ಮುಂಬೈ: ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್ (WPL) ಟೂರ್ನಿಗಾಗಿ ಮುಂಬೈ ಇಂಡಿಯನ್ಸ್ (Mumbai Indians) ಫ್ರಾಂಚೈಸಿ ತಮ್ಮ ಜೆರ್ಸಿಯನ್ನು (Jersey) ಶನಿವಾರ ಅನಾವರಣಗೊಳಿಸಿದೆ.
????- here’s to sun, the sea, the blue-and-gold of Mumbai. Here’s to our first-ever #WPL jersey and all she brings. ????#OneFamily #MumbaiIndians #AaliRe pic.twitter.com/mOmNg0d9hO
— Mumbai Indians (@mipaltan) February 25, 2023
ಮುಂಬೈ ಇಂಡಿಯನ್ಸ್ ತಂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಜೆರ್ಸಿಯ ಚಿತ್ರವನ್ನು ಹಂಚಿಕೊಂಡಿದೆ. ಮಾರ್ಚ್ 4ರಿಂದ ಡಬ್ಲ್ಯೂಪಿಎಲ್ ಚೊಚ್ಚಲ ಆವೃತ್ತಿ ಆರಂಭವಾಗಲಿದ್ದು, ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ನೇತೃತ್ವದ ಮುಂಬೈ ಇಂಡಿಯನ್ಸ್ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಸೆಣಸಲಿದೆ.
ಮುಂಬೈ ಇಂಡಿಯನ್ಸ್‌ಗೆ ಚಾರ್ಲೊಟ್ ಎಡ್ವರ್ಡ್ಸ್ ಮುಖ್ಯ ಕೋಚ್, ಜೂಲನ್ ಗೋಸ್ವಾಮಿ ಬೌಲಿಂಗ್ ಕೋಚ್, ದೇವಿಕಾ ಪಾಲ್ಶಿಕಾರ್ ಬ್ಯಾಟಿಂಗ್ ಕೋಚ್ ಆಗಿ ನಿಯೋಜನೆಗೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಪುರುಷರ ಐಪಿಎಲ್ ಮಾದರಿಯಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಸಹ ಆರಂಭಗೊಳ್ಳುತ್ತಿದ್ದು, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ಫ್ರಾಂಚೈಸಿಗಳು ಕಾದಾಡಲಿವೆ. ಇದನ್ನೂ ಓದಿ: RCB ನಾಯಕಿಯಾಗಿ ಸ್ಮೃತಿ ಮಂದಾನ ಆಯ್ಕೆ – ಕೊಹ್ಲಿ ವಿಶೇಷ ಸಂದೇಶ ಏನು?
ಇತ್ತೀಚೆಗೆ ನಡೆದ ಹರಾಜಿನಲ್ಲಿ ಭಾರತದ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂದಾನ (Smriti Mandhana) 3.40 ಕೋಟಿ ರೂ. ದುಬಾರಿ ಮೊತ್ತಕ್ಕೆ ಆರ್‌ಸಿಬಿ ತಂಡಕ್ಕೆ ಹರಾಜಾದರೆ, ಮುಂಬೈ ಇಂಡಿಯನ್ಸ್ ತಂಡ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರನ್ನ 1.80 ಕೋಟಿ ರೂ.ಗೆ ಖರೀದಿ ಮಾಡಿದೆ. ಇದನ್ನೂ ಓದಿ: WPL Auction 2023ː ದುಬಾರಿ ಬೆಲೆಗೆ RCB ಪಾಲಾದ ಸ್ಮೃತಿ ಮಂದಾನ – ಯಾವ ತಂಡದಲ್ಲಿ ಯಾರಿದ್ದಾರೆ?
ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಒಟ್ಟು 20 ಲೀಗ್ ಪಂದ್ಯಗಳು ಹಾಗೂ 2 ಪ್ಲೇ ಆಫ್ ಪಂದ್ಯಗಳನ್ನ 23 ದಿನಗಳ ಅವಧಿಯಲ್ಲಿ ಆಡಲಾಗುತ್ತದೆ. ಮಾರ್ಚ್ 26 ರಂದು ಫೈನಲ್ ಪಂದ್ಯವು ಬ್ರಬೋನ್ ಸ್ಟೇಡಿಯಂನಲ್ಲಿ ನಡೆಯಲಿದೆ.