ಪೋಷಕರ ಮೊಬೈಲ್‍ನಲ್ಲಿ ಸೆಕ್ಸ್ ವಿಡಿಯೋ ನೋಡಿ 10ರ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ!

Public TV
3 Min Read
mobile phone 760

– ಕೊಲೆಗೈದು ತನಿಖೆಯ ದಾರಿ ತಪ್ಪಿಸಿದ 15ರ ಪೋರ

ಮುಂಬೈ: ಪೋಷಕರ ಮೊಬೈಲ್‍ನಲ್ಲಿ ಸೆಕ್ಸ್ ವಿಡಿಯೋ ನೋಡಿದ್ದ 15 ವರ್ಷದ ಬಾಲಕನೊಬ್ಬ 10 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟು ಕೊಲೆಗೈದ ಘಟನೆ ಮುಂಬೈನಲ್ಲಿ ನಡೆದಿದ್ದು, ಪೊಲೀಸ್ ತನಿಖೆಯ ಬಳಿಕ ಸತ್ಯ ಬಯಲಿಗೆ ಬಂದಿದೆ.

ಈ ಘಟನೆಯು ಕಳೆದ ಗುರುವಾರ ನಡೆದಿದ್ದು, ಕೊಲೆಯಾಗಿದ್ದ ಬಾಲಕನ ಮೃತ ದೇಹವು ಸಪೇದ್ ಪುಲ್ ನಾಲಾದಲ್ಲಿ ತೇಲುತ್ತಿದ್ದ ಟ್ರಾಲಿ ಬ್ಯಾಗ್‍ನಲ್ಲಿ ಶನಿವಾರ ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು 15 ವರ್ಷದ ಬಾಲಕನ ಕೃತ್ಯವನ್ನು ಬಯಲು ಮಾಡಿದ್ದಾರೆ.

POLICE 15

ಘಟನೆಯ ವಿವರ:
ಕೊಲೆಯಾದ ಬಾಲಕ ಹಾಗೂ ಆರೋಪಿ ಬಾಲಕ ನೆರೆಹೊರೆ ಮನೆಯವರು. ಎಂದಿನಂತೆ 10 ವರ್ಷದ ಬಾಲಕ ಗುರುವಾರ ಸಂಜೆ ಟ್ಯೂಷನ್‍ಗೆ ಹೋಗುತ್ತಿದ್ದ. ಈ ವೇಳೆ ಆತನನ್ನು ತನ್ನ ಮನೆಗೆ ಕರೆದೊಯ್ದ ಆರೋಪಿ, ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಆತನ ವರ್ತನೆಯಿಂದ ಹೆದರಿದ ಬಾಲಕ ಕಿರುಚಾಡಿದ್ದಾನೆ. ಧ್ವನಿ ಜೋರಾಗುತ್ತಿದ್ದಂತೆ ಕೃತ್ಯ ಬಯಲಿಗೆ ಬರುತ್ತದೆ ಎಂದು ಅರಿತ ಆರೋಪಿ ಆತನ ಕುತ್ತಿಗೆ ಹಿಡಿದು ಬಲವಾಗಿ ಹಿಡಿದಿದ್ದಾನೆ. ಸುಮಾರು 15ರಿಂದ 20 ನಿಮಿಷ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಿದ್ದರಿಂದ ಉಸಿರುಗಟ್ಟಿಸಿ ಬಾಲಕ ಮೃತಪಟ್ಟಿದ್ದಾನೆ.

ಮೃತ ಬಾಲಕನ ಉಡುಪುಗಳನ್ನು ಬಿಚ್ಚಿ ಶವವನ್ನು ಮಾತ್ರ ಟ್ರಾಲಿ ಬ್ಯಾಗ್‍ನಲ್ಲಿ ಇಟ್ಟಿದ್ದಾನೆ. ಬಳಿಕ ಬಟ್ಟೆ ಹಾಗೂ ಸ್ಕೂಲ್ ಬ್ಯಾಗ್ ಅನ್ನು ಸಾರ್ವಜನಿಕ ಶೌಚಾಲಯದಲ್ಲಿ ಬಚ್ಚಿಟ್ಟು ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದಾನೆ. ಬಾಲಕನ ಮೃತದೇಹವನ್ನು ತನ್ನ ಸ್ನೇಹಿತನ ಸ್ಕೂಟರ್ ಮೇಲೆ ಸಪೇದ್ ಪುಲ್ ನಾಲಾವರೆಗೂ ಸಾಗಿಸಿದ್ದಾನೆ. ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ನಾಲೆಯಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದಾನೆ.

Bike

ಟ್ಯೂಷನ್‍ಗೆ ಹೋಗಿದ್ದ ಬಾಲಕ ಬಹಳ ಹೊತ್ತು ಕಳೆದರೂ ಬಾರದೇ ಇದ್ದಾಗ ಮನೆಯವರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ತನಗೆ ಏನು ಗೊತ್ತೇ ಇಲ್ಲ ಎನ್ನುವಂತೆ ಆರೋಪಿ ಬಾಲಕ ಕೂಡ ಅವರೊಂದಿಗೆ ಬಾಲಕನನ್ನು ಹುಡುಕಾಡುವ ನಾಟಕ ಮಾಡಿದ್ದಾನೆ.

ಪ್ರಕರಣಕ್ಕೆ ತಿರುವು ನೀಡಲು ಆರೋಪಿ ಬಾಲಕ ಗೆಳೆಯನೊಂದಿಗೆ ಸೇರಿ ಹೊಸ ಪ್ಲಾನ್ ಮಾಡಿದ್ದಾನೆ. ಮೃತ ಬಾಲಕನ ತಂದೆಗೆ ಫೋನ್ ಮಾಡಿ, ನಿಮ್ಮ ಮಗನನ್ನು ಅಪಹರಿಸಿದ್ದೇವೆ. ನಿಮಗೆ ಮಗ ಬೇಕು ಎಂದರೆ 5 ಲಕ್ಷ ರೂ. ನೀಡಬೇಕು ಅಂತ ಹೇಳು ಎಂದು ತನ್ನ ಸ್ನೇಹಿತನಿಗೆ ಕೇಳಿಕೊಂಡಿದ್ದಾನೆ. ಈ ಕೆಲಸಕ್ಕಾಗಿ ನಿನಗೆ 20 ಸಾವಿರ ರೂ. ನೀಡುತ್ತೇನೆ ಎಂದು ಆರೋಪಿ ತಿಳಿಸಿದ್ದ.

Sim Card

ಆರೋಪಿ ಬಾಲಕ ಹಾಗೂ ಸ್ನೇಹಿತ ಹೆಚ್ಚಾಗಿ ಕ್ರೈಂ ಶೋಗಳನ್ನು ನೋಡುತ್ತಿದ್ದರು. ಈ ಮೂಲಕ ತನಿಖೆಯ ದಾರಿ ತಪ್ಪಿಸಲು ಪ್ಲಾನ್ ಮಾಡುತ್ತಿದ್ದರು. ತಾವು ಬಳಸುತ್ತಿದ್ದ ಸಿಮ್‍ಗಳನ್ನು ಕೂಡ ಮುರಿದು ಹಾಕಿದ್ದರು.

ಆರೋಪಿ ಸಿಕ್ಕಿದ್ದು ಹೇಗೆ?:
ಬಾಲಕನನ್ನು ಕೊಲೆಗೈದಿದ್ದ ಆರೋಪಿ ಸ್ನೇಹಿತನ ಸ್ಕೂಟರ್ ನಲ್ಲಿ ಶವವನ್ನು ಸಾಗಿಸುತ್ತಿದ್ದ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಆರೋಪಿ ಬಾಲಕ ಸ್ಕೂಟರ್ ಮೇಲೆ ಟ್ರಾಲಿ ಬ್ಯಾಗ್ ಸಾಗಿಸುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.

Mumbai Police

ನನ್ನ ತಂದೆ ಹಾಗೂ ತಾಯಿ ಮೊಬೈಲ್‍ನಲ್ಲಿ ಗೇಮ್ ಆಡುತ್ತಿದ್ದೆ. ಒಂದು ದಿನ ಅವರ ಮೊಬೈಲ್‍ನಲ್ಲಿ ನೀಲಿ ಚಿತ್ರ ನೋಡಿದ್ದೆ. ಇದು ನನ್ನ ಮೇಲೆ ಕೆಟ್ಟ ಪರಿಣಾಮ ಬೀರಿತು. ಬಳಿಕ ಅದೇ ಅಭ್ಯಾಸವಾಯಿತು. ಇದೇ ಮುಂದೆ ಬಾಲಕನ ಮೇಲೆ ಅತ್ಯಾಚಾರಕ್ಕೆ ಪ್ರೇರಣೆ ನೀಡಿದ್ದ ಪರಿಣಾಮ ಘಟನೆ ನಡೆಯಿತು ಎಂದು ಆರೋಪಿ ಬಾಲಕ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *