Cricket

55 ರನ್‌ಗಳಿಗೆ 8 ವಿಕೆಟ್‌ ಪತನ – ಮುಂಬೈಗೆ 8 ವಿಕೆಟ್‌ಗಳ ಭರ್ಜರಿ ಜಯ

Published

on

Share this

ಶಾರ್ಜಾ: ರಾಜಸ್ಥಾನ ರಾಯಲ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್‌ ತಂಡದ ಪ್ಲೇ ಆಫ್‌ ಕನಸು ಜೀವಂತವಾಗಿದೆ.

ನಥನ್‌ ಕೌಂಟರ್‌ ನೈಲ್‌, ಜೇಮ್ಸ್‌ ನೀಶನ್‌, ಬುಮ್ರಾ ಬೌಲಿಂಗ್‌ಗೆ ತತ್ತರಿಸಿದ ರಾಜಸ್ಥಾನ 9 ವಿಕೆಟ್‌ ನಷ್ಟಕ್ಕೆ 90 ರನ್‌ ಗಳಿಸಿತು. ಸುಲಭದ ಸವಾಲನ್ನು ಎದುರಿಸಿದ ಮುಂಬೈ 8.2 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 94 ರನ್‌ ಹೊಡೆದು ಜಯ ಸಾಧಿಸಿತು.

ಪ್ರಸ್ತುತ ಅಂಕಪಟ್ಟಿಯಲ್ಲಿ 13 ಪಂದ್ಯಗಳಿಂದ 12 ಅಂಕ ಪಡೆದಿರುವ ಮುಂಬೈ 7ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ. ರಾಜಸ್ಥಾನ 10 ಅಂಕದೊಂದಿಗೆ 6ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಾರಿದೆ.

ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ ಮೊದಲ ವಿಕೆಟಿಗೆ 27 ರನ್‌ ಗಳಿಸಿತ್ತು. ನಂತರ 8 ವಿಕೆಟ್‌ಗಳು 55 ರನ್‌ ಅಂತರದಲ್ಲಿ ಪತನಗೊಂಡ ಪರಿಣಾಮ ಸೋಲನ್ನು ಒಪ್ಪಿಕೊಂಡಿದೆ.

ಕೌಂಟರ್‌ ನೈಲ್‌ 14 ರನ್‌ ನೀಡಿ 4 ವಿಕೆಟ್‌ ಪಡೆದರೆ, ಜೇಮ್ಸ್‌ ನಿಶಮ್‌ 3, ಬುಮ್ರಾ 2 ವಿಕೆಟ್‌ ಪಡೆದರು. ಈ ಪಂದ್ಯಕ್ಕೂ ಮುನ್ನ ಮುಂಬೈ ನೆಟ್‌ ರನ್‌ ರೇಟ್‌ -0.453 ಇದ್ದರೆ ಈಗ ಇದು -0.048ಕ್ಕೇ ಏರಿದೆ.

ಮುಂಬೈ ಪರ ರೋಹಿತ್‌ ಶರ್ಮಾ ಸ್ಫೋಟಕ ಆರಂಭ ನೀಡಿದರು. 13 ಎಸೆತಗಳಲ್ಲಿ 2 ಸಿಕ್ಸರ್‌, 1 ಬೌಂಡರಿಯೊಂದಿಗೆ 22 ರನ್‌ ಚಚ್ಚಿ ಔಟಾದರು. ಈಶನ್‌ ಕಿಶನ್‌ ಔಟಾಗದೇ 50 ರನ್‌(25 ಎಸೆತ, 5 ಬೌಂಡರಿ, 3 ಸಿಕ್ಸರ್‌) ಹೊಡೆದರು. ಇದನ್ನೂ ಓದಿ: ಭಾರತ, ಪಾಕಿಸ್ತಾನ ಟಿ20 – ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್ 

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications