ಮುಂಬೈ: ಡ್ರಗ್ಸ್ ಪ್ರಕರಣ ಸಂಬಂಧ ಜೈಲುವಾಸಿಯಾಗಿರುವ ಆರ್ಯನ್ ಖಾನ್ ಆರೋಗ್ಯದ ಬಗ್ಗೆ ಎನ್‍ಸಿಬಿ ಅಧಿಕಾರಿಗಳ ಬಳಿ ವಿಚಾರಿಸುತ್ತಾ ಕಿಂಗ್ ಖಾನ್ ದಂಪತಿ ರಾತ್ರಿಯಿಡೀ ನಿದ್ದೆಗೆಟ್ಟು ಕುಳಿತಿದ್ದಾರೆ.
Advertisement
ಹೌದು. ಆರ್ಯನ್ ಜೈಲು ಸೇರಿದಾಗಿನಿಂದ ಶಾರೂಖ್ ಮನಸ್ಸಲ್ಲಿ ತಳಮಳ ಶುರುವಾಗಿದೆ. ಮಗ ಜೈಲಿನಲ್ಲಿ ಹೇಗೆ ದಿನಗಳನ್ನು ಕಳೆಯುತ್ತಿದ್ದಾನೋ ಎಂಬ ಚಿಂತೆ ಆರ್ಯನ್ ಪೋಷಕರಿಗೆ ಶುರುವಾಗಿದೆ. ಹೀಗಾಗಿ ದಂಪತಿ ಮಗನ ಬಗ್ಗೆ ಯೋಚನೆ ಮಾಡುತ್ತಾ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಊಟ- ತಿಂಡಿಯೂ ಇಲ್ಲದಾಗಿದೆ. ಅಲ್ಲದೆ ಪದೇ ಪದೇ ಎನ್‍ಸಿಬಿ ಅಧಿಕಾರಿಗಳಿಗೆ ಕರೆ ಮಾಡಿ ಮಗನ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾರೆ ಎಂದು ಎಸ್‍ಆರ್ ಕೆ ಆಪ್ತರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ – ಇನ್ನೆರಡು ದಿನ ಜೈಲೇ ಗತಿ
Advertisement
Advertisement
ಅಕ್ಟೋಬರ್ 3 ರಂದು ಡ್ರಗ್ಸ್ ಪ್ರಕರಣ ಸಂಬಂಧ ಆರ್ಯನ್ ಖಾನ್ ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಆರ್ಯನ್ ಖಾನ್ ಬಂಧನದ ಬಳಿಕ ಶಾರುಖ್ ಖಾನ್ ಮತ್ತು ಗೌರಿ ಖಾನ್ ತುಂಬಾ ಬೇಸರಗೊಂಡಿದ್ದಾರೆ. ಈ ಪ್ರಕರಣ ಇಷ್ಟೊಂದು ದೊಡ್ಡದಾಗುತ್ತೆ ಎಂದು ಅವರು ಅಂದುಕೊಂಡಿರಲಿಲ್ಲವಂತೆ. ಅಲ್ಲದೆ ಇದೀಗ ಹೇಗಾದರೂ ಮಾಡಿ ಮಗನನ್ನು ಹೊಗಡೆ ಕರೆತರಬೇಕೆಂದು ಶಾರೂಖ್ ದಂಪತಿ ಒದ್ದಾಡುತ್ತಿದ್ದಾರೆ. ಒಟ್ಟಿನಲ್ಲಿ ಪೋಷಕರು ತಮ್ಮ ಮಗನಿಗಾಗಿ ಹಂಬಲಿಸುತ್ತಿದ್ದಾರೆ. ಇದನ್ನೂ ಓದಿ: ಮಗ ಇಲ್ಲದೇ ಹುಟ್ಟುಹಬ್ಬ ಆಚರಿಸಲ್ಲ: ಶಾರೂಖ್ ಪತ್ನಿ ಗೌರಿ ಖಾನ್
Advertisement
ನಿನ್ನೆ ಆರ್ಯನ್ ಖಾನ್ ಮತ್ತು ಇತರರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸುವುದಾಗಿ ಮುಂಬೈ ಸೆಷನ್ಸ್ ಕೋರ್ಟ್ ಹೇಳಿದೆ. ಬುಧವಾರ ಮಧ್ಯಾಹ್ನದ ಬಳಿಕ ಸುದೀರ್ಘ ವಿಚಾರಣೆ ನಡೆಯಲಿದೆ. ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡ ಬಳಿಕ ಸೆಷನ್ಸ್ ಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. ಹೀಗಾಗಿ ನಿನ್ನೆ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ವಿ.ವಿ ಪಾಟೀಲ್ ತನಿಖಾ ವರದಿ ಸಲ್ಲಿಸಲು ಎನ್‍ಸಿಬಿ(NCB) ಕಾಲಾವಕಾಶ ಕೇಳಿದ ಹಿನ್ನೆಲೆ ವಿಚಾರಣೆ ಮುಂದೂಡಿತು. ಇದನ್ನೂ ಓದಿ: ಶಾರೂಖ್ ಮಗನ ಅರೆಸ್ಟ್ ಹಿಂದೆ ಬಿಜೆಪಿ ಉಪಾಧ್ಯಕ್ಷ – NCB ಅಧಿಕಾರಿಗಳಿಂದ್ಲೇ ಪಿತೂರಿ ಆರೋಪ