ಮುಂಬೈ: ಕೊರೊನಾ ದೇಶದ ಎಲ್ಲಾ ಕ್ಷೇತ್ರಗಳ ಮೇಲೆ ತನ್ನ ಪ್ರಭಾವವನ್ನು ಬೀರಿದೆ, ಹಾಗೆಯೇ ಭಾರತ ಚಿತ್ರರಂಗವನ್ನು ಸಂಕಷ್ಟಕ್ಕೆ ದೂಡಿದೆ. ಕೊರೊನಾದಿಂದ ನಿರ್ದೇಶಕ ರಾಜಾಮೌಳಿಯ ಆರ್‌ಆರ್‌ಆರ್ ಚಿತ್ರದಿಂದ ಬಾಲಿವುಡ್ ಬೆಡಗಿ ಆಲಿಯಾ ಭಟ್ ಹೊರಬಂದಿದ್ದಾರೆ ಎನ್ನಲಾಗಿದೆ.
ಹೌದು ಸ್ಟಾರ್ ನಿರ್ದೇಶಕ ರಾಜಾಮೌಳಿ ನಿರ್ದೇಶದ ಆರ್‌ಆರ್‌ಆರ್ ಚಿತ್ರ ಬಹುಕೋಟಿ ವೆಚ್ಚದಲ್ಲಿ ತಯಾರಗುತ್ತಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅವರು ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೊರೊನಾ ವೈರಸ್‍ನ ಪರಿಣಾಮದಿಂದ ಅವರು ಈ ಸಿನಿಮಾದಿಂದ ಹೊರಬಂದಿದ್ದಾರೆ ಎಂದು ಹೇಳಲಾಗಿದೆ.
Advertisement
Advertisement
ಈ ಚಿತ್ರದ 75% ಚಿತ್ರೀಕರಣ ಮುಗಿಯಲು ಬಂದಿದೆ. ಅಂತಾಯೇ ಅಲಿಯಾ ಭಟ್ ಅವರು ಇರುವ ಚಿತ್ರದ ಭಾಗವನ್ನು ಚಿತ್ರತಂಡ ಇದೇ ತಿಂಗಳು ಚಿತ್ರೀಕರಣ ಮಾಡಲು ಪ್ಲಾನ್ ಕೂಡ ಮಾಡಿತ್ತು. ಇದಕ್ಕಾಗಿ ಆಲಿಯಾ ಕೂಡ ಡೇಟ್ ಕೊಟ್ಟಿದ್ದರು. ಆದರೆ ಭಾರತದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಸಿನಿಮಾ ಶೂಟಿಂಗ್ ಮಾಡಬೇಡಿ ಎಂದು ಸೂಚಿಸಿದ ಕಾರಣ ಚಿತ್ರೀಕರಣವನ್ನು ಮುಂದೂಡಲಾಗಿದೆ.
Advertisement
Advertisement
ಆರ್‌ಆರ್‌ಆರ್ ಚಿತ್ರಕ್ಕಾಗಿ ಎಂದೇ ಬ್ಯುಸಿ ವೇಳಾಪಟ್ಟಿಯ ನಡುವೆ ಆಲಿಯಾ ಡೇಟ್ ಕೊಟ್ಟಿದ್ದರು. ಈಗ ಕೊರೊನಾ ವೈರಸ್ ಹಿನ್ನೆಲೆ ಚಿತ್ರೀಕರಣ ಮುಂದೂಡಲಾದ ಪರಿಣಾಮ ಅವರಿಗೆ ಮತ್ತೆ ಸಿನಿಮಾಗೆ ಡೇಟ್ ಕೊಡಲು ಆಗುತ್ತಿಲ್ಲ. ಯಾಕೆಂದರೆ ಅಲಿಯಾ ಈ ಸಿನಿಮಾದ ನಂತರ ಸದಕ್ 2, ಬ್ರಹ್ಮಾಸ್ತ್ರ ಮತ್ತು ಸಂಜಯ್ ಲೀಲಾ ಭನ್ಸಾಲಿ ಅವರ ಗಂಗುಬಾಯಿ ಕಥಿಯಾವಾಡಿ ಎಂಬ ಸಾಲು ಸಾಲು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳ ನಡುವೆ ಮತ್ತೆ ಆರ್‌ಆರ್‌ಆರ್ ಚಿತ್ರಕ್ಕೆ ಡೇಟ್ ಕೊಡಲು ಸಾಧ್ಯವಿಲ್ಲ ಎಂದು ಅಲಿಯಾ ಹೇಳಿದ್ದಾರೆ ಎನ್ನಲಾಗಿದೆ.
ರಾಜಾಮೌಳಿ ಅವರು ಸಿನಿಮಾ ಪಾತ್ರವನ್ನು ಆಯ್ಕೆ ಮಾಡುವಾಗ ಯಾರಲ್ಲಿ ನೈಜ ಪ್ರತಿಭೆ ಇದೆಯೋ ಮತ್ತು ಸಿನಿಮಾಕ್ಕೆ ಯಾರು ದುಡಿಯುತ್ತಾರೋ ಅವರನ್ನು ಮಾತ್ರ ರಾಜಮೌಳಿ ಆಯ್ಕೆ ಮಾಡುತ್ತಾರೆ. ಈ ಕಾರಣದಿಂದಲೇ ಆಲಿಯಾ ಅವರು ಅಪಾರ ಪ್ರಮಾಣ ಹಣ ನೀಡಿ ಚಿತ್ರಕ್ಕಾಗಿ ಕರೆತಂದಿದ್ದರು ಎನ್ನಲಾಗಿತ್ತು. ಆದರೆ ಮೂಲಗಳ ಪ್ರಕಾರ ಮತ್ತೆ ಆಲಿಯಾ ಭಟ್ ಅವರ ಡೇಟ್ ಪಡೆಯಲು ರಾಜಾಮೌಳಿ ಆಲಿಯಾ ಮ್ಯಾನೇಜರ್ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.
400 ರಿಂದ 450 ಕೋಟಿ ರೂ. ಬಜೆಟ್‍ನಲ್ಲಿ ತಯಾರಾಗುತ್ತಿರುವ ಆರ್‌ಆರ್‌ಆರ್ ಸಿನಿಮಾದಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಅವರ ಪಾತ್ರದಲ್ಲಿ ರಾಮ್ ಚರಣ್ ಮತ್ತು ಕೊಮರಾಮ್ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‍ಟಿಆರ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಸೆಪ್ಟೆಂಬರ್ ವೇಳೆಗೆ ಚಿತ್ರೀಕರಣ ಪೂರ್ಣಗೊಳಿಸಿ 2021ರ ಜನವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.