ಮುಂಬೈ: ಶಿವಸೇನಾ ಸಂಸ್ಥಾಪಕರಾದ ಬಾಳ್ ಠಾಕ್ರೆ ಅವರ ಸ್ಮಾರಕ ನಿರ್ಮಾಣ ಮಾಡಲು ಒಂದು ಸಾವಿರ ಮರಗಳನ್ನು ಕಡಿಯಲು ಮುಂದಾದ ಶಿವಸೇನೆ ಸರ್ಕಾರದ ನಿರ್ಧಾರವನ್ನು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಪಡ್ನವೀಸ್ ವಿರೋಧಿಸಿದ್ದಾರೆ.
ಮುಂಬೈನ ಔರಂಗಾಬಾದ್‍ನಲ್ಲಿ ಬಾಳ್ ಠಾಕ್ರೆ ಅವರ ಸ್ಮಾರಕ ನಿರ್ಮಾಣ ಮಾಡಲು ತೀರ್ಮಾನಿಸಿರುವ ಉದ್ಧವ್ ಠಾಕ್ರೆ ಅವರ ನೇತೃತ್ವದ ಸರ್ಕಾರ, ಇದಕ್ಕಾಗಿ ಸುಮಾರು 1,000 ಮರಗಳನ್ನು ಕಡಿಯಲು ನಿರ್ಧಾರ ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಮೃತಾ ಅವರು ಶಿವಸೇನೆಯನ್ನು ಕಪಟಿ ಎಂದಿದ್ದಾರೆ.
Advertisement
‘Hypocrisy is a disease ! Get well soon @ShivSena ‘ ! Tree cutting – at ur convenience or allowing tree cutting only when you earn commission – unpardonable sins !! pic.twitter.com/7f68PWPIbA
— AMRUTA FADNAVIS (@fadnavis_amruta) December 8, 2019
Advertisement
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಮೃತಾ ಪಡ್ನವೀಸ್ ಅವರು, ಬೂಟಾಟಿಕೆ ಎಂಬುದು ಒಂದು ರೋಗ. ಈ ಕಾಯಿಲೆಯಿಂದ ಬಳಲುತ್ತಿರುವ ಶಿವಸೇನೆ ಶೀಘ್ರವೇ ಗುಣಮುಖವಾಗಲಿ. ನಿಮಗೆ ಅಗತ್ಯವಿದ್ದಾಗ ಕಮೀಷನ್‍ಗಾಗಿ ಮರಗಳನ್ನು ಕಡಿಯುವುದು ಕ್ಷಮೆಯೇ ಇಲ್ಲದ ಪಾಪ ಎಂದು ಶಿವಸೇನೆಯನ್ನು ಕಟುವಾಗಿ ಟೀಕಿಸಿದ್ದಾರೆ.
Advertisement
ಈ ಹಿಂದೆ ಶಿವಸೇನೆ ಮುಂಬೈನ ಆರೆ ಕಲೋನಿಯಲ್ಲಿ ಮೆಟ್ರೋ ಲೈನ್ ಮತ್ತು ಮೂರು ಕಾರ್ ಶೆಡ್‍ಗಳನ್ನು ನಿರ್ಮಿಸಲು ಮರಗಳನ್ನು ಕಡಿದಾಗ ಪರಿಸರ ಕಾಳಜಿಯ ಹೆಸರಿನಲ್ಲಿ ಇದನ್ನು ವಿರೋಧಿಸಿತ್ತು. ಆದರೆ ಈಗ ಮೊದಲ ಬಾರಿಗೆ ಸಿಎಂ ಅಗಿರವ ಉದ್ಧವ್ ಠಾಕ್ರೆ ಅವರು ತಮ್ಮ ತಂದೆಯ ಸ್ಮಾರಕ ನಿರ್ಮಾಣಕ್ಕಾಗಿ ಒಂದು ಸಾವಿರ ಮರಗಳನ್ನು ಕಡಿಯಲು ಮುಂದಾಗಿರುವುದು ಎಲ್ಲೆಡೆ ವಿರೋಧಕ್ಕೆ ಎಡೆಮಾಡಿಕೊಟ್ಟಿದೆ.
Advertisement
“There has been talks circulating that we are going to cut trees to build a memorial for HinduHriday Samrat Balasaheb Thackeray. As a Mayor, I would like to clarify — we are going to ensure that no trees are cut for the construction of the memorial.
-Mayor Nandkumar Ghodele pic.twitter.com/IANbWWpc7F
— Shivsena UBT Communication (@ShivsenaUBTComm) December 8, 2019
ಈ ವಿಚಾರವಾಗಿ ಔರಂಗಾಬಾದ್ ಮೇಯರ್ ನಂದಕುಮಾರ್ ಅವರು, ಈಗಾಗಲೇ ಮಾಧ್ಯಮ ಹೇಳಿಕೆ ನೀಡಿದ್ದು, ಸ್ಮಾರಕಕ್ಕಾಗಿ ಯಾವುದೇ ಮರಗಳನ್ನೂ ಕಡಿಯಲು ಬಿಡುವುದಿಲ್ಲ. ಇಲ್ಲಿ ಕೇವಲ ಠಾಕ್ರೆ ಅವರ ಸ್ಮಾರಕ ಮಾತ್ರ ನಿರ್ಮಾಣ ಮಾಡುತ್ತಿಲ್ಲ. ಸ್ಮಾರಕ ಜೊತೆಗೆ ಉದ್ಯಾನವನವನ್ನು ನಿರ್ಮಿಸುತ್ತಿದ್ದೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.