ಮೋದಿ, ಯೋಗಿಯೇ ಟಾರ್ಗೆಟ್- 26/11ರಂತೆ ಮತ್ತೊಂದು ದಾಳಿಯ ಬೆದರಿಕೆ ಕರೆ

Public TV
1 Min Read
YOGI ADITYANATH MODI

ಮುಂಬೈ: ಕೆಲ ದಿನಗಳ ಹಿಂದೆಯಷ್ಟೇ ಮುಂಬೈ ಪೊಲೀಸರಿಗೆ ಬೆದರಿಕೆ ಕರೆಯೊಂದು ಬಂದಿತ್ತು. ಇದೀಗ ಮತ್ತೆ ಅಂಥದ್ದೇ ಬೆದರಿಕೆ ಕರೆಯೊಂದು ಬಂದಿದ್ದು, ಈಗ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರೇ ನಮ್ಮ ಟಾರ್ಗೆಟ್ ಎಂದು ಕರೆ ಮಾಡಿದವನು ತಿಳಿಸಿದ್ದಾನೆ.

ಮುಂಬೈ ಪೊಲೀಸರಿಗೆ ಈ ಕರೆ ಮಂಗಳವಾರ ಬಂದಿದೆ. ಕರೆಯಲ್ಲಿ ಇಬ್ಬರು ಮಹಾನ್ ನಾಯಕರೇ ನಮ್ಮ ಟಾರ್ಗೆಟ್ ಆಗಿದ್ದು, ಮುಂಬೈ ದಾಳಿಯಂತೆ ಮತ್ತೊಮ್ಮೆ ಅಟ್ಯಾಕ್ ಮಾಡಲಾಗುವುದು ಎಂದು ಬೆದರಿಸಿದ್ದಾನೆ. ಈ ಸಂಬಂಧ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿ ಎಕ್ಷನ್ 509 (2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: 26/11 ರಂತೆ ಮತ್ತೊಂದು ಭಯೋತ್ಪಾದನಾ ದಾಳಿಗೆ ಸಿದ್ಧರಾಗಿ- ಮುಂಬೈ ಪೊಲೀಸ್ರಿಗೆ ಬೆದರಿಕೆ ಕರೆ

ಇತ್ತೀಚೆಗೆ ಸೀಮಾ ಹೈದರ್ (Seema Haider) ಎಂಬ ಪಾಕಿಸ್ತಾನದ (Pakistan) ಮಹಿಳೆ ಆನ್‍ಲೈ ನ್ ಗೇಮ್ ಮೂಲಕ ಪರಿಚಯವಾದ ತನ್ನ ಗೆಳೆಯನನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದಾಳೆ. ತನ್ನ ನಾಲ್ವರು ಮಕ್ಕಳೊಂದಿಗೆ ಬಂದಿರುವ ಈಕೆ ಮತ್ತೆ ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ಎಂದು ಹೇಳಲಾದ ಕರೆಯಲ್ಲಿ, ಸೀಮಾಳನ್ನು ಆಕೆಯ ತಾಯ್ನಾಡು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಿ ಕೊಡದಿದ್ದರೆ ಮುಂಬೈನಲ್ಲಾದ ದಾಳಿಯಂತೆ ಮತ್ತೊಂದು ಭಯೋತ್ಪಾದನಾ ದಾಳಿಯನ್ನು ಎದುರಿಸಲು ಸಜ್ಜಾಗಿ ಎಂದು ತಿಳಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರಿಗೆ ಇದೊಂದು ಹುಸಿ ಬಾಂಬ್ ಕರೆ ಎಂಬುದು ಬಯಲಾಯಿತು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article