ಬೆಂಗಳೂರು: ಮುಲಾಯಂ ಸಿಂಗ್ ಯಾದವ್ (Mulayam Singh Yadav) ನಿಧನ ನೋವು ತಂದಿದೆ. ಅವರ ಆದರ್ಶಗಳನ್ನು ಜೀವಂತ ಇಡೋ ದೊಡ್ಡ ಸಮುದಾಯವನ್ನೇ ದೇಶದಲ್ಲಿ ಸೃಷ್ಟಿಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ (C M Ibrahim) ಹೇಳಿದ್ದಾರೆ.
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೂಡಾ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸುತ್ತೇನೆ. ಇಂದು ಸಂಜೆ ಲಕ್ನೋಗೆ ಹೋಗಿ ನಾಳೆ ಅಂತಿಮ ದರ್ಶನದಲ್ಲಿ ಭಾಗವಹಿಸುತ್ತೇನೆ. ರೇವಣ್ಣ (HD Revanna) ಕೂಡಾ ಬರ್ತೀನಿ ಅಂದಿದ್ದಾರೆ. ಆರು ತಿಂಗಳಿಂದಲೂ ಮುಲಾಯಂ ಸಿಂಗ್ ಯಾದವ್ ಆರೋಗ್ಯ ಕೈಕೊಟ್ಟಿತ್ತು ಎಂದು ತಿಳಿಸಿದರು.
Advertisement
Advertisement
ಹಿಂದಿ ಬಳಕೆಗೆ ಒತ್ತು ಕೊಡುವಂತೆ ಕೋರಿ ರಾಷ್ಟ್ರಪತಿಗಳಿಗೆ ಅಮಿತ್ ಶಾ ಪತ್ರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಸ್ಸಾಂ, ಗುಜರಾತ್, ಒರಿಸ್ಸಾ, ಪಶ್ಚಿಮ ಬಂಗಾಳ, ರಾಜಸ್ಥಾನ ಹೀಗೆ ಹಲವು ಕಡೆ ಹಿಂದಿಯೇ ಇಲ್ಲ. ಬಿಜೆಪಿ ದೇಶ ವಿಭಜನಗೆ ಇಂಬು ಕೊಡುತ್ತಿದೆ. ನಮ್ಮ ಭಾಷೆ ನಮಗೆ ಚಂದ. ಇದಕ್ಕೆಲ್ಲ ಕೈಹಾಕಿ ವಾತಾವರಣ ಕದಡಬೇಡಿ ಎಂದರು. ಇದನ್ನೂ ಓದಿ: ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ನಿಧನ
Advertisement
ಮುಸ್ಲಿಮರ 2ಬಿ ಮೀಸಲಾತಿ ರದ್ದು ಅಥವಾ ಕಡಿತಕ್ಕೆ ಬಿಜೆಪಿ (BJP) ಯಲ್ಲಿ ಚಿಂತನೆ ವಿಚಾರದ ಕುರಿತು ಮಾತನಾಡುತ್ತಾ ಖಂಡಿಸಿದ ಸಿಎಂ ಇಬ್ರಾಹಿಂ, ಮುಸ್ಲಿಮರಿಗೆ 2ಬಿ ಮೀಸಲಾತಿ ಶಾಸನಬದ್ಧವಾಗಿ ಸಿಕ್ಕಿದೆ. ಅರವಿಂದ ಬೆಲ್ಲದ್ ಅವರಪ್ಪ ಇದ್ದಾಗ ಕೊಟ್ಟಿದ್ದಲ್ಲ. ಬೆಲ್ಲದ್, ತುಪ್ಪದ್ ಅಂತ ಸುಡುಗಾಡು ಹೆಸರುಗಳಿವೆಯಲ್ಲ. ಇವರೆಲ್ಲ ಇದಕ್ಕೆ ದಯವಿಟ್ಟು ಕೈಹಾಕಲು ಹೋಗಬೇಡಿ ಎಂದು ಹೇಳಿದರು.