ಮುಂಬೈ: ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಮೂವರು ಮಕ್ಕಳ ಮುಂದೆಯೇ ಚಾಕುವಿನಿಂದ ಇರಿದು ಕೊಂದಿರುವ ಮನಕಲಕುವ ಘಟನೆ ಮುಂಬೈನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಸರೋಜ್ ಯಾದವ್ ಕೊಲೆಯಾದ ಮಹಿಳೆ. ಸರೋಜ್ ಯಾದವ್ ಬೇರೊಬ್ಬ ಅಕ್ರಮ ಸಂಬಂಧ ಹೊಂದಿದ್ದರಿಂದ ಕುಪಿತಗೊಂಡ ಪತಿ ಅಜಯ್ ದೇವ್ (35) ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬೆಳಗ್ಗೆ ಮಕ್ಕಳು ತಮ್ಮ ಅಜ್ಜನ ಮುಂದೆ ತಾಯಿಯ ಕೊಲೆ ವಿಷಯ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ತುಲಿನ್ಜ್ ಪೊಲೀಸರು ಆರೋಪಿ ಅಜಯ್ ಯಾದವ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೂಲತಃ ನಾಲಸೋಪರಾ ನಿವಾಸಿಯಾಗಿರುವ ನಗರದಲ್ಲಿ ಆಟೋ ಡ್ರೈವರ್ ನಾಗಿ ಕೆಲಸ ಮಾಡಿಕೊಂಡಿದ್ದನು.
Advertisement
Advertisement
ರಾತ್ರಿ ಮಕ್ಕಳು ನೋಡಿದ್ದೇನು?:
ಅಜಯ್ ಮತ್ತು ಸರೋಜ್ ದಂಪತಿಗೆ ಒಟ್ಟು ಮೂರು ಮಕ್ಕಳು. ಶುಕ್ರವಾರ ಮಧ್ಯರಾತ್ರಿ ತಾಯಿಯ ಕಿರುಚಾಟ ಕೇಳಿಸಿಕೊಂಡ 8 ವರ್ಷದ ಮತ್ತು 7 ವರ್ಷದ ಮಕ್ಕಳಿಬ್ಬರು ಎಚ್ಚರಗೊಂಡಿದ್ದಾರೆ. ಮಕ್ಕಳು ನೇರವಾಗಿ ಮನೆಯ ಕೋಣೆಯೊಂದರಲ್ಲಿ ತಾಯಿ ಮೇಲೆ ತಂದೆ ಚಾಕುವಿನಿಂದ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ನೋಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಒಂದೂವರೆ ವರ್ಷದ ಮಗು ಸಹ ಈ ಭೀಕರ ಘಟನೆಗೆ ಸಾಕ್ಷಿಯಾಗಿದೆ. ತಂದೆ ನಮ್ಮ ತಾಯಿಯ ಕುತ್ತಿಗೆಯನ್ನು ಚಾಕುವಿನಿಂದ ಸೀಳುತ್ತಿದ್ದ ಎಂದು ಮಗು ಪೊಲೀಸರಿಗೆ ತಿಳಿಸಿದೆ.
Advertisement
Advertisement
ಪತ್ನಿಯನ್ನು ಕೊಲೆ ಮಾಡಿದ ಬಳಿಕ ಅಜಯ್, ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಚಿಂಚಾವತಿಯಲ್ಲಿರುವ ತನ್ನ ತಂದೆಯ ಮನೆಗೆ ಮಕ್ಕಳೊಂದಿಗೆ ತೆರಳಿದ್ದಾನೆ. ಈ ವೇಳೆ ಮಕ್ಕಳು ಅಜ್ಜ ರಾಮ್ ಯಾದವ್ ಬಳಿ ತಾಯಿಯ ಕೊಲೆಯ ವಿಷಯವನ್ನು ತಿಳಿಸಿದ್ದಾರೆ. ಮಕ್ಕಳು ಈ ಘಟನೆಯಿಂದ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದಾರೆ. ಮಕ್ಕಳನ್ನು ಸಂಭಾಳಿಸುವುದು ಕಷ್ಟವಾಗುತ್ತಿದೆ ಎಂದು ರಾಮ್ ಯಾದವ್ ಹೇಳಿದ್ದಾರೆ. ಮೊಮ್ಮಕಳಿಂದ ವಿಷಯ ತಿಳಿದ ಅಜ್ಜ ರಾಮ್‍ಯಾದವ್ ಮನೆಗೆ ತೆರಳಿದಾಗ ಸೊಸೆ ಸರೋಜ್ ದೇಹ ರಕ್ತದ ಮಡುವಿನಲ್ಲಿಯ ಬೆಡ್ ಶೀಟ್‍ನಲ್ಲಿ ಸುತ್ತಿದ ಸ್ಥಿತಿಯಲ್ಲಿ ನೋಡಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಹೇಳಲಾಗಿದೆ.
ಅಕ್ರಮ ಸಂಬಂಧ: ತನ್ನ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಹಿನ್ನೆಲೆಯಲ್ಲಿ ನಮ್ಮಿಬ್ಬರ ನಡುವೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು. ನಮ್ಮಿಬ್ಬರ ಜಗಳ ವಿಕೋಪಕ್ಕೆ ತಿರುಗಿದಾಗ ಆಕೆಯನ್ನು ಮನಸೋ ಇಚ್ಚೆ ಥಳಿಸಿದ್ದೇನೆ ಎಂದು ಅಜಯ್ ಪೊಲೀಸ್ ವಿಚಾರಣೆ ತಿಳಿಸಿದ್ದಾನೆ ಎಂದು ತುಲನ್ಜ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಂಜತ್ ಬಾರ್ವೆ ಹೇಳಿದ್ದಾರೆ.
A Nalasopara auto driver stabbed his wife to death in front of their three children@Khanmidday https://t.co/FdSD4gvYBf
— Mid Day (@mid_day) August 5, 2017