9ರ ಬಾಲೆಯ ಮೇಲೆ ಅತ್ಯಾಚಾರ- ಕೊಲೆಗೈದು ದೇಹವನ್ನ ಶೌಚಾಲಯದಲ್ಲಿ ಎಸೆದ ಕಾಮಿ

Public TV
1 Min Read
Mumbai Rape

ಮುಂಬೈ: ವ್ಯಕ್ತಿಯೊಬ್ಬ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ ಅಮಾನವೀಯ ಘಟನೆ ಮುಂಬೈನ ವಿಲೆ ಪಾರ್ಲೆ ಪ್ರದೇಶದಲ್ಲಿ ನಡೆದಿದೆ.

ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಯ ಮೃತ ದೇಹವು ಶನಿವಾರ ಬೆಳಗ್ಗೆ ವಿಲೆ ಪಾರ್ಲೆ ಪ್ರದೇಶದ ಶೌಚಾಲಯದಲ್ಲಿ ಪತ್ತೆಯಾಗಿದೆ. ಈ ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಓದಿ: ಅಪ್ರಾಪ್ತ ಪುತ್ರಿ ಮೇಲೆಯೇ ಅತ್ಯಾಚಾರ ಎಸಗಿದ ಅಪ್ಪ

ಕೊಲೆಯಾದ ಬಾಲಕಿಯು ವಿಲೆ ಪಾರ್ಲೆ ಪ್ರದೇಶದಲ್ಲಿರುವ ನೆಹರು ನಗರದ ಚಾಲ್ವಾ ನಿವಾಸಿ. ಬಾಲಕಿ ನಾಪತ್ತೆಯಾಗಿರುವ ಕುರಿತು ಗುರುವಾರ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶೌಚಾಲಯದಲ್ಲಿ ಪತ್ತೆಯಾದ ಬಾಲಕಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜುಹು ಪೊಲೀಸ್ ಠಾಣೆಯ ಮುಂದೆ ನೂರಾರು ಜನರು ಸೇರಿದ್ದು, ಆರೋಪಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೆಲಹೊತ್ತು ಪೊಲೀಸ್ ಠಾಣೆಯ ಮುಂದೆ ನಿಂತು ಪ್ರತಿಭಟನೆ ಮಾಡಿದು.

ಈ ಸಂಬಂಧ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302 (ಅತ್ಯಾಚಾರ), 201 (ಸಾಕ್ಷಿ ನಾಶ) ಹಾಗೂ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Share This Article