ಕನ್ನಡವೂ ಸೇರಿದಂತೆ ಬಾಲಿವುಡ್ ನ ಹಲವು ಸಿನಿಮಾಗಳಲ್ಲಿ ನಟಿಸಿರುವ ಜಾಕ್ವೇಲಿನ್ ಫರ್ನಾಂಡಿಸ್ (Jacqueline Fernandes) ಅವರಿಗೆ ಕೊನೆಗೂ ಜಾಮೀನು ಸಿಕ್ಕಿದೆ.
2 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಟಿಗೆ ಜಾಮೀನು (Bail) ಮಂಜೂರು ಮಾಡಿದೆ.
Advertisement
Advertisement
ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಸ್ನೇಹಿತ ಸುಕೇಶ್ ಚಂದ್ರಶೇಖರ್ (Sukesh Chandrasekhar) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತಿಂಗಳುಗಳಿಂದ ಜಾಕ್ವೆಲಿನ್ ಅವರ ವಿಚಾರಣೆಯನ್ನು ಇಡಿ ನಡೆಸುತ್ತಿದೆ. ಈ ಕಾರಣಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದ ಜಾಕ್ವೇಲಿನ್ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ಖುದ್ದಾಗಿ ಹಾಜರಾಗಿದ್ದರು.
Advertisement
ಇದನ್ನೂ ಓದಿ:ಡಿವೋರ್ಸ್ ವದಂತಿಯ ನಡುವೆ ಸಾನಿಯಾ ಮಿರ್ಜಾ ಬರ್ತ್‌ಡೇಗೆ ಶೋಯೆಬ್ ಮಲಿಕ್ ವಿಶ್
Advertisement
200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ, ಇದರ ಪ್ರಮುಖ ಕಿಂಗ್ ಪಿನ್ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಸ್ನೇಹ ಹೊಂದಿದ್ದರು. ಅಲ್ಲದೇ, ಈ ಹಣದಲ್ಲೇ ನಟಿಗೆ ದುಬಾರಿ ವಸ್ತುಗಳನ್ನು ಸುಕೇಶ್ ನೀಡಿದ್ದಾರೆ ಎನ್ನುವ ಆರೋಪವಿದೆ. ಕುದುರೆ, ಕಾರು, ವಾಚ್, ದುಬಾರಿ ಬ್ಯಾಗ್ ಸೇರಿದಂತೆ ಹಲವು ವಸ್ತುಗಳನ್ನು ಜಾಕ್ವೆಲಿನ್ ಪಡೆದುಕೊಂಡಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಎಲ್ಲ ಆರೋಪಗಳನ್ನೂ ಜಾಕ್ವೇಲಿನ್ ತಳ್ಳಿ ಹಾಕಿದ್ದಾರೆ. ಸುಕೇಶ್ ಜೊತೆಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೇ, ಬಹುತೇಕ ವಸ್ತುಗಳನ್ನು ತಾವೇ ತಮ್ಮ ಸ್ವಂತ ಹಣದಲ್ಲೇ ಖರೀದಿಸಿರುವುದಾಗಿ ತಿಳಿಸಿದ್ದಾರೆ.