ನಾಯಿಗೆ ನ್ಯಾಯ ಕೊಡಿಸುವ ಸಮಯ ಬಂದಿದೆ – ಅನುಷ್ಕಾ ಶರ್ಮಾ

Public TV
1 Min Read
anushka sharma

ಮುಂಬೈ: ಕಳೆದ ಕೆಲ ದಿನಗಳಿಂದ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದೆ. ಈ ಮಳೆಯಿಂದ ಆಶ್ರಯ ಪಡೆಯಲು ಬೀದಿ ನಾಯಿಯೊಂದು ಫ್ಲ್ಯಾಟ್ ಒಳಗೆ ಬಂದಿದೆ ಎನ್ನುವ ಕಾರಣಕ್ಕೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಾರಣಾಂತಿಕವಾಗಿ ನಾಯಿಯನ್ನು ಥಳಿಸಿರುವ ಘಟನೆ ಮುಂಬೈನ ವರ್ಲಿಯಲ್ಲಿ ನಡೆದಿದೆ.

ಥಳಿತದಿಂದ ನಾಯಿಯ ತಲೆ ಮತ್ತು ಹೊಟ್ಟೆಗೆ ತೀವ್ರವಾದ ಗಾಯಗಳಾಗಿದ್ದು, ನಾಯಿ ಈಗ ಕೋಮಾ ಸ್ಥಿತಿಗೆ ತಲುಪಿದೆ. ನಾಯಿಯನ್ನು ಥಳಿಸುತ್ತಿರುವ ಕೃತ್ಯ ಫ್ಲ್ಯಾಟಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಘಟನೆಯನ್ನು ಹಲವಾರು ಬಾಲಿವುಡ್ ನಟಿಯರು ಖಂಡಿಸಿದ್ದಾರೆ.

https://www.instagram.com/p/B0eQnm9pDuF/

ಈ ಘಟನೆ ಜುಲೈ 24 ರಂದು ಟರ್ಫ್ ವ್ಯೂ ಕಟ್ಟಡದಲ್ಲಿ ನಡೆದಿದೆ. ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದವರು ನಾಯಿ ಫ್ಲ್ಯಾಟಿನ ಒಳಗೆ ಬಂದಾಗ ಬೇರೆ ಯಾವ ಪ್ರಾಣಿಯೂ ಮತ್ತೆ ಕಟ್ಟಡದ ಒಳಗೇ ಬಾರದ ರೀತಿಯಲ್ಲಿ ನಾಯಿಗೆ ಹೊಡೆಯುವಂತೆ ಹೇಳಿದ್ದಾರೆ. ಅವರ ಮಾತಿನಂತೆ ವಾಚ್‍ಮ್ಯಾನ್ ನಾಯಿಗೆ ಮನಬಂದಂತೆ ಥಳಿಸಿದ್ದಾನೆ.

ಶ್ವಾನಕ್ಕೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಜುಲೈ 27 ರಂದು ಮುಂಬೈ ಪ್ರಾಣಿ ದಯಾ ಸಂಘಟನೆಯ ಸದಸ್ಯರು ನಾಯಿಯನ್ನು ಥಳಿಸಿದ ಇಬ್ಬರ ವಿರುದ್ಧ ವರ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ.

sonam kapor

ಇದನ್ನು ಖಂಡಿಸಿ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿರುವ ಪ್ರಾಣಿ ಪ್ರೇಮಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಈ ಅಮಾನವೀಯ ಕೃತ್ಯವನ್ನು ನಮಗೆ ನಂಬಲಸಾಧ್ಯ. ಈಗ ಈ ನಾಯಿಗೆ ನ್ಯಾಯ ಕೊಡಿಸುವ ಸಮಯ ಬಂದಿದೆ ಎಂದು ಬರೆದುಕೊಂಡಿದ್ದಾರೆ.

ಅನುಷ್ಕಾ ಶರ್ಮಾ ಅವರ ಜೊತೆಗೆ ಬಾಲಿವುಡ್ ನಟಿ ಸೋನಮ್ ಕಪೂರ್ ಸಹ ನಡೆದಿರುವ ಈ ಅಮಾನವೀಯ ಘಟನೆಯನ್ನು ಖಂಡಿಸಿದ್ದಾರೆ. ಈ ಘೋರ ಕೃತ್ಯಕ್ಕೆ ಹಲವಾರು ಬಾಲಿವುಡ್ ಚಿತ್ರರಂಗದವರು ದುಃಖ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *