ಮುಂಬೈ: ಸೋಷಿಯಲ್ ಮೀಡಿಯಾದಲ್ಲಿ (Social Media) ಈಗ ರೀಲ್ಸ್ ಹವಾ ಜಾಸ್ತಿಯಾಗಿದೆ. ಅದ್ರಲ್ಲೂ ಯುವಜನರು ಹೆಚ್ಚಿನ ವೀವ್ಸ್, ಲೈಕ್ಸ್‌ಗಾಗಿ ಕಂಡ ಕಂಡ ಸ್ಥಳಗಳಲ್ಲಿ ವೀಡಿಯೋ ಮಾಡೋದಕ್ಕೆ ಶುರು ಮಾಡಿದ್ದಾರೆ. ಯುವತಿಯರು ಹಸಿ ಬಿಸಿ ಬಟ್ಟೆಗಳನ್ನ ತೊಟ್ಟು ಪಡ್ಡೆಗಳ ನಿದ್ದೆಗೆಡಿಸಿದ್ರೆ, ಯುವಕರು ಬೈಕು, ಕಾರ್‌ಗಳಿಂದ ಸ್ಟಂಟ್ ಮಾಡಿ ಕ್ರೇಜ್ ಹೆಚ್ಚಿಸ್ತಿದ್ದಾರೆ. ಇದೇ ರೀತಿ ರೀಲ್ಸ್ ಮಾಡೋದಕ್ಕೆ ಹೋದಾಗ ದುರಂತವೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.
Car Plunges 300 Feet Into Gorge Near Satara’s Reverse Waterfall — Driver Critically Injured (VIDEO) https://t.co/d5b4OMCp0s pic.twitter.com/6ouvI1fjEy
— Pune Pulse (@pulse_pune) July 10, 2025
ಹೌದು. ಮಹಾರಾಷ್ಟ್ರದ ಸತಾರ (Maharashtra’s Satara) ಜಿಲ್ಲೆಯ ಪಠಾಣ್ ಸದಾವಘಾಪುರ ಪ್ರದೇಶದಲ್ಲಿ ರೀಲ್ಸ್‌ಗಾಗಿ (Instagram Reels) ಸ್ಟಂಟ್ ಮಾಡುತ್ತಿದ್ದಾಗಲೇ ಕಾರು 300 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿರುವ ಘಟನೆ ನಡೆದಿದೆ. ಎದೆ ಝಲ್ ಎನಿಸುವ ಈ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. ಇದನ್ನೂ ಓದಿ: ಗಾರೆ ಕೆಲಸದವನ ಜೊತೆ ಕಂಟ್ರ್ಯಾಕ್ಟರ್ ಮಗಳ ಲವ್ – ಮದ್ವೆಯಾದ 15 ದಿನಕ್ಕೆ ಓಡಿಬಂದ ಗೃಹಿಣಿ!
ಪಠಾಣ್ ಸದಾವಘಾಪುರ ಗುಡ್ಡ ಪ್ರದೇಶಕ್ಕೆ ಯುವಕರ ಗುಂಪೊಂದು ಭೇಟಿ ನೀಡಿತ್ತು. ಈ ವೇಳೆ ಕಡಿದಾದ ಇಳಿಜಾರಿನಲ್ಲಿ ರೀಲ್ಸ್‌ಗಾಗಿ ಕಾರು ಸ್ಟಂಟ್ (Car Stunt) ಮಾಡಲು ಮುಂದಾಗಿದ್ರು. ರಿವರ್ಸ್‌ನಲ್ಲಿ ಒಂದು ಸುತ್ತುಹಾಕಿದ ಕಾರು ಇದ್ದಕ್ಕಿದ್ದಂತೆ 300 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿತು. ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಚಾಲನೆ ಮಾಡುತ್ತಿದ್ದ ಕರಾಡ್ ನಿವಾಸಿ ಸಾಹಿಲ್ ಅನಿಲ್ ಜಾಧವ್ (20) ಘಟನೆಯಲ್ಲಿ ಗಾಯಗೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಿರು ತೆರೆ ನಟಿ ಶ್ರುತಿಗೆ ಮನೆಯಲ್ಲೇ ಚಾಕು ಇರಿದು ಕೊಲೆಗೆ ಯತ್ನ, ಪತಿ ಅರೆಸ್ಟ್
ಫೋಟೋ ಶೂಟ್‌ನಿಂದ ಉಳಿಯಿತು ನಾಲ್ವರ ಪ್ರಾಣ
ಇನ್ನೂ ಕಾರಿನಲ್ಲಿದ್ದ ಇತರ ನಾಲ್ವರು ಅಪಘಾತ ಸಂಭವಿಸುವುದಕ್ಕೆ ಸ್ವಲ್ಪ ಸಮಯಕ್ಕೂ ಮುನ್ನ ಫೋಟೋಶೂಟ್‌ಗಾಗಿ (Photoshoot) ಹೊರ ಬಂದಿದ್ದರು. ಇದರಿಂದ ಆ ನಾಲ್ವರ ಜೀವವೂ ಉಳಿದಿದೆ. ಇದನ್ನೂ ಓದಿ: `ಪರಿಣತ ಟೆಕ್ಕಿ’ ನಗರಗಳ ಪಟ್ಟಿಯಲ್ಲಿ ಬೆಂಗಳೂರು – ವಿಶ್ವದ ಟಾಪ್-10 ಪಟ್ಟಿಯಲ್ಲಿ ಭಾರತದ 6 ನಗರಗಳು
ಘಟನೆ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲದೇ ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಿದ್ದು, ಕಾರು ಚಾಲಕನನ್ನೂ ರಕ್ಷಣೆ ಮಾಡಲಾಗಿದೆ.