ಮುಂಬೈ: ಠಾಣೆಯಲ್ಲೇ ಪೊಲೀಸರು ಆರೋಪಿಯ ಹುಟ್ಟುಹಬ್ಬ ಆಚರಿಸಿದ ಘಟನೆ ಮುಂಬೈನಲ್ಲಿ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಅಯಾನ್ ಖಾನ್ ಪೊಲೀಸ್ ಠಾಣೆಯಲ್ಲಿ ಜನ್ಮದಿನ ಆಚರಿಸಿಕೊಂಡ ಆರೋಪಿ. ಜುಲೈ 23ರಂದು ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಉಪ ಆಯುಕ್ತರು ತನಿಖೆಗೆ ಆದೇಶಿಸಿದ್ದಾರೆ.
Advertisement
ಆರೋಪಿ ಅಯಾನ್ ಖಾನ್ ವಿರುದ್ಧ ಅಪಹರಣ ಹಾಗೂ ಹಲ್ಲೆ ಪ್ರಕರಣ ಸಂಬಂಧ ದೂರು ದಾಖಲಾಗಿದೆ. ಆದರೆ ಖಾನ್ ಜುಲೈ 23ರಂದು ಕೇಕ್ ಹಿಡಿದು ಠಾಣೆಗೆ ಬಂದ ಪೊಲೀಸರ ಜೊತೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಈ ವೇಳೆ ಸಮವಸ್ತ್ರದಲ್ಲಿದ್ದ ಪೊಲೀಸ್ ಒಬ್ಬರು ಅಯಾನ್ ಖಾನ್‍ಗೆ ಕೇಕ್ ತಿನ್ನಿಸಿ ಶುಭಕೋರಿದ್ದಾರೆ.
Advertisement
#Mumbai Cops celebrated goons #birthday inside the #policestation. Criminal's name is #AyaanKhan alia ulla. As per the allegation on 23rd July Ayaan went with the cake inside the #policestation. Reports @siddhantvm well done @MumbaiPolice !!! @CMOMaharashtra @Dev_Fadnavis pic.twitter.com/u8F2oMcX6i
— Sanjay Jha (@JhaSanjay07) July 27, 2019
Advertisement
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಮುಂಬೈ ಠಾಣೆಯ ಪೊಲೀಸರು, ಅಯಾನ್ ಖಾನ್ ಆರೋಪಿಯಲ್ಲ. ಅವನು ನಿರಪರಾಧಿ ಎಂದು ಸಾಬೀತಾಗಿದ್ದು, ಠಾಣೆಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ. ಆದರೆ ಘಟನೆ ಸತ್ಯಾಸತ್ಯತೆ ತಿಳಿಯುವ ಸಂಬಂಧ ಪೊಲೀಸ್ ಉಪ ಆಯುಕ್ತರು ತನಿಖೆಗೆ ಆದೇಶಿಸಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸ್ ಠಾಣೆಯಲ್ಲಿ ಯಾರೊಬ್ಬರ ಹುಟ್ಟುಹಬ್ಬವನ್ನು ಆಚರಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.
Advertisement
ಉತ್ತರ ಪ್ರದೇಶದ ನೈನಿ ಜೈಲಿನಲ್ಲಿ ಕಳೆದ ಜೂನ್ ತಿಂಗಳಲ್ಲಿ ಇಂತಹದ್ದೆ ಘಟನೆ ನಡೆದಿತ್ತು. ಉದ್ಯಮಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ ಜೈಲು ಸೇರಿದ್ದ ಆರೋಪಿ ಅತಿಖ್ ಅಹ್ಮದ್‍ನನ್ನು ನೈನಿ ಜೈಲಿನಿಂದ ಗುಜರಾತ್‍ನ ಸಬರಮತಿ ಜೈಲಿಗೆ ವರ್ಗಾವಣೆ ಮಾಡಲಾಗಿತ್ತು. ಹೀಗಾಗಿ ಜೈಲಿನ ಎಲ್ಲ ಕೈದಿ ಹಾಗೂ ಪೊಲೀಸ್ ಸಿಬ್ಬಂದಿಗೆ ಆರೋಪಿ ಮದ್ಯದ ಪಾರ್ಟಿ ಆಯೋಜಿಸಿದ್ದ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.