ಮುಂಬೈ: ಅಪರಿಚಿತ ವ್ಯಕ್ತಿಯೊಬ್ಬ ಮುಂಬೈನ ಲಲಿತ್ ಹೋಟೆಲ್ (5ಸ್ಟಾರ್ ಹೋಟೆಲ್)ಗೆ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ್ದು, ನಿಷ್ಕ್ರಿಯಗೊಳಿಸಲು 5 ಕೋಟಿ ರೂ. ಬೇಡಿಕೆ ಇಟ್ಟಿದ್ದಾನೆ.
ಅಪರಿಚಿತ ವ್ಯಕ್ತಿಯೊಬ್ಬ ಹೋಟೆಲ್ ಅವರಿಗೆ ಕರೆ ಮಾಡಿ, ಲಲಿತ್ ಹೋಟೆಲ್‍ನ 4 ಕಡೆ ಬಾಂಬ್‍ಗಳನ್ನು ಇಡಲಾಗಿದೆ. ಇದನ್ನು ನಿಷ್ಕ್ರಿಯಗೊಳಿಸಬೇಕಾದರೆ 5 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಿದ್ದಾನೆ. ಘಟನೆ ಸಂಬಂಧಿಸಿ ಸಹಾರ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ 5 ದಿನಗಳಲ್ಲಿ ನಡೆದ ಇದು 3ನೇ ಘಟನೆಯಾಗಿದೆ.
Advertisement
A bomb threat call was received at a prominent hotel in Mumbai. An unidentified person called the hotel and said that bombs have been kept at four places in the hotel and demanded Rs 5 crore to defuse them. Case registered at Sahar PS u/s 336, 507 of IPC: Mumbai Police
— ANI (@ANI) August 23, 2022
Advertisement
ಇತ್ತೀಚೆಗಷ್ಟೇ ಪಾಕಿಸ್ತಾನಿ ಸಂಖ್ಯೆಯಿಂದ 26/11ರ ಮುಂಬೈ ತಾಜ್ ಹೋಟೆಲ್ ಮೇಲೆ ದಾಳಿ ಮಾದರಿ ರೀತಿಯೇ ಭಯೋತ್ಪಾದಕ ದಾಳಿಯ ನಡೆಸುವುದಾಗಿ ನಗರ ಪೊಲೀಸರಿಗೆ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು 3 ತಂಡಗಳನ್ನು ರಚಿಸಿ ತನಿಖೆ ಕಾರ್ಯದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಹಬ್ಬಕ್ಕೂ ಮುನ್ನ ಎಕೆ 47 ಒಳಗೊಂಡ ದೋಣಿ ಪತ್ತೆ – ಮಹಾರಾಷ್ಟ್ರದಲ್ಲಿ ಹೈ ಅಲರ್ಟ್
Advertisement
Advertisement
ಮತ್ತೊಂದು ಘಟನೆಯಲ್ಲಿ ರಾಯಗಢದ ಹರಿಹರೇಶ್ವರ ಬೀಚ್ ಬಳಿ ಬೋಟ್ ಪತ್ತೆ ಆಗಿತ್ತು. ಅದರಲ್ಲಿ ಅನೇಕ ಮದ್ದುಗುಂಡುಗಳು ಹಾಗೂ 3 ಎಕೆ 47 ರೈಫೆಲ್‍ಗಳಿದ್ದವು. ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆ ಪ್ರದೇಶವನ್ನು ಹೈಅಲರ್ಟ್ ಎಂದು ಘೋಷಿಸಿದ್ದರು. ಇದನ್ನೂ ಓದಿ: ಬಿಜೆಪಿ ಮುಖಂಡನ ಮನೆಗೆ ನುಗ್ಗಿದ ಖದೀಮರು – ವೃದ್ಧೆ ಹಣೆಗೆ ಗನ್ ಇಟ್ಟ ದುಷ್ಕರ್ಮಿ