ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರನ್ನು ಬಿಸಿಸಿಐ ಇತ್ತೀಚೆಗೆ ಕಾಮೆಂಟರಿ ಪ್ಯಾನೆಲ್‍ನಿಂದ ಕೈಬಿಟಿತ್ತು. ಈ ಬಗ್ಗೆ ಮಜೇಂಕರ್ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಂಜಯ್ ಮಂಜ್ರೇಕರ್ ಅವರು ಕ್ರಿಕೆಟ್‍ನಿಂದ ನಿವೃತ್ತಿ ಆದ ಬಳಿಕ ಫುಲ್ ಟೈಮ್ ಕಾಮೆಂಟರಿ ಪ್ಯಾನೆಲ್‍ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಅವರನ್ನು ಬಿಸಿಸಿಐ ಕಾಮೆಂಟರಿ ಪ್ಯಾನೆಲ್‍ನಿಂದ ಕೈಬಿಟ್ಟಿತ್ತು. ಜೊತೆಗೆ ಐಪಿಎಲ್‍ನಿಂದಲೂ ಕೈಬಿಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬಂದಿದ್ದವು.
Advertisement
I have always considered commentary as a great privilege, but never an entitlement. It is up to my employers whether they choose to have me or not & I will always respect that. Maybe BCCI has not been happy with my performance of late. I accept that as a professional.
— Sanjay Manjrekar (@sanjaymanjrekar) March 15, 2020
Advertisement
ಈಗ ಈ ವಿಚಾರವಾಗಿ ಟ್ವೀಟ್ ಮಾಡಿರುವ ಮಂಜ್ರೇಕರ್, ವೀಕ್ಷಕ ವಿವರಣೆ ಹುದ್ದೆ ನನಗೆ ಸಿಕ್ಕಿದ್ದನ್ನು ದೊಡ್ಡ ಜವಾಬ್ದಾರಿ ಎಂದು ಪರಿಗಣಿಸುತ್ತೇನೆ. ಅದು ಒಂದು ಅರ್ಹತೆಯಲ್ಲ. ನನ್ನನ್ನು ಮತ್ತೆ ಆಯ್ಕೆ ಮಾಡುವುದು ಬಿಡುವುದು ಬಿಸಿಸಿಐಗೆ ಬಿಟ್ಟ ವಿಚಾರ. ಅದನ್ನು ನಾನು ಯಾವಗಲೂ ಗೌರವಿಸುತ್ತೇನೆ. ಬಹುಶಃ ನನ್ನ ಹಿಂದಿನ ಕೆಲಸ ಬಿಸಿಸಿಐ ಅವರಿಗೆ ಇಷ್ಟವಾಗಿಲ್ಲ ಅನ್ನಿಸುತ್ತದೆ. ವೃತ್ತಿಪರನಾಗಿ ಈ ವಿಚಾರವನ್ನು ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
Advertisement
His comments on Twitter is a bit like his batting meaningless and and lack of ideas .. may be just an attention seeker…in the negative way ????
— Sourav Ganguly (@SGanguly99) June 9, 2019
Advertisement
ಈ ಹಿಂದೆ ಬಿಸಿಸಿಐ ಅಧ್ಯಕ್ಷರಾಗುವುದಕ್ಕೂ ಮೊದಲು ಸೌರವ್ ಗಂಗೂಲಿ ಮಂಜ್ರೇಕರ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. 2019ರ ಜೂನ್ 9 ರಂದು ಹೆಸರು ಪ್ರಸ್ತಾಪಿಸದೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಸೌರವ್ ಗಂಗೂಲಿ, ಟ್ವಿಟ್ಟರ್ ನಲ್ಲಿ ಅವರು ಮಾಡಿದ ಕಾಮೆಂಟ್, ಬ್ಯಾಟಿಂಗ್ ಅರ್ಥಹೀನ. ಅವರಿಗೆ ಆಲೋಚನೆಗಳ ಕೊರತೆಯಂತಿದೆ. ಅವರು ಕೇವಲ ನಕಾರಾತ್ಮಕ ರೀತಿಯಲ್ಲಿ ಗಮನ ಸೆಳೆಯುವವರಾಗಿರಬಹುದು ಎಂದು ಬರೆದುಕೊಂಡಿದ್ದರು.
ಮಂಜ್ರೇಕರ್ ಅವರು 1996ರಲ್ಲಿ ನಿವೃತ್ತಿಯಾದ ನಂತರ ಕಳೆದ 3 ವಿಶ್ವಕಪ್ ಮತ್ತು ಎಲ್ಲಾ ಪ್ರಮುಖ ಐಸಿಸಿ ಪಂದ್ಯಾವಳಿಗಳಿಗೆ ಕಾಮೆಂಟರಿ ಪ್ಯಾನೆಲ್‍ನ ಭಾಗವಾಗಿದ್ದರು. ಆದರೆ ಮಂಡಳಿ ಮೂಲಗಳ ಪ್ರಕಾರ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಧರ್ಮಶಾಲಾದಲ್ಲಿ ಮಳೆಯಿಂದಾಗಿ ರದ್ದಾದ ಏಕದಿನ ಪಂದ್ಯದ ವೇಳೆ ಅವರು ಹಾಜರಿರಲಿಲ್ಲ. ಆದರೆ ಸುನೀಲ್ ಗವಾಸ್ಕರ್, ಲಕ್ಷ್ಮಣ್ ಶಿವರಾಮಕೃಷ್ಣನ್, ಮುರಳಿ ಕಾರ್ತಿಕ್ ಅವರು ಬಿಸಿಸಿಐ ಕಾಮೆಂಟರಿ ಪ್ಯಾನೆಲ್ ಸೇರಿದ ಸ್ಥಳದಲ್ಲಿದ್ದರು. ಹೀಗಾಗಿ ಅಂದಿನಿಂದ ಅವರನ್ನು ಕೈಬಿಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬಂದಿತ್ತು.
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಲ್‍ರೌಂಡರ್ ರವೀಂದ್ರ ಜಡೇಜಾ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಜರ್ ನಡುವೆ ವಾಕ್ ಯುದ್ಧ ನಡೆದಿತ್ತು. ಅಂದು ಜಡೇಜಾರಂತಹ `ಬಿಟ್ಸ್ ಅಂಡ್ ಪೀಸಸ್’ ಆಟಗಾರನಿಗೆ ನಾನು ಅಭಿಮಾನಿಯಲ್ಲ. ಜಡೇಜಾ ಟೆಸ್ಟ್ ಏಕದಿನ ಮಾದರಿ ಸಿಮೀತ ಓವರ್ ಗಳ ಕ್ರಿಕೆಟ್‍ಗೆ ಫಿಟ್ ಅಲ್ಲ. ಆತ ಟೆಸ್ಟ್ ಕ್ರಿಕೆಟ್ ಮಾತ್ರ ಅಗತ್ಯ ಎಂದು ವ್ಯಾಖ್ಯಾನಿಸಿದ್ದರು.
ಮಂಜ್ರೇಕರ್ ಅವರ ಈ ಕಾಮೆಂಟ್‍ಗಳಿಗೆ ತಿರುಗೇಟು ನೀಡಿದ್ದ ಜಡೇಜಾ, ತನ್ನ ಸ್ಥಾನ ಯಾವುದು ಎಂದು ತಿಳಿದುಕೊಂಡು ಮಾತನಾಡಿ. ನಿಮಗಿಂತ ಹೆಚ್ಚು ಪಂದ್ಯಗಳನ್ನು ದೇಶದ ಪರ ಆಡಿದ್ದೇನೆ ಎಂದಿದ್ದರು.