ಬಯಸುವವರಿಗೆ ಇದೆ. ಮ್ಯಾಡಿಸನ್ ರ‍್ಯಾಂಕಿಗ್ ಪಟ್ಟಿಯಲ್ಲಿ ಯಾರೂ ಊಹಿಸದ ನಗರವೊಂದು ಮಹಾ ಮೋಸದ ನಗರವಾಗಿ ಗುರುತಿಸಿಕೊಂಡಿದೆ. ಅಲ್ಲದೇ ಅಕ್ರಮ ಸಂಬಂದದಲ್ಲೂ ಈ ನಗರ ಅಗ್ರಸ್ಥಾನಕ್ಕೇರಿದೆ. ಈ ವರದಿಯಲ್ಲಿ ಏನಿದೆ ಎಂಬುದನ್ನು ತಿಳಿಯುವುದಕ್ಕು ಮುನ್ನ ಅಕ್ರಮ ಸಂಬಂಧ ಎಂದರೇನು? ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಾಗಲು ಕಾರಣ ಏನು ಅನ್ನೋದನ್ನ ತಿಳಿಯೋಣ…

ಅಕ್ರಮ ಸಂಬಂಧ ಎಂದರೇನು?
ಅಕ್ರಮ ಸಂಬಂಧ ಅಂದ್ರೆ, ವಿವಾಹಿತರಾಗಿರುವಾಗ ತಮ್ಮ ಸಂಗಾತಿಯ ಹೊರತಾಗಿ ಬೇರೆಯವರೊಂದಿಗೆ ಲೈಂಗಿಕ ಅಥವಾ ಭಾವನಾತ್ಮಕ ಸಂಬಂಧ ಹೊಂದುವುದು. ಇದನ್ನ ಸಾಮಾನ್ಯವಾಗಿ ವ್ಯಭಿಚಾರ ಅಥವಾ ವಿವಾಹೇತರ ಸಂಬಂಧವೆಂದೂ ಕರೆಯಲಾಗುತ್ತದೆ. ಇದು ಕಾನೂನುಬಾಹಿರ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲದ ಸಂಬಂಧವಾಗಿದೆ.
ಅಕ್ರಮ ಸಂಬಂಧಗಳಿಗೆ ಕಾರಣಗಳೇನು?
* ಸಂಗಾತಿಗಳ ನಡುವೆ ಲೈಂಗಿಕ ತೃಪ್ತಿ ಅಥವಾ ಭಾವನಾತ್ಮಕ ಬೆಂಬಲದ ಕೊರತೆಯು ವಿವಾಹೇತರ ಸಂಬಂಧಗಳಿಗೆ ಕಾರಣವಾಗಬಹುದು.
* ಬಾಲ್ಯದಲ್ಲಿನ ಕೆಟ್ಟ ಅನುಭವಗಳು ಸಹ ವಯಸ್ಕರ ಜೀವನದಲ್ಲಿ ಅಕ್ರಮ ಸಂಬಂಧಗಳಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸಿವೆ.
* ಕೆಲ ಸಂದರ್ಭಗಳಲ್ಲಿ, ಸಾಮಾಜಿಕ ಒತ್ತಡಗಳು ಅಥವಾ ಆಕರ್ಷಣೆಗಳು ಅಕ್ರಮ ಸಂಬಂಧಗಳಿಗೆ ಕಾರಣವಾಗಬಹುದು.
* ಸಂಗಾತಿಗಳ ನಡುವೆ ನಂಬಿಕೆ ಮತ್ತು ಗೌರವದ ಕೊರತೆಯು ಅಕ್ರಮ ಸಂಬಂಧಗಳಿಗೆ ಕಾರಣವಾಗಬಹುದು.

ಅಕ್ರಮ ಸಂಬಂಧಗಳನ್ನು ತಪ್ಪಿಸಲು ಏನು ಮಾಡಬೇಕು?
* ಸಂಗಾತಿಗಳ ನಡುವೆ ನಂಬಿಕೆ ಮತ್ತು ಪರಸ್ಪರ ಗೌರವವನ್ನು ಬೆಳೆಸಿಕೊಳ್ಳುವುದು ಮುಖ್ಯ.
* ಸಂಗಾತಿಯೊಂದಿಗೆ ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಸಂವಹನ ನಡೆಸುವುದು ಮುಖ್ಯ.
* ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಸಂಬಂಧವನ್ನ ಬಲಪಡಿಸುತ್ತದೆ.
* ಯಾವುದೇ ಸಮಸ್ಯೆಗಳಿದ್ದರೂ ಒಟ್ಟಿಗೆ ಕುಳಿತು ಚರ್ಚಿಸಿ ಪರಿಹರಿಸಿಕೊಳ್ಳುವುದು ಮುಖ್ಯ.
ತಮಿಳುನಾಡಿನ ಈ ನಗರವೇ ಟಾಪ್
ಆಶ್ಲೇ ಮ್ಯಾಡಿಸನ್ ರ‍್ಯಾಂಕಿಂಗ್ ಪ್ರಕಾರ, ರೇಷ್ಮೆ ಸೀರೆಗಳು ಮತ್ತು ಸಾಂಪ್ರದಾಯಿಕ ದೇವಾಲಯಗಳಿಗೆ ಹೆಸರುವಾಸಿಯಾದ ತಮಿಳುನಾಡಿನ ಕಾಂಚೀಪುರಂ ಜೂನ್ 2025ರ ದತ್ತಾಂಶದ ಪ್ರಕಾರ, ಮೋಸದ ನಗರವೆಂದು ಗುರುತಿಸಿಕೊಂಡಿದೆ. ಅಕ್ರಮ ಸಂಬಂಧದ ವಿಷಯಕ್ಕೆ ಬರುವುದಾದ್ರೆ, ಈ ಹಿಂದೆ 17ನೇ ಸ್ಥಾನದಲ್ಲಿದ್ದ ಕಾಂಚೀಪುರಂ ಈಗ ಮುಂಬೈ, ದೆಹಲಿ, ಪುಣೆಯಂತಹ ನಗರಗಳನ್ನ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.
ಬೆಂಗಳೂರಿಗೆ ಎಷ್ಟನೇ ಸ್ಥಾನ?
ಅಕ್ರಮ ಸಂಬಂಧ ಹೆಚ್ಚು ಅನುಸರಿಸುತ್ತಿರುವ ಟಾಪ್ 20 ನಗರಗಳ ಪಟ್ಟಿಯಲ್ಲಿ ಐಟಿ ಸಿಟಿ ಬೆಂಗಳೂರು 9ನೇ ಸ್ಥಾನದಲ್ಲಿದೆ. ಟಾಪ್ 20 ನಗರಗಳಲ್ಲಿ ಕಾಂಚೀಪುರಂ, ಮಧ್ಯ ದೆಹಲಿ, ಗುರಗಾಂವ್, ನೋಯ್ಡಾ, ನೈಋತ್ಯ ದೆಹಲಿ, ಡೆಹ್ರಾಡೂನ್, ಪೂರ್ವ ದೆಹಲಿ, ಪುಣೆ ಬಳಿಕ ಬೆಂಗಳೂರು ಇದೆ. ಉಳಿದಂತೆ ದಕ್ಷಿಣ ದೆಹಲಿ, ಚಂಡೀಗಢ, ಲಕ್ನೋ, ಕೋಲ್ಕತ್ತಾ, ಪಶ್ಚಿಮ ದೆಹಲಿ, ಕಾಮರೂಪ, ವಾಯುವ್ಯ ದೆಹಲಿ, ರಾಯ್‌ಗಾರ್ಡ್, ಹೈದರಾಬಾದ್, ಗಾಜಿಯಾಬಾದ್ ಮತ್ತು ಜೈಪುರ.
ಕಾನೂನು ಹೇಳುವುದೇನು?
ಅನೈತಿಕ ಸಂಬಂಧ ಇನ್ನು ಕ್ರಿಮಿನಲ್ ಅಪರಾಧವಲ್ಲ. ಸೆಕ್ಷನ್ 497 ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ 2015ರ ಸೆಪ್ಟೆಂಬರ್ 27ರಂದು ಮಹತ್ವದ ತೀರ್ಪು ನೀಡಿತ್ತು. ಅಂದು ಸಿಜೆಐ ಆಗಿದ್ದ ದೀಪಕ್ ಮಿಶ್ರಾ ನೇತೃತ್ವದ ಪೀಠ ಈ ತೀರ್ಪು ನೀಡಿತ್ತು. ಮಹಿಳೆಯರನ್ನು ಸಮಾನವಾಗಿ ಗೌರವಿಸಬೇಕು. ಗಂಡ ಹೆಂಡತಿಗೆ ಮಾಲೀಕನಲ್ಲ. ಮಹಿಳೆ, ಪುರುಷ ಇಬ್ಬರೂ ಸಮಾನರು. ಮಹಿಳೆಯರನ್ನು ಸಮಾನವಾಗಿ ಗೌರವಿಸಬೇಕು ಎಂದು ಹೇಳಿತ್ತು. ಈ ಮೂಲಕ 150 ವರ್ಷಗಳ ಹಳೆಯ ಕಾನೂನನ್ನು ಅಸಾಂವಿಧಾನಿಕ ಎಂದಿದೆ ಕೋರ್ಟ್. ಆದ್ರೆ ಹಿಂದೂ ವಿವಾಹ ಕಾಯ್ದೆ, 1955, ವಿಶೇಷ ವಿವಾಹ ಕಾಯ್ದೆ, 1954 ಮತ್ತು ಭಾರತೀಯ ವಿಚ್ಛೇದನ ಕಾಯ್ದೆ, 1869 (ಕ್ರೈಸ್ತರಿಗೆ) ನಂತಹ ಕಾನೂನುಗಳ ಅಡಿಯಲ್ಲಿ ಅಕ್ರಮ ಸಂಬಂಧವನ್ನು ದುಷ್ಕೃತ್ಯ ಎಂದು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಮುಸ್ಲಿಂ ಕಾನೂನಿನಡಿಯಲ್ಲಿಯೂ ಸಹ ತಲಾಖ್‌ಗೆ (ವಿಚ್ಛೇದನ) ಕಾರಣವಾಗುವ ದುಷ್ಕೃತ್ಯ ಎಂದು ಪರಿಗಣಿಸಲಾಗುತ್ತದೆ.
ಸೆಕ್ಷನ್ 497 ಹೇಳುವುದೇನು?
ಮಹಿಳೆಯು ಇನ್ನೊಬ್ಬ ವ್ಯಕ್ತಿಯ ಪತ್ನಿ ಎಂದು ಗೊತ್ತಿದ್ದೂ, ಆತನ ಒಪ್ಪಿಗೆ ಇಲ್ಲದೆಯೇ ಆಕೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದರೆ ಅದು ಅತ್ಯಾಚಾರ ಎಂದು ಪರಿಗಣಿತವಾಗುವುದಿಲ್ಲ. ಬದಲಾಗಿ, ಸಂಬಂಧ ಹೊಂದಿದ ವ್ಯಕ್ತಿಯನ್ನು ವ್ಯಭಿಚಾರದ ಅಪರಾಧಿ ಎಂದು ಪರಿಗಣಿಸಲಾಗುತ್ತದೆ.