ಮುಂಬೈ: ಟೀಂ ಇಂಡಿಯಾದ (Team India) ಖ್ಯಾತ ಆಲ್‌ರೌಂಡರ್, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಎಲ್ಲಿದ್ದಾರೆ ಎಂಬ ಪ್ರಶ್ನೆ ಈಗ ಜೋರಾಗಿ ಚರ್ಚೆ ಆಗುತ್ತಿದೆ.
ಟೀಂ ಇಂಡಿಯಾದ ಮೊದಲ ಬ್ಯಾಚ್ ಈಗಾಗಲೇ ಅಮೆರಿಕದ ವಿಮಾನವನ್ನು ಹತ್ತಿದೆ. ಈ ವಿಮಾನವನ್ನು ಹಾರ್ದಿಕ್ ಪಾಂಡ್ಯ ಹತ್ತಬೇಕಿತ್ತು. ಆದರೆ ಈ ಬ್ಯಾಚ್‌ನಲ್ಲಿ ಹಾರ್ದಿಕ್ ಪಾಂಡ್ಯ ಕಾಣಿಸದ ಕಾರಣ ಎಲ್ಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.
Advertisement
Advertisement
ಸರ್ಬಿಯಾ ಮೂಲದ ಮಾಡೆಲ್, ನಟಿ ನತಾಶಾ ಸ್ಟಾಂಕೋವಿಕ್ (Natasa Stankovic) ಡೈವೋರ್ಸ್ ವರದಿ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಎಲ್ಲಿಯೂ ಕಾಣಿಸುತ್ತಿಲ್ಲ.
Advertisement
ಮುಂಬೈ ಇಂಡಿಯನ್ಸ್ (Mumbai Indians) ತಂಡ ಲೀಗ್‌ನಲ್ಲೇ ಐಪಿಎಲ್‌ನಿಂದ (IPL) ಹೊರ ಬಿದ್ದ ಕಾರಣ ಬಿಸಿಸಿಐ (BCCI) ನಿಯಮದ ಪ್ರಕಾರ ಮೊದಲ ಬ್ಯಾಚ್‌ನಲ್ಲಿ ಹಾರ್ದಿಕ್ ಪಾಂಡ್ಯ ಅಮೆರಿಕದ ನ್ಯೂಯಾರ್ಕ್‌ಗೆ ತೆರಳಬೇಕಿತ್ತು. ಮಂಬೈ ಇಂಡಿಯನ್ಸ್ ಆಟಗಾರರಾರದ ರೋಹಿತ್ ಶರ್ಮಾ (Rohit Sharma), ಜಸ್‌ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಅವರು ಈಗಾಗಲೇ ತೆರಳಿದ್ದಾರೆ.
Advertisement
ಪಾಂಡ್ಯ ಗೈರು ಹಾಜರಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೊದಲನೇಯದಾಗಿ ಪಾಂಡ್ಯ ಕೇವಲ ಆಟಗಾರ ಮಾತ್ರವಲ್ಲ ಅವರು ಉಪನಾಯಕನಾಗಿದ್ದಾರೆ. ಹೀಗಾಗಿ ನಾಯಕ ರೋಹಿತ್ ಶರ್ಮಾ, ಕೋಚ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಜೊತೆ ಪ್ರಯಾಣ ಬೆಳೆಸಬೇಕಿತ್ತು. ಇದನ್ನೂ ಓದಿ: Divorce Rumours: ಪತ್ನಿ ನತಾಶಾಗೆ ವಿಚ್ಛೇದನ ನೀಡಿದ್ರೆ 70% ಕರಗಲಿದೆ ಪಾಂಡ್ಯ ಸಂಪತ್ತು!
ಎರಡನೇಯದ್ದಾಗಿ ನತಾಶಾ ಸ್ಟಾಂಕೋವಿಕ್ ಡೈವೋರ್ಸ್ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆ ಆಗುತ್ತಿದೆ. ಈ ಪೈಕಿ ಪಾಂಡ್ಯ ಅವರ ಆಸ್ತಿಯ 70% ಪಾಲನ್ನು ನತಾಶಾಗೆ ನೀಡಬೇಕು ಎಂಬ ವಿಚಾರ ಹರಿದಾಡುತ್ತಿದೆ. ಈ ಮಧ್ಯೆ ನತಾಶಾ ಅವರು ಇನ್‌ಸ್ಟಾದಲ್ಲಿ “ಯಾರೋ ಒಬ್ಬರು ಬೀದಿಗೆ ಬರಲಿದ್ದಾರೆ” ಎಂದು ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಈ ಕಾರಣಕ್ಕೆ ಪಾಂಡ್ಯ ಗೈರು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹಾರ್ದಿಕ್ ಪಾಂಡ್ಯ ಗೈರಿನ ಬಗ್ಗೆ ಬಿಸಿಸಿಐ ಆಗಲಿ ಅಥವಾ ಹಾರ್ದಿಕ್ ಪಾಂಡ್ಯ ಇಲ್ಲಿಯವರೆಗೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.