ರಾಯಚೂರು: ಮೀಸಲಾತಿ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಚುನಾವಣೆಗೆ ಕಣ್ಣೊರೆಸುವ ತಂತ್ರ ಮಾಡಿದ್ದಾರೆ. ಇದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ರೀತಿ ಮಾಡಿದ್ದಾರೆ ಅಂತ ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು (Mukhyamantri Chandru) ಆರೋಪಿಸಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಮೈನಾರಿಟಿಯವರ ಶೇ.4 ಮೀಸಲಾತಿಯನ್ನ ತೆಗೆದಿದ್ದಾರೆ, ಅದೆಲ್ಲಿ ಅವರಿಗೆ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. 2 ಡಿ, 2 ಸಿ ಅಂತ ಮಾಡಿದ್ದಾರೆ. ಇವೆಲ್ಲಾ ಕೇವಲ ಚುನಾವಣಾ ಗಿಮಿಕ್ಸ್. ಬಿಜೆಪಿ ಪಕ್ಷಕ್ಕೆ ಭವಿಷ್ಯ ಇಲ್ಲಾ ಬರೀ ಸುಳ್ಳು, ಭರವಸೆಗಳನ್ನು ನೀಡುತ್ತಲೇ ಬಂದಿದೆ. ಈ ಸರ್ಕಾರ ಬರೀ ಜಾಹಿರಾತಿಗೆ ಹಣ ಖರ್ಚು ಮಾಡುತ್ತಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಅಶೋಕ್ ಖೇಣಿಗೆ ಟಿಕೆಟ್ ಮಾರಿಕೊಂಡಿದೆ – ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಚಂದ್ರಾಸಿಂಗ್ ಕಿಡಿ
ಸಿಎಂ ಬೊಮ್ಮಾಯಿ ಬುದ್ಧಿವಂತರಿದ್ದಾರೆ. ಆದರೆ ಅವರಿಗೆ ಶಕ್ತಿಯಿಲ್ಲ. ಸಿಎಂ ರಿಮೋಟ್ ಕಂಟ್ರೋಲ್ ನಿಂದ ಕೆಲಸ ಮಾಡುತ್ತಿದ್ದಾರೆ. ನಾಲ್ಕು ಭಾಗದಿಂದ ಸಿಎಂಗೆ ಒತ್ತಡ ತರುತ್ತಿದ್ದಾರೆ. ಯಡಿಯೂರಪ್ಪ ಅವರ ಕುಟುಂಬದವರು, ಆರ್ ಎಸ್‍ಎಸ್ (RSS), ಮೋದಿ (Modi) ಮತ್ತು ಅಮಿತ್ ಶಾ (AmitShah) ರಿಂದ ಒತ್ತಡವಿದೆ. ಅವರುಗಳ ಒತ್ತಾಯದ ಮೇರೆಗೆ ಸಿಎಂ ಮಾತನಾಡಬೇಕಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ನಿಮ್ಮ ಬುದ್ಧಿಯನ್ನ ನೀವು ಉಪಯೋಗಿಸಲು ಆಗುತ್ತಿಲ್ಲ ಎಂದು ಹೇಳಿದರು.
ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಹೀನಾಯ ಸ್ಥಿತಿ ಬಂದಿದೆ. ಇನ್ನೂ ಕಾಂಗ್ರೆಸ್ (Congress) ನವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆಮ್ ಆದ್ಮಿ ಕೊಟ್ಟ ಯೋಜನೆಗಳನ್ನು ನಂದು ಅಂತ ಹೇಳಿದರೆ ಗೆಲ್ಲಿಸಬೇಕು ಭ್ರಷ್ಟರಿಗೆ ಟಿಕೆಟ್ ಕೊಟ್ಟಿದ್ದಿರಿ, ಭ್ರಷ್ಟಾಚಾರದ ಪರವಾಗಿರುವಾಗ ನಿಮ್ಮನ್ನ ಜನ ಯಾಕೆ ಗೆಲ್ಲಿಸಬೇಕು ಅಂತ ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದರು.