ನವದೆಹಲಿ: ಮುಂಬೈ ದಾಳಿ (Mumbai Attack) ಪ್ರಕರಣ ಉಗ್ರ ತಹವ್ವೂರ್ ರಾಣಾನ (Tahawwur Hussain Rana) ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳ (NIA) ಆರಂಭಿಸಿದೆ. ಈ ವಿಚಾರಣೆಯ ಸಂದರ್ಭದಲ್ಲಿ ರಾಣಾ ವಿರುದ್ಧ ಸಾಕ್ಷ್ಯ ನುಡಿಯಲು ನಿಗೂಢ ವ್ಯಕ್ತಿಗಳು ಸಾಲುಗಟ್ಟಿ ನಿಂತಿದ್ದಾರೆ ಎಂದು ಎನ್‌ಐಎ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಉಗ್ರ ಡೇವಿಡ್ ಹೆಡ್ಲಿ (David Headley) ಅಮೆರಿಕ ಪ್ರಜೆಯಾಗಿದ್ದರೆ ರಾಣಾ ಕೆನಡಾದ (Canada) ಪ್ರಜೆಯಾಗಿದ್ದಾನೆ. ಹೀಗಿದ್ದರೂ ಅವರು ಭಾರತಕ್ಕೆ (India) ಆಗಾಗ ಬರುತ್ತಿದ್ದರು. ಇವರು ಬರುವ ವೇಳೆ ಇವರನ್ನು ಸ್ವೀಕರಿಸಿದ ಮತ್ತು ವಸತಿ ವ್ಯವಸ್ಥೆ ಮಾಡಿದ ವ್ಯಕ್ತಿಗಳು ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗುತ್ತಾರೆ. ಇವರು ತಿಳಿಸುವ ಮಾಹಿತಿಗಳು ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಈ ಮೊದಲೇ ಈ ಸಾಕ್ಷಿಗಳು ಹೇಳಿಕೆ ನೀಡಿದ್ದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಭವಿಷ್ಯದಲ್ಲಿ ಲಷ್ಕರ್-ಎ-ತೈಬಾ (LeT) ಸೇರಿದಂತೆ ಯಾವುದೇ ಉಗ್ರ ಸಂಘಟನೆಯಿಂದ ಇವರಿಗೆ ಸಮಸ್ಯೆಯಾಗದೇ ಇರಲು ನ್ಯಾಯಾಲಯದ ದಾಖಲೆಗಳಲ್ಲಿಯೂ ಸಹ ಈ ವ್ಯಕ್ತಿಗಳ ಗುರುತನ್ನು ಗೌಪ್ಯವಾಗಿಡಲಾಗಿತ್ತು. ಇದನ್ನೂ ಓದಿ: ರಾಣಾ ಇರೋ ಸೆಲ್‌ಗೆ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ – ಕೋಟೆಯಾಗಿ ಬದಲಾದ NIA ಕಚೇರಿ
ಭಾರತೀಯ ತನಿಖಾಧಿಕಾರಿಗಳು ರಾಣಾನನ್ನು ವಿಚಾರಣೆ ನಡೆಸುತ್ತಿರುವುದು ಇದೇ ಮೊದಲು. ಜೂನ್ 2010 ರಲ್ಲಿ ಎನ್‌ಐಎ ಅಮೆರಿಕದಲ್ಲಿ ರಾಣಾನ ಬಾಲ್ಯ ಸ್ನೇಹಿತ ಡೇವಿಡ್ ಹೆಡ್ಲಿಯನ್ನು ವಿಚಾರಣೆ ನಡೆಸಿತ್ತು. ಈ ನಿಗೂಢ ಸಾಕ್ಷಿ ರಾಣಾ ಮತ್ತು ಡೇವಿಡ್ ಹೆಡ್ಲಿಯೊಂದಿಗೆ ಸಂಬಂಧ ಹೊಂದಿದ್ದು, ರಾಣಾನ ಪಾತ್ರವನ್ನು ಪತ್ತೆಹಚ್ಚುವಲ್ಲಿ ಸಾಕ್ಷಿಯ ಹೇಳಿಕೆ ಪ್ರಮುಖ ಪಾತ್ರವಹಿಸಲಿದೆ ಮೂಲಗಳು ತಿಳಿಸಿವೆ.
ಎನ್‌ಐಎ ತನಿಖಾ ವಿವರಗಳ ಪ್ರಕಾರ 2006ರ ವೇಳೆಗೆ ದಾಳಿಯ ಯೋಜನೆ ನಡೆಯುತ್ತಿದ್ದಾಗ, ಹೆಡ್ಲಿ ಮೊದಲು ಎಲ್‌ಇಟಿ ನಾಯಕರು ಮತ್ತು ಇತರ ಸಹ ಸಂಚುಕೋರರನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ಹೋಗಿದ್ದ. ಈ ವೇಳೆ ಆತನಿಗೆ ತಾಜ್ ಮಹಲ್ ಹೋಟೆಲ್ ಸೇರಿದಂತೆ ಮುಂಬೈನ ಸಾಮಾನ್ಯ ವಿಡಿಯೋಗಳನ್ನು ತೆಗೆದುಕೊಂಡು ಬರುವಂತೆ ಸೂಚನೆ ಸಿಕ್ಕಿತ್ತು.
ಈ ಸೂಚನೆಯಂತೆ ಸೆಪ್ಟೆಂಬರ್ 2006 ರಲ್ಲಿ ಹೆಡ್ಲಿ ಭಾರತಕ್ಕೆ ಆಗಮಿಸಿದ್ದ ಮತ್ತು ಪಾಕಿಸ್ತಾನ ಉಗ್ರರು ಕೇಳಿದ್ದ ವಿಡಿಯೋಗಳನ್ನು ಚಿತ್ರೀಕರಿಸಿದ್ದ. ಈ ಭೇಟಿಯ ಸಮಯದಲ್ಲಿ ರಾಣಾನ ಆಪ್ತ ವ್ಯಕ್ತಿಯೊಬ್ಬರು ಹೆಡ್ಲಿಯನ್ನು ಸ್ವಾಗತಿಸಿದ್ದರು. ಆ ವ್ಯಕ್ತಿಗೆ ರಾಣಾನಿಂದ ಕರೆ ಬಂದಿತ್ತು. ಈ ಕರೆಯ ನಂತರ ಆ ವ್ಯಕ್ತಿ ಹೆಡ್ಲಿ ಮತ್ತು ಇತರ ಇತರ ಲಾಜಿಸ್ಟಿಕ್ಸ್ ವ್ಯವಸ್ಥೆ ಮಾಡಿದ್ದರು.
ಮುಂಬೈನಲ್ಲಿರುವ ರಾಣಾನ ವಲಸೆ ಕಾನೂನು ಕಚೇರಿಯೊಂದಿಗೆ ಸಂಬಂಧ ಹೊಂದಿದ್ದ ಇತರ ವ್ಯಕ್ತಿಗಳನ್ನು ಸಹ ಎನ್‌ಐಎ ಈ ಬಾರಿ ಪ್ರಶ್ನಿಸಲಿದೆ. ಇದನ್ನೂ ಓದಿ: ರಾಣಾ ಕರೆತಂದ ವಿಮಾನಕ್ಕೆ ನೀಡಲಾಗಿತ್ತು ಡಮ್ಮಿ ಕೋಡ್, ಮಧ್ಯೆ 11 ಗಂಟೆ ಪಿಟ್ ಸ್ಟಾಪ್!
ರಾಣಾ ಶೀಘ್ರದಲ್ಲೇ ಸಾಕ್ಷಿಯೊಂದಿಗೆ ಭಾರತದಲ್ಲಿನ ಆತನ ಸಂಪರ್ಕಗಳು ಮತ್ತು ಹೆಡ್ಲಿ ಭೇಟಿ ನೀಡಿದ ಸ್ಥಳಗಳು ಮತ್ತು 2006 ಮತ್ತು 2009 ರ ನಡುವೆ ಭಾರತಕ್ಕೆ ಹಲವಾರು ಬಾರಿ ಭೇಟಿ ನೀಡಿದಾಗ ಆತ ಯಾರನ್ನು ಸಂಪರ್ಕ ಮಾಡಿದ್ದ? ಆ ವ್ಯಕ್ತಿಗಳನ್ನೂ ಎನ್‌ಐಎ ವಿಚಾರಣೆ ನಡೆಸಲಿದೆ.
ರಾಣಾ ಪಾಕಿಸ್ತಾನದಲ್ಲಿದ್ದ ಹೆಡ್ಲಿಯ ದಾಳಿಯ ರೂವಾರಿಗಳ ಜೊತೆ ಕೆಲಸ ನೇರವಾಗಿ ಸಂವಹನ ಮಾಡುತ್ತಿದ್ದ. ಹೀಗಾಗಿ ಆರಂಭಿಕ ಹಂತದ ವಿಚಾರಣೆಯಲ್ಲಿ ರಾಣಾ ಮತ್ತು ಹೆಡ್ಲಿ ನಡುವಿನ ಸಂಬಂಧದ ಬಗ್ಗೆ ಕೇಳಲಾಗುತ್ತದೆ.
ವಿಶೇಷ ನ್ಯಾಯಾಲಯ 18 ದಿನಗಳ ಕಾಲ ಕಸ್ಟಡಿಗೆ ನೀಡಿದ ಬಳಿಕ ಮುಂಬೈ ದಾಳಿ (Mumbai Attack) ಪ್ರಕರಣ ಆರೋಪಿ ಉಗ್ರ ತಹವ್ವೂರ್ ಹುಸೇನ್ ರಾಣಾನನ್ನು ದೆಹಲಿಯಲ್ಲಿರುವ ರಾಷ್ಟ್ರೀಯ ತನಿಖಾ ದಳದ (NIA) ಪ್ರಧಾನ ಕಚೇರಿಯಲ್ಲಿ ಬಂಧಿಸಿ ಇಡಲಾಗಿದೆ.
ಎನ್‌ಐಎ ಕಟ್ಟಡದ ನೆಲ ಮಹಡಿಯಲ್ಲಿರುವ 14*14 ಅಡಿ ಅಳತೆಯ ಕೋಣೆಗೆ ಸಿಸಿಟಿವಿ (CCTV) ಹಾಕಲಾಗಿದ್ದು ಪ್ರತಿಯೊಂದು ಚಲನವಲನಗಳನ್ನು ಗಮನಿಸಲಾಗುತ್ತದೆ. ಈ ಕೊಠಡಿಯಲ್ಲೇ ಎಲ್ಲಾ ತನಿಖಾ ಸಂಸ್ಥೆಗಳು ರಾಣಾನನ್ನು ವಿಚಾರಣೆಗೆ ಒಳಪಡಿಸಲಿವೆ.