ಕೊರೊನಾ ಸೋಂಕಿನಿಂದ ಮೃತಪಟ್ಟ ಹೆಣಗಳ ನಡುವೆ ರೋಗಿಗಳಿಗೆ ಚಿಕಿತ್ಸೆ

Public TV
2 Min Read
hospital

– ಹೆಣಗಳನ್ನು ಇಡಲು ಜಾಗವಿಲ್ಲದೇ ವಾರ್ಡಿನಲ್ಲೇ ಇಟ್ಟಿರುವ ಸಿಬ್ಬಂದಿ

ಮುಂಬೈ: ಕೊರೊನಾ ಸೋಂಕಿನಿಂದ ಮೃತಪಟ್ಟವರ ಬಾಡಿಗಳನ್ನು ವಾರ್ಡಿನಲ್ಲೇ ಇಟ್ಟುಕೊಂಡು ಅದರ ಪಕ್ಕದಲ್ಲೇ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಶಾಕಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ಮುಂಬೈನ ಸಿಯಾನ್ ಆಸ್ಪತ್ರೆಯದ್ದು ಎಂದು ತಿಳಿದು ಬಂದಿದೆ. ಯಾರೋ ಮೊಬೈಲ್ ವಿಡಿಯೋದಲ್ಲಿ ಶೂಟ್ ಮಾಡಿರುವ ಈ ವಿಡಿಯೋದಲ್ಲಿ ಕೊರೊನಾದಿಂದ ಸತ್ತ ಶವಗಳನ್ನು ಕಪ್ಪು ಬಣ್ಣದ ಪ್ಲಾಸ್ಟಿಕ್ ನಿಂದ ಸುತ್ತಿ ಬೆಡ್ ಮೇಲೆ ಮಲಗಿಸಲಾಗಿದೆ. ಇದರ ಪಕ್ಕದಲ್ಲೇ ಬೇರೆ ರೋಗಿಗಳಿಗೆ ಚಿಕತ್ಸೆ ನೀಡಲಾಗುತ್ತಿದೆ.

sion hospital

ಮುಂಬೈ ನಗರಸಭೆಯಿಂದ ಸಿಯಾನ್ ಆಸ್ಪತ್ರೆಯನ್ನು ನಡೆಸಲಾಗುತ್ತಿದೆ. ಈ ಆಸ್ಪತ್ರೆ ಮುಂಬೈನಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಪ್ರಮುಖ ಆಸ್ಪತ್ರೆಯಾಗಿದೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ನಾವು ಏಳು ಸತ್ತ ಶವಗಳನ್ನು ಕಾಣಬಹುದು. ಇದರ ಜೊತೆ ಅವುಗಳ ಪಕ್ಕದಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಜೊತೆಗೆ ವಿಡಿಯೋದಲ್ಲಿ ರೋಗಿಗಳ ಸಂಬಂಧಿಕರು ಇರುವುದು ಕಂಡು ಬಂದಿದೆ.

ಈ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರದ ಮೇಲೆ ಕಿಡಿಕಾರಿರುವ ಬಿಜೆಪಿ ಶಾಸಕ ನಿತೀಶ್ ಠಾಣೆ, ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ ಸಿಯಾನ್ ಆಸ್ಪತ್ರೆಯಲ್ಲಿ ರೋಗಿಗಳ ಪಕ್ಕದಲ್ಲೇ ಮೃತದೇಹಗಳನ್ನು ನೋಡಿ ಬೇಸರವಾಯಿತು. ಇದು ಯಾವ ರೀತಿಯ ಆಡಳಿತ ನಾಚಿಕೆಗೇಡು ಎಂದು ಬರೆದುಕೊಂಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

CORONA 11

ಈ ವಿಚಾರವಾಗಿ ಮಾತನಾಡಿರುವ ಸಿಯಾನ್ ಆಸ್ಪತ್ರೆಯ ಮುಖ್ಯಸ್ಥ ಪ್ರಮೋದ್ ಇಂಗಲೆ, ಕೊರೊನಾ ಸೋಂಕಿನಿಂದ ಮೃತಪಟ್ಟವರ ದೇಹವನ್ನು ತೆಗೆದುಕೊಂಡು ಹೋಗಲು ಅವರ ಕುಟುಂಬದವರು ಮುಂದೆ ಬರುತ್ತಿಲ್ಲ. ಈ ಕಾರಣದಿಂದಲೇ ನಾವು ಮೃತದೇಹಗಳನ್ನು ವಾರ್ಡಿನಲ್ಲೇ ಇಟ್ಟಿದ್ದೇವು. ಆದರೆ ಈಗ ತೆಗೆದಿದ್ದೇವೆ ಮತ್ತು ಈ ವಿಚಾರದ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

corona FINAL

ಮೃತದೇಹಗಳನ್ನು ಶವಗಾರಕ್ಕೆ ಏಕೆ ಶಿಫ್ಟ್ ಮಾಡಿಲ್ಲ ಎಂದು ಇಂಗಲೆಯವರನ್ನು ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಉತ್ತರಿಸಿದ ಅವರು, ನಮ್ಮ ಸಿಯಾನ್ ಆಸ್ಪತ್ರೆಯ ಶವಾಗಾರದಲ್ಲಿ ಕೇವಲ 15 ಸ್ಲಾಟ್‍ಗಳು ಇವೆ. ಇದರಲ್ಲಿ 11 ಸ್ಲಾಟ್‍ಗಳು ಈಗಾಗಲೇ ಭರ್ತಿಯಾಗಿವೆ. ನಾವು ಎಲ್ಲ ಶವಗಳನ್ನು ಶವಾಗಾರದಲ್ಲಿ ತುಂಬಿದರೆ ಕೊರೊನಾ ಅಲ್ಲದೇ ಇತರೆ ಕಾರಣದಿಂದ ಸಾವನ್ನಪ್ಪಿದ ಶವಗಳಿಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ.

ಮೃತದೇಹಗಳನ್ನು ಸ್ಥಳಾಂತರ ಮಾಡಲು ಕುಟುಂಬಗಳ ಒಪ್ಪಿಗೆಗೆ ಕಾಯುತ್ತಿದ್ದಾಗ ಈ ವಿಡಿಯೋವನ್ನು ಶೂಟ್ ಮಾಡಲಾಗಿದೆ. ಜೊತೆಗೆ ನಾವು ಮೃತದೇಹಗಳನ್ನು ಪ್ಲಾಸ್ಟಿಕ್ ನಿಂದ ಕವರ್ ಮಾಡಿದ್ದ ಕಾರಣ ಯಾರಿಗೂ ಸೋಂಕು ಹರಡುವ ಸಾಧ್ಯತೆಯಿಲ್ಲ ಎಂದು ಸಿಯಾನ್ ಆಸ್ಪತ್ರೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *