ಮುಂಬೈ: ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಸಂಘಟಿತ ಆಟವಾಡಿದ ಮುಂಬೈ ಇಂಡಿಯನ್ಸ್ (Mumbai Indians) ಹೈದರಾಬಾದ್ ಸನ್ ರೈಸರ್ಸ್ (Sunrisers Hyderabad) ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 5 ವಿಕೆಟ್ ನಷ್ಟಕ್ಕೆ 162 ರನ್ ಹೊಡೆಯಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಮುಂಬೈ 18.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 166 ರನ್ ಹೊಡೆಯುವ ಮೂಲಕ ಗೆಲುವು ಸಾಧಿಸಿತು.
ಸತತ ಎರಡು ಪಂದ್ಯಗಳನ್ನು ಗೆದ್ದ ಮುಂಬೈ 6 ಅಂಕದೊಂದಿಗೆ 7ನೇ ಸ್ಥಾನದಲ್ಲೇ ಮುಂದುವರಿದರೆ ಸನ್ ರೈಸರ್ಸ್ 4 ಅಂಕದೊಂದಿಗೆ 9ನೇ ಸ್ಥಾನದಲ್ಲೇ ಮುಂದುವರಿದಿದೆ.
ಮುಂಬೈ ಪರ ಆರಂಭಿಕ ಬ್ಯಾಟ್ಸ್‌ಮೆನ್‌ಗಳಾದ ರಿಯಾನ್ ರಿಕೆಲ್ಟನ್ 23 ಬಾಲ್‌ಗೆ 31 ರನ್ ಬಾರಿಸಿದರು. ರೋಹಿತ್ ಶರ್ಮಾ 26(16), ವಿಲ್ ಜಾಕ್ಸ್ 36(26) ಹಾಗೂ ಸೂರ್ಯ ಕುಮಾರ್ ಯಾದವ್ 26(15) ರನ್ ಹೊಡೆದು ಔಟಾದರು.
ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) 9 ಬಾಲ್ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ನಲ್ಲಿದ್ದ ತಿಲಕ್ ವರ್ಮಾ ರನ್‌ಗಳಿಸಿ ಅಜೇಯರಾಗಿ ಉಳಿದರು. ಹೈದರಾಬಾದ್ ಬೌಲರ್ ಪ್ಯಾಟ್ ಕಮಿನ್ಸ್ 3 ವಿಕೆಟ್ ಹಾಗೂ ಇಶನ್ ಮಲಿಂಗ 2 ವಿಕೆಟ್ ಕಬಳಿಸಿದರು. ಹರ್ಷಲ್ ಪಟೇಲ್ 1 ವಿಕೆಟ್ ಕಿತ್ತರು.
ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಉತ್ತಮ ಆರಂಭ ಪಡೆದಿತ್ತು. ಆರಂಭಿಕ ಬ್ಯಾಟ್ಸ್‌ಮೆನ್‌ಗಳಾದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಜೋಡಿ 45 ಎಸೆತಗಳಲ್ಲಿ 59 ರನ್ ಜೊತೆಯಾಟವಾಡಿದರು.
ಸಾಲು ಸಾಲು ಜೀವದಾನಗಳನ್ನು ಪಡೆದ ಅಭಿಷೇಕ್ ಶರ್ಮಾ 40 ರನ್ ಗಳಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಇದೇ ಮೈದಾನದಲ್ಲಿ ಸೆಂಚುರಿ ಹೊಡೆದ ಇಶಾನ್ ಕಿಶನ್ ಕೇವಲ 2 ರನ್ ಗಳಿಸಿ ಔಟಾದರು. ಟ್ರಾವಿಸ್ ಹೆಡ್ 29 ಎಸೆತಗಳಲ್ಲಿ 28 ರನ್ ಹೊಡೆದು ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗಳಿದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ 1 ಬೌಂಡರಿಯೊಂದಿಗೆ 19 ರನ್ ಸಿಡಿಸಿ ಔಟ್ ಆದರು.
ಪವರ್ ಪ್ಲೇ ಬಳಿಕ ರನ್ ಗಳಿಸಲು ಪರದಾಡಿದ ಹೈದರಾಬಾದ್ ತಂಡ ಡೆತ್ ಓವರ್‌ನಲ್ಲಿ ತನ್ನ ಬ್ಯಾಟಿಂಗ್‌ನಲ್ಲಿ ಕಮಾಲ್ ಮಾಡಿತು. 18ನೇ ಓವರ್‌ನಲ್ಲಿ ಹ್ಯಾನ್ರಿಕ್ ಕ್ಲಾಸೇನ್ ಆರ್ಭಟಕ್ಕೆ ಮುಂಬೈ ಬೌಲರ್ ಸುಸ್ತಾದರು. ಈ ಓವರ್‌ನಲ್ಲಿ ಹೆನ್ರಿಕ್ ಕ್ಲಾಸೆನ್ 2ಸಿಕ್ಸರ್, 2 ಬೌಂಡರಿ ಸೇರಿ 21 ರನ್ ಬಾರಿಸಿ ಅಬ್ಬರಿಸಿದರು.
37 ರನ್(28 ಎಸೆತ, 3 ಬೌಂಡರಿ, 2 ಸಿಕ್ಸ್) ಹೊಡೆದ ಕ್ಲಾಸೆನ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು.ಅನಿಕೇತ್ ವರ್ಮಾ ಅಜೇಯ 18 ರನ್, ಪ್ಯಾಟ್ ಕಮ್ಮಿನ್ಸ್ 8 ರನ್ ಬಾರಿಸಿ ಅಜೇಯರಾಗಿ ಉಳಿದರು. ಕೊನೆಯ ಓವರ್‌ನಲ್ಲಿ ಎಸ್‌ಆರ್‌ಹೆಚ್ ತಂಡ 22 ರನ್ ಹೊಡೆದಿತ್ತು.
ಮುಂಬೈ ತಂಡದ ಪರ ವಿಲ್ ಜಾಕ್ಸ್ 3 ಓವರ್ ಬೌಲ್ ಮಾಡಿ 14 ರನ್ ನೀಡಿ 2 ವಿಕೆಟ್ ಕಬಳಿಸಿದರು. ಉಳಿದಂತೆ ಹಾರ್ದಿಕ್ ಪಾಂಡ್ಯ, ಟ್ರೆಂಟ್ ಬೌಲ್ಟ್, ಜಸ್ಪ್ರಿತ್ ಬುಮ್ರಾ ತಲಾ ಒಂದು ವಿಕೆಟ್ ಕಿತ್ತರು.