ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸತತ ಎರಡನೇ ಸೋಲು ಅನುಭವಿಸಿತು. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ತಂಡ 7 ವಿಕೆಟ್‌ಗಳಿಗೆ ಗೆದ್ದು ಬೀಗಿತು. ತವರಿನಲ್ಲಿ ಬೆಂಗಳೂರು ತಂಡದ ಗೆಲುವಿನ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮುಂಬೈ ತಂಡ ಆರಂಭದಲ್ಲೇ ಉತ್ತಮ ಆಟವಾಡಿತು. ಅಮೆಲಿಯಾ ಕೆರ್ ಉತ್ತಮ ಬ್ಯಾಟಿಂಗ್ (40) ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು. ಯಷ್ಟಿಕಾ ಭಾಟಿಯಾ 31 ರನ್, ಹೆಯಲಿ ಮ್ಯಾಥ್ಯೂಸ್ 26, ನಥಾಲಿ ಶಿವರ್ ಬ್ರಂಟ್ 27 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು. ಇದನ್ನೂ ಓದಿ: RCB – MI ಹೈವೋಲ್ಟೇಜ್ ಕದನ; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಬ್ ಸ್ಕ್ವಾಡ್ ತೀವ್ರ ತಪಾಸಣೆ
Advertisement
Advertisement
ಶಿಸ್ತಿನ ಬೌಲಿಂಗ್, ಚುರುಕಾದ ಕ್ಷೇತ್ರರಕ್ಷಣೆ ಮತ್ತು ಯೋಜಿತ ಬ್ಯಾಟಿಂಗ್ ಪ್ರದರ್ಶನದಿಂದ ಮುಂಬೈ ತಂಡವು ಬೆಂಗಳೂರು ತಂಡದ ವಿರುದ್ಧ ಗೆಲುವು ದಾಖಲಿಸಿತು.
Advertisement
ಬೆಂಗಳೂರು ತಂಡವು ಮೊದಲ ಪವರ್‌ಪ್ಲೇನಲ್ಲಿಯೇ 3 ವಿಕೆಟ್ ಕಳೆದುಕೊಂಡು (31 ರನ್ ಗಳಿಸಿತ್ತು) ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಎಲಿಸ್ ಪೆರಿ ತಂಡಕ್ಕೆ ಆಸರೆಯಾದರು. ಔಟಾಗದೇ 44 ರನ್ ಸಿಡಿಸಿ ಗಮನ ಸೆಳೆದಿದ್ದರು. ಪೆರಿಗೆ ಜಾರ್ಜಿಯಾ ವೆರ್ಹಾಮ್ (27 ರನ್) ಉತ್ತಮ ಬೆಂಬಲ ನೀಡಿದರು. ಈ ಜೋಡಿ 7ನೇ ವಿಕೆಟ್‌ಗೆ 52 ರನ್‌ಗಳ ಜೊತೆಯಾಟವಾಡಿತು. ಇದನ್ನೂ ಓದಿ: ಗ್ರೇಸ್ ಹ್ಯಾರಿಸ್ ಸ್ಫೋಟಕ ಅರ್ಧಶತಕ – ಯುಪಿಗೆ 6 ವಿಕೆಟ್‌ಗಳ ಭರ್ಜರಿ ಜಯ
Advertisement
ಕಳೆದ 2 ಪಂದ್ಯಗಳಲ್ಲಿ ಮಿಂಚಿದ್ದ ಸ್ಮೃತಿ ಮಂಧಾನ ಈ ಮ್ಯಾಚ್‌ನಲ್ಲಿ ಕೇವಲ 9 ರನ್‌ಗೆ ವಿಕೆಟ್ ಕೈಚೆಲ್ಲಿದರು. ಸೋಫಿ ಡಿವೈನ್ 9, ಸಬ್ಬಿನೇನಿ ಮೇಘನಾ 11 ರನ್ ಗಳಿಸಿ ಕೈಕೊಟ್ಟರು. ಉಳಿದಂತೆ ರಿಚಾ ಘೋಷ್ 7, ಸೋಫಿ ಮೊಲಿನೆಕ್ಸ್ 12, ಶ್ರೇಯಾಂಕಾ ಪಾಟೀಲ್ 7 ರನ್ ಗಳಿಸಲಷ್ಟೇ ಶಕ್ತರಾದರು. ಕೊನೆಗೆ 6 ವಿಕೆಟ್ ನಷ್ಟಕ್ಕೆ ಆರ್‌ಸಿಬಿ 131 ಸಾಧಾರಣ ಮೊತ್ತ ದಾಖಲಿಸಿತು. 132 ರನ್ ಗುರಿ ಬೆನ್ನತ್ತಿದ ಮುಂಬೈ ತಂಡ 15 ಓವರ್ ಇರುವಾಗಲೇ 133 ರನ್ ಗಳಿಸಿ 7 ವಿಕೆಟ್‌ಗಳ ಜಯಭೇರಿ ಬಾರಿಸಿತು.
ಮುಂಬೈ ಉತ್ತಮ ಬೌಲಿಂಗ್
ಮುಂಬೈ ಇಂಡಿಯನ್ಸ್ ತಂಡದ ಪರ ಬೌಲರ್‌ಗಳು ಉತ್ತಮ ಬೌಲಿಂಗ್ ಪ್ರದರ್ಶನ ತೋರಿದರು. ನ್ಯಾಟ್ ಸ್ಕಿವರ್-ಬ್ರಂಟ್, ಪೂಜಾ ವಸ್ತ್ರಕರ್ ತಲಾ 2 ವಿಕೆಟ್, ಇಸ್ಸಿ ವಾಂಗ್, ಸೈಕಾ ಇಶಾಕ್ ತಲಾ 1 ವಿಕೆಟ್ ಪಡೆದರು. ಇದನ್ನೂ ಓದಿ: ಗುರುದಾಸ್‌ಪುರದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ: ಯುವರಾಜ್ ಸಿಂಗ್ ಸ್ಪಷ್ಟನೆ