ಮುಂಬೈ: ಚೊಚ್ಚಲ ಪಂದ್ಯವಾಡಿದ ಅಶ್ವನಿ ಕುಮಾರ್ (Ashwani Kumar) ಅವರ ಮಾರಕ ಬೌಲಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ (Mumbai Indians) ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ (Kolkata Knight Riders) 16.2 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಮುಂಬೈ 12.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 121 ರನ್ ಹೊಡೆದು ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿತು. ಇದನ್ನೂ ಓದಿ: ಮುಂಬೈ ಪ್ಲೇಯಿಂಗ್ ಇಲೆವೆನ್‌ನಲ್ಲಿ ರೋಹಿತ್‌ಗೆ ಇಲ್ಲ ಸ್ಥಾನ
Debut straight out of a storybook 📖
The perfect first chapter for Ashwani Kumar 👌👌
Updates ▶ https://t.co/iEwchzDRNM#TATAIPL | #MIvKKR | @mipaltan pic.twitter.com/npaynbIViX
— IndianPremierLeague (@IPL) March 31, 2025
ಈ ಸೋಲಿನೊಂದಿಗೆ 6ನೇ ಸ್ಥಾನದಲ್ಲಿದ್ದ ಕೋಲ್ಕತ್ತಾ 10ನೇ ಸ್ಥಾನಕ್ಕೆ ಜಾರಿದರೆ, ಕೊನೆಯ ಸ್ಥಾನದಲ್ಲಿದ್ದ ಮುಂಬೈ ಉತ್ತಮ ನೆಟ್ ರನ್ ರೇಟ್‌ನಿಂದ 6ನೇ ಸ್ಥಾನಕ್ಕೆ ಜಿಗಿದಿದೆ.
ಸುಲಭ ಸವಾಲನ್ನು ಬೆನ್ನಟ್ಟಿದ ಮುಂಬೈ 13 ರನ್ ಗಳಿಸಿದ ರೋಹಿತ್ ವಿಕೆಟ್ ಆರಂಭದಲ್ಲೇ ಕಳೆದುಕೊಂಡರೂ ರಯಾನ್ ರಿಕಲ್ಟನ್ ಔಟಾಗದೇ 62 ರನ್(41 ಎಸೆತ, 4 ಬೌಂಡರಿ, 5 ಸಿಕ್ಸ್), ವಿಲ್ ಜಾಕ್ಸ್ 16 ರನ್, ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ 27 ರನ್(9 ಎಸೆತ, 3 ಬೌಂಡರಿ, 2 ಸಿಕ್ಸ್) ನೆರವಿನಿಂದ ಜಯಗಳಿಸಿತು. ಇದನ್ನೂ ಓದಿ: ಐಪಿಎಲ್‌ನಿಂದ ಬ್ಯಾನ್ ಮಾಡಿ – ರಿಯಾನ್ ಪರಾಗ್ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
𝗦𝘂𝗿𝘆𝗮𝗸𝘂𝗺𝗮𝗿 𝗦𝗽𝗲𝗰𝗶𝗮𝗹 😎
Trademark way to get off the mark ✅@mipaltan cruising in the chase 🛳️
Updates ▶ https://t.co/iEwchzEpDk#TATAIPL | #MIvKKR | @surya_14kumar pic.twitter.com/Ag46xegPOW
— IndianPremierLeague (@IPL) March 31, 2025
ಕೋಲ್ಕತ್ತಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿತ್ತು. 74 ರನ್‌ಗಳಿಸುವಷ್ಟರಲ್ಲೇ 6 ಪ್ರಮುಖ ವಿಕೆಟ್ ಕಳೆದುಕೊಂಡಿತ್ತು. ಇಂಪ್ಯಾಕ್ಟ್ ಪ್ಲೇಯರ್ ರಘುವಂಶಿ 26 ರನ್, ರಮನ್‌ದೀಪ್ ಸಿಂಗ್ 22 ರನ್ ಹೊಡೆದು ಔಟಾದರು.
ಐಪಿಎಲ್ ಪಾದಾರ್ಪಣೆ ಮಾಡಿದ ಅಶ್ವನಿ ಕುಮಾರ್ 3 ಓವರ್ ಎಸೆದು 4 ವಿಕೆಟ್ ಕಿತ್ತು ಕೋಲ್ಕತ್ತಕ್ಕೆ ದೊಡ್ಡ ಹೊಡೆತ ನೀಡಿದರು. ದೀಪಕ್ ಚಹರ್ 2 ವಿಕೆಟ್ ಕಿತ್ತರೆ ಬೌಲ್ಟ್, ದೀಪಕ್ ಚಹರ್, ಪಾಂಡ್ಯ, ವಿಘ್ನೇಶ್ ಪುತೂರ್, ಸ್ಯಾಂಟ್ನರ್ ತಲಾ ಒಂದೊಂದು ವಿಕೆಟ್ ಪಡೆದರು.