ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ (Karnataka Maharshi Valmiki Scheduled Tribe Development Corporation Ltd) ಸಚಿವ ನಾಗೇಂದ್ರ ರಾಜೀನಾಮೆ ಪಡೆಯುವಂತೆ ಸಿಎಂ ಸಿದ್ದರಾಮಯ್ಯರನ್ನ (Siddaramaiah) ಬಿಜೆಪಿ ಆಗ್ರಹ ಮಾಡಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಿಎಂಗೆ ಆಗ್ರಹಿಸಿರುವ ಬಿಜೆಪಿ, ಒಂದು ವೇಳೆ ನಾಗೇಂದ್ರ ರಾಜೀನಾಮೆ ಪಡೆಯದೇ ಹೋದ್ರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆಯನ್ನು ಕೂಡ ನೀಡಿದೆ.
ಸಿಎಂ ಸಿದ್ದರಾಮಯ್ಯ ಅವರೇ, ವಾಲ್ಮೀಕಿ ಸಮುದಾಯಕ್ಕೆ ನಿಮ್ಮ ಸರ್ಕಾರ ಮಾಡಿರುವ ಮಹಾಮೋಸದ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ನಿಮ್ಮಲ್ಲಿ ಅಲ್ಪಸ್ವಲ್ಪವಾದರೂ ನೈತಿಕತೆ ಉಳಿದಿದ್ದರೆ ಇನ್ನಾದರೂ ಸಂಬಂಧಪಟ್ಟ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು.
ಸಚಿವ ನಾಗೇಂದ್ರ ರಾಜಿನಾಮೆ ನೀಡುವವರೆಗೂ ಬಿಜೆಪಿ (BJP) ಹೋರಾಟವನ್ನು ಮುಂದುವರಿಸುತ್ತದೆ ಹಾಗೂ ಇನ್ನೂ ತೀವ್ರಗೊಳಿಸುತ್ತದೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ಹಗರಣ – ಇಂದೇ ನಾಗೇಂದ್ರ ರಾಜೀನಾಮೆ ಸಾಧ್ಯತೆ!