ನವದೆಹಲಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಬಾಲಬಿಚ್ಚಿದ್ದು, ಹಿಂದೂಗಳ ನರಮೇಧವಾಗಿದೆ. ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ ಕಣಿವೆಯಲ್ಲಿ ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿ 30ಕ್ಕೂ ಪ್ರವಾಸಿಗರನ್ನು ಕೊಂದು ರಕ್ತದ ಕೋಡಿ ಹರಿಸಿದ್ದಾರೆ. ಇಬ್ಬರು ವಿದೇಶಿಗರು ಸೇರಿದಂತೆ ರಾಶಿ ರಾಶಿ ಹೆಣಗಳನ್ನು ಟಾರ್ಪಲ್‌ನಲ್ಲಿ ಮುಚ್ಚಲಾಗಿದೆ. ಪ್ರವಾಸದ ಖುಷಿಯಲ್ಲಿದ್ದ ಪ್ರವಾಸಿಗರ ಬಳಿ ಏಕಾಏಕಿ ನುಗ್ಗಿರುವ ಲಷ್ಕರ್‌ನ ಅಂಗ ಉಗ್ರ ಸಂಘಟನೆ ಟಿಆರ್‌ಎಫ್ ಟೆರರಿಸ್ಟ್‌ಗಳು ದಾಳಿ ನಡೆಸಿದ್ದಾರೆ.
पहलगाम के लोग आतंकवाद के खिलाफ कैंडल मार्च निकाल रहे है।
मगर कुछ हरामखोर देशद्रोही टाईप के लोग इस मौके पर भी सोशल मीडिया पर धार्मिक नफरत फैला रहे हैं
— Bilal Ahmad || बिलाल अहमद (@Bilal_Shabbu) April 22, 2025
ಇನ್ನೂ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲಿನ ದಾಳಿ ಬೆನ್ನಲ್ಲೇ ಮುಂಬೈ ಮತ್ತು ದೆಹಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಮುಂಬೈ ಮತ್ತು ದೆಹಲಿಯ ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಪ್ರವಾಸಿ ತಾಣಗಳು ಮತ್ತು ಇತರ ಪ್ರಮುಖ ಸ್ಥಳಗಳ ಮೇಲೆ ನಿಗಾ ವಹಿಸುವಂತೆ ಉನ್ನತ ಅಧಿಕಾರಿಗಳು ಸೂಚನೆ ನೀಡಿರುವುದಾಗಿ ವರದಿಗಳು ತಿಳಿಸಿವೆ.
Usha and I extend our condolences to the victims of the devastating terrorist attack in Pahalgam, India. Over the past few days, we have been overcome with the beauty of this country and its people. Our thoughts and prayers are with them as they mourn this horrific attack. https://t.co/cUAyMXje5A
— JD Vance (@JDVance) April 22, 2025
ಉಗ್ರರ ದಾಳಿಗೆ ಅಮೆರಿಕದ ಉಪಾಧ್ಯಕ್ಷ ಖಂಡನೆ:
ಇನ್ನೂ ಭಾರತದ ಪ್ರವಾಸದಲ್ಲಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿದ್ದು, ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: Pahalgam Terrorist Attack | ಶ್ರೀನಗರಕ್ಕೆ ಅಮಿತ್ ಶಾ ಭೇಟಿ – ಉನ್ನತ ಅಧಿಕಾರಿಗಳ ಜೊತೆ ಹೈವೋಲ್ಟೇಜ್ ಮೀಟಿಂಗ್
ಬುಧವಾರ ಜಮ್ಮು ಬಂದ್‌ಗೆ ಕರೆ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಜಮ್ಮು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಹಾಗೂ ವಿವಿಧ ಸಂಘಟನೆಗಳು ಬುಧವಾರ (ಏಪ್ರಿಲ್ 23) ಜಮ್ಮು ಬಂದ್‌ಗೆ ಕರೆ ನೀಡಿವೆ. ಇದನ್ನೂ ಓದಿ: ʻನಿನ್ನನ್ನು ಕೊಲ್ಲುವುದಿಲ್ಲ, ಹೋಗಿ ಮೋದಿಗೆ ಇದನ್ನ ಹೇಳುʼ – ಶಿವಮೊಗ್ಗದ ಉದ್ಯಮಿ ಪತ್ನಿಗೆ ಉಗ್ರ ಹೇಳಿದ ಮಾತು
ಇನ್ನೂ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲಿನ ದಾಳಿ ಖಂಡಿಸಿ ಇಲ್ಲಿನ ಸ್ಥಳೀಯರು ಸೋಪೋರ್, ಗಂಡೇರ್ಬಲ್, ಹಂದ್ವಾರ, ಬಂಡಿಪೋರಾ ಮತ್ತು ಕಾಶ್ಮೀರದ ಇತರ ಭಾಗಗಳಲ್ಲಿ ಮೇಣದಬತ್ತಿ ಮೆರವಣಿಗೆ ನಡೆಸಿದ್ದಾರೆ. ಇದನ್ನೂ ಓದಿ: ದುಷ್ಟ ಅಜೆಂಡಾ ಎಂದಿಗೂ ಯಶಸ್ವಿಯಾಗಲ್ಲ, ದಾಳಿಕೋರರನ್ನು ಸುಮ್ಮನೆ ಬಿಡಲ್ಲ: ಗುಡುಗಿದ ಮೋದಿ