– ಪಟ್ಟಿಯಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಹೆಸರು
ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರಿಗಿಂತ ಜಾಸ್ತಿ ಗೂಗಲ್‍ನಲ್ಲಿ ಬಾಲಿವುಡ್‍ನ ಹಾಟ್ ಬೆಡಗಿಯರಾದ ಪ್ರಿಯಾಂಕ ಚೋಪ್ರಾ ಮತ್ತು ಸನ್ನಿ ಲಿಯೋನ್ ಅವರನ್ನು ಸರ್ಚ್ ಮಾಡಲಾಗಿದೆ.
ಭಾರತದಲ್ಲಿ ಗೂಗಲ್‍ನಲ್ಲಿ ಯಾರು ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳು ಎಂಬ ಪಟ್ಟಿಯನ್ನು ಎಸ್‍ಇಎಂ ರಶ್ ಸ್ಟಡಿ (ಗ್ಲೋಬಲ್ ಡಾಟಾ ವಿಶ್ಲೇಷಣಾ ಸಂಸ್ಥೆ) ಬಿಡುಗಡೆ ಮಾಡಿದೆ. ಇದರ ಪ್ರಕಾರ ಈ ವರ್ಷ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಪೈಕಿ ಪ್ರಿಯಾಂಕ ಚೋಪ್ರಾ ನಂಬರ್ ಒನ್ ಸ್ಥಾನದಲ್ಲಿ ಇದ್ದಾರೆ. ನಂತರ ಎರಡನೇ ಸ್ಥಾನದಲ್ಲಿ ಸನ್ನಿ ಲಿಯೋನ್ ಇದ್ದಾರೆ.
Advertisement
Advertisement
ಕಳೆದ ಕೆಲ ವರ್ಷದಿಂದಲೂ ಸನ್ನಿ ಲಿಯೋನ್ ಅವರು ಗೂಗಲ್‍ನಲ್ಲಿ ಹೆಚ್ಚು ಹುಡುಕಲ್ಪಟ್ಟ ತಾರೆಯಾಗಿ ಗುರುತಿಸಿಕೊಂಡಿದ್ದರು. ಆದರೆ ಈ ಬಾರಿ ಮಾತ್ರ ಗ್ಲೋಬಲ್ ಸ್ಟಾರ್ ಆಗಿರುವ ಪ್ರಿಯಾಂಕ ಚೋಪ್ರಾ ಅವರು ಈ ಪಟ್ಟಿಯಲ್ಲಿ ನಂಬರ್ ಒನ್ ಆಗಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಹಿಂದಕ್ಕಿದ್ದಾರೆ. ಈ ಬಾರಿ ಸ್ವಲ್ಪ ಕಡಿಮೆ ಸರ್ಚ್ ಆಗಿರುವ ಸನ್ನಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
Advertisement
Advertisement
ಬಾಲಿವುಡ್‍ನಲ್ಲಿ ರಾಣಿಯಾಗಿ ಮೆರೆದು ಈಗ ಹಾಲಿವುಡ್‍ನಲ್ಲೂ ನಟಿಸಿ ಸೈ ಅನಿಸಿಕೊಂಡಿರುವ ಪ್ರಿಯಾಂಕ ಕಳೆದ ವರ್ಷ ಮದುವೆಯಾಗಿದ್ದರು. ಅವರ ಮದುವೆಯ ಸುದ್ದಿ ಸಖತ್ ವೈರಲ್ ಆಗಿತ್ತು ಈ ಕಾರಣದಿಂದ ಅವರನ್ನು ಹೆಚ್ಚು ಸರ್ಚ್ ಮಾಡಲಾಗಿದೆ ಎಂದು ಹೇಳಲಾಗಿದೆ. ಪ್ರಿಯಾಂಕ ಚೋಪ್ರಾ ಅವರನ್ನು ಈ ವರ್ಷ ಸುಮಾರು 39 ಲಕ್ಷ ಬಾರಿ ಗೂಗಲ್‍ನಲ್ಲಿ ಸರ್ಚ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರಿಯಾಂಕ ನಂತರ ಎರಡನೇ ಸ್ಥಾನದಲ್ಲಿರುವ ಸನ್ನಿ ಕಳೆದ ಕೆಲ ವರ್ಷಗಳಿಂದ ಈ ಪಟ್ಟಿಯಲ್ಲಿ ಟಾಪ್‍ನಲ್ಲಿ ಇದ್ದರು. ಪಡ್ಡೆ ಹುಡುಗರ ಹಾಟ್ ಫೇವರೆಟ್ ಸನ್ನಿಯನ್ನು ಅವರ ಅಭಿಮಾನಿಗಳು ಗೂಗಲ್‍ನಲ್ಲಿ ಬಹಳ ಸರ್ಚ್ ಮಾಡುತ್ತಿರುತ್ತಾರೆ. ಅಂತೆಯೇ ಈ ಬಾರಿ ಕೂಡ ಅವರನ್ನು ಸುಮಾರು 31 ಲಕ್ಷ ಬಾರಿ ಹುಡುಕಿದ್ದಾರೆ. ಆದರೆ ಇವರಗಿಂತ ಹೆಚ್ಚು ಪ್ರಿಯಾಂಕ ಅವರನ್ನು ಸರ್ಚ್ ಮಾಡಿದ್ದು, ಸನ್ನಿ ಲಿಯೋನ್ ಅವರು ಒಂದು ಸ್ಥಾನ ಕೆಳಗೆ ಇಳಿದಿದ್ದಾರೆ.
ಈ ಇಬ್ಬರನ್ನು ಬಿಟ್ಟರೆ ಸಲ್ಮಾನ್ ಖಾನ್ ಅವರು ಮೂರನೇ ಸ್ಥಾನದಲ್ಲಿ ಇದ್ದು, ಇವರನ್ನು 21 ಲಕ್ಷ ಬಾರಿ ಗೂಗಲ್‍ನಲ್ಲಿ ಹುಡುಕಲಾಗಿದೆ. ನಂತರ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಅವರನ್ನು 20 ಲಕ್ಷ ಬಾರಿ ಸರ್ಚ್ ಮಾಡಲಾಗಿದೆ. ಇವರನ್ನು ಬಿಟ್ಟರೆ ಪುರಷರ ಪೈಕಿ ಈ ಪಟ್ಟಿಯಲ್ಲಿ, ರೋಹಿತ್ ಶರ್ಮಾ, ಅಲ್ಲು ಅರ್ಜುನ್, ಶಾರುಖ್ ಖಾನ್, ಟೈಗರ್ ಶ್ರಾಫ್, ವಿಜಯ್ ದೇವರಕೊಂಡ, ಎಂ.ಎಸ್.ಧೋನಿ, ಮತ್ತು ಮಹೇಶ್ ಬಾಬು ಇದ್ದಾರೆ.
ಸನ್ನಿ ಮತ್ತು ಪ್ರಿಯಾಂಕ ಅವರನ್ನು ಬಿಟ್ಟರೆ ಮಹಿಳೆಯರ ಪೈಕಿ ಕತ್ರಿನಾ ಕೈಫ್ ಅವರನ್ನು ಹೆಚ್ಚು ಸರ್ಚ್ ಮಾಡಲಾಗಿದೆ. ಇವರನ್ನು 19 ಲಕ್ಷ ಬಾರಿ ಸರ್ಚ್ ಮಾಡಲಾಗಿದೆ. ಈ ಮೂವರನ್ನು ಬಿಟ್ಟರೆ ನಟಿಯರಾದ ದೀಪಿಕಾ ಪಡುಕೋಣೆ, ಆಲಿಯಾ ಭಟ್, ದಿಶಾ ಪಟಾನಿ, ಸಾರಾ ಅಲಿ ಖಾನ್, ಕರೀನಾ ಕಪೂರ್ ಖಾನ್, ಶ್ರದ್ಧಾ ಕಪೂರ್, ಮತ್ತು ರಶ್ಮಿಕಾ ಮಂದಣ್ಣ ಇದ್ದಾರೆ.