ಬೆಂಗಳೂರು: ನೈರುತ್ಯ ರೈಲ್ವೆ ಇಲಾಖೆ (South Western Railway Department) ಬೆಂಗಳೂರಿಗರಿಗೆ ಸಿಹಿ ಸುದ್ದಿ ನೀಡಿದೆ. ರೈಲ್ವೆ ಪ್ರಯಾಣಿಕರನ್ನ ಸೆಳೆಯಲು ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್ (Multi Level Car Parking) ನಿರ್ಮಾಣ ಮಾಡುತ್ತಿದೆ. ಯಶವಂತಪುರ ರೈಲ್ವೆ ಸ್ಟೇಷನ್ ನಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಹಲವಾರು ಅಭಿವೃದ್ಧಿ ಕಾರ್ಯಗಳು ಆಗ್ತಿವೆ.
ಬೆಂಗಳೂರಿನ ರೈಲ್ವೆ ನಿಲ್ದಾಣಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರು ಸಂಚಾರ ಬೆಳೆಸೋ ನಿಲ್ದಾಣಗಳಲ್ಲಿ ಯಶವಂತಪುರ ರೈಲ್ವೆ ನಿಲ್ದಾಣ (Yeshwanthpur Railyway Station) ಕೂಡ ಒಂದು. ಪ್ರತಿನಿತ್ಯ ಒಂದು ಲಕ್ಷ ಪ್ರಯಾಣಿಕರು ಸಂಚಾರ ಮಾಡೋ ಯಶವಂತಪುರ ರೈಲ್ವೆ ಸ್ಟೇಷನ್‍ನನ್ನು ನೈರುತ್ಯ ರೈಲ್ವೆ ಇಲಾಖೆ ಅಭಿವೃದ್ಧಿ ಮಾಡಲು ಮುಂದಾಗಿದೆ. ರೈಲ್ವೆ ಸ್ಟೇಷನ್‍ನ ಪೂರ್ವ ಭಾಗದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಿರ್ಮಾಣ ಹಂತದಲ್ಲಿ ಇದೆ.
ಕಾರು ಪಾರ್ಕಿಂಗ್ ವಿಶೇಷತೆ ಏನು?: 6 ಸಾವಿರ ಚದರ್ ಕಿಮೀ ಇರೋ ಈ ಕಾರ್ ಪಾರ್ಕಿಂಗ್ ನಲ್ಲಿ 90 ದ್ವಿಚಕ್ರ ವಾಹನಗಳು, 90 ಕಾರುಗಳನ್ನ ನಿಲ್ಲಿಸಬಹುದಾಗಿದೆ. ಪೂರ್ವ ಭಾಗದಲ್ಲಿ ಕಟ್ಟಡ ನಿರ್ಮಾಣ ಆದ ನಂತರ, ಪಶ್ಚಿಮ ಭಾಗದ ರೈಲ್ವೆ ಸ್ಟೇಷನ್ ಅಂದರೆ ಯಶವಂತಪುರ ಮೆಟ್ರೋ ರೈಲ್ವೆ ನಿಲ್ದಾಣದ ಕಡೆ ಮತ್ತೊಂದು ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಾಣ ಆಗಲಿದೆ. 2024-25ರ ಅಷ್ಟೊತ್ತಿಗೆ ಈ ಕಾಮಗಾರಿ ಮುಕ್ತಾಯ ಆಗಲಿದ್ದು, ನಂತರ ಸಾರ್ವಜನಿಕ ಅನುಕೂಲಕ್ಕೆ ಅವಕಾಶ ಕೊಡಲಾಗುತ್ತೆ. ಇದನ್ನೂ ಓದಿ; ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಪಾಸ್ – ಇಬ್ಬರಿಂದ ಮಾತ್ರ ವಿರೋಧ
ಒಟ್ಟಾರೆ ಬೆಂಗಳೂರಿನಲ್ಲಿ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ವಿಶೇಷತೆ ಇದೆ. ರೈಲ್ವೇ ಪ್ರಯಾಣಿಕರಿಗೆ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ತುಂಬಾ ಅನುಕೂಲಕರ ಆಗಲಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]