ವಾಷಿಂಗ್ಟನ್: ಅಮೆರಿಕದ ವೇದಿಕೆಯಲ್ಲಿ ಮುಂಬೈ ಡ್ಯಾನ್ಸ್ ತಂಡದ ಡ್ಯಾನ್ಸ್ ನೋಡಿ ತೀರ್ಪುಗಾರರು ಫುಲ್ ಫಿದಾ ಆಗಿ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದಾರೆ.
ಅಮೆರಿಕದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ “ಅಮೆರಿಕ ಗಾಟ್ ಟ್ಯಾಲೆಂಟ್” ನಲ್ಲಿ ಮುಂಬೈ ‘ವಿ. ಅನ್‍ಬೀಟಬಲ್’ ಟೀಂ ಭಾಗವಹಿಸಿತ್ತು. ಈ ಶೋನಲ್ಲಿ ವಿ. ಅನ್‍ಬೀಟಬಲ್ ತಂಡ ನೃತ್ಯ ಪ್ರದರ್ಶಿಸಿದ್ದು, ಈ ತಂಡದ ನೃತ್ಯ ನೋಡಿ ತೀರ್ಪುಗಾರರಾದ ಗೇಬ್ರಿಲ್ ಯೂನಿಯನ್, ಹೌವಿ ಮ್ಯಾಂಡೆಲ್, ಜುಲಿಯನ್ ಹಗ್ ಮತ್ತು ಸೈಮನ್ ಕೋವೆಲ್ ಫಿದಾ ಆಗಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.
ವಿ. ಅನ್‍ಬೀಟಬಲ್ ತಂಡ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೊಣೆ ನಟಿಸಿದ ‘ಬಾಜಿರಾವ್ ಮಸ್ತಾನಿ’ ಚಿತ್ರದ ‘ಮಲ್ಹಾರಿ’ ಚಿತ್ರಕ್ಕೆ ಡ್ಯಾನ್ಸ್ ಮಾಡಿದ್ದಾರೆ. ಈ ತಂಡದಲ್ಲಿ ಒಟ್ಟು 28 ಮಂದಿ ಇದ್ದು, 12ರಿಂದ 27 ವಯಸ್ಸಿನವರು ಇದ್ದಾರೆ. ನೃತ್ಯ ಶುರು ಮಾಡುವ ಮೊದಲು ತಂಡ ‘ಗಣಪತಿ ಬಪ್ಪಾ ಮೋರಿಯಾ’ ಎಂದು ಹೇಳಿದ್ದಾರೆ. ಈ ತಂಡ ಡ್ಯಾನ್ಸ್ ಶುರು ಮಾಡಿದ ನಂತರ ಇವರ ಫ್ಲಿಪ್ಸ್ ಹಾಗೂ ಡ್ಯಾನ್ಸ್ ಮೂವ್ಸ್ ಗೆ ತೀರ್ಪುಗಾರರು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಈ ಡ್ಯಾನ್ಸ್ ವಿಡಿಯೋವನ್ನು ಅಮೆರಿಕ ಗಾಟ್ ಟ್ಯಾಲೆಂಟ್ ತಮ್ಮ ಅಧಿಕೃತ ಫೇಸ್‍ಬುಕ್ ಹಾಗೂ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಡ್ಯಾನ್ಸ್ ವಿಡಿಯೋ ನೋಡಿದ ಜನರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ.