ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಿರಿಯ ನಾಯಕ ಮುಕುಲ್ ರಾಯ್ ಸಿಂಗ್ ಪಕ್ಷದ ಕಾರ್ಯಕಾರಿ ಸಮಿತಿಗೆ ರಾಜೀನಾಮೆ ನೀಡಿದ್ದಾರೆ.
ದುರ್ಗಾ ಪೂಜೆಯ ನಂತರ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವುದಾಗಿ ಹಾಗೂ ನಾನು ಯಾಕೆ ರಾಜೀನಾಮೆ ನೀಡುತ್ತಿದ್ದೇನೆ ಎನ್ನುವುದಕ್ಕೆ ಕಾರಣಗಳನ್ನು ತಿಳಿಸುವುದಾಗಿ ಹೇಳಿದ್ದಾರೆ. ತನಗೆ ಪಕ್ಷದಿಂದ ಹೊರ ನಡೆಯುವಂತೆ ಹಲವರು ಒತ್ತಡವನ್ನು ಹೇರಿದ್ದರು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
Advertisement
ಮುಕುಲ್ ರಾಯ್ ಪಕ್ಷಕ್ಕೆ ರಾಜೀನಾಮೆಯನ್ನು ನೀಡಿದ ಕೆಲವೇ ಘಂಟೆಗಳಲ್ಲಿ ಟಿಎಂಸಿ ನಾಯಕ ಪಾರ್ಥ ಚಟರ್ಜಿ, ರಾಯ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿರುವುದಾಗಿ ಆದೇಶ ಹೊರಡಿಸಿದ್ದಾರೆ.
Advertisement
ಮುಕುಲ್ ರಾಯ್ ಅವರು ಬಿಜೆಪಿ ಸೇರುವ ಸಾಧ್ಯತೆಯಿದ್ದು, ಈ ಮಾಹಿತಿ ನಿಜವಾದರೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಬೆಂಬಲ ಲಭಿಸಿದಂತಾಗುತ್ತದೆ. ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಯ್, ನನ್ನ ಮುಂದಿನ ರಾಜಕೀಯ ನಿಲುವುಗಳ ಬಗ್ಗೆ ತಿಳಿಸುತ್ತೇನೆ. ಕೊಲ್ಕತ್ತಾ ಜನರಿಗೆ ದುರ್ಗಾ ಪೂಜೆಯ ವೇಳೆಯಲ್ಲಿ ರಾಜಕೀಯ ಸಂಘರ್ಷ ಕುರಿತು ಮಾತನಾಡುವುದು ಇಷ್ಟವಾಗುವುದಿಲ್ಲ ಎಂದರು.
Advertisement
ರಾಯ್ ಅವರ ರಾಜೀನಾಮೆಗೆ ಟಿಎಂಸಿ ಪಕ್ಷ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಭಿನ್ನಾಭಿಪ್ರಾಯಗಳೇ ಕಾರಣ ಎಂದು ತಿಳಿದು ಬಂದಿದೆ. ರಾಯ್ ಅವರು ಹಲವು ದಿನಗಳ ಮುಂಚೆಯೇ ಪಕ್ಷ ತೆರೆಯುವ ಕುರಿತು ಸೂಚನೆಯನ್ನು ನೀಡಿದ್ದರು. ಟಿಎಂಸಿ ರಾಜ್ಯಸಭಾ ನಾಯಕ ಸ್ಥಾನದಿಂದ ಇವರನ್ನು ಕೆಳಗಿಳಿಸಿತ್ತು. ಅಲ್ಲದೆ ಸಾರಿಗೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಂಸತ್ತಿನ ಸ್ಥಾಯಿ ಸಮಿತಿಯ ಮುಖ್ಯಸ್ಥ ಸ್ಥಾನದಿಂದಲೂ ತೆಗೆದು ಹಾಕಲಾಗಿತ್ತು.
Advertisement
ಕಳೆದ ಕೆಲವು ದಿನಗಳ ಹಿಂದೆ ಟಿಎಂಸಿಯ ಹಿರಿಯ ನಾಯಕರೊಬ್ಬರು ಮಮತಾ ಅವರು ಪಕ್ಷದ ಹೃದಯವಾದರೆ, ರಾಯ್ ಪಕ್ಷದ ತಲೆ ಇದ್ದ ಹಾಗೆ ಎಂದು ಹೇಳಿಕೆ ನೀಡಿದ್ದರು. ಮಮತಾ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಯ್ ಪಕ್ಷದ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ರಾಷ್ಟ್ರಪತಿ ಚುನಾವಣೆ ವೇಳೆ ಟಿಎಂಸಿ ಅಡ್ಡಮತದಾನ ಮಾಡಿ ರಾಮನಾಥ್ ಕೋವಿಂದ್ ಬೆಂಬಲ ನೀಡಿದ್ದಕ್ಕೆ ಮಮತಾ ಬ್ಯಾನರ್ಜಿ ಅಸಮಾಧಾನಗೊಂಡಿದ್ದರು. ಈ ಚುನಾವಣೆಯ ನಂತರ ಪಕ್ಷದಲ್ಲಿ ಅಂತರಿಕ ಒಡಕು ಉಂಟಾಗಿತ್ತು.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸ್ಥಾಪನೆಯಿಂದ ಅಧಿಕಾರವನ್ನು ಪಡೆಯುವ ತನಕ ಮುಕುಂದ್ ಅವರ ಕಾರ್ಯ ಮಹತ್ವ ಪೂರ್ಣವಾದ್ದು. ಮುಕುಂದ್ ಅವರ ರಾಜೀನಾಮೆಯು ಟಿಎಂಸಿಯಲ್ಲಿ ಭಾರೀ ಬದಲವಾಣೆಗೆ ಕಾರಣವಾಗಲಿದೆ ಎನ್ನುವ ವಿಶ್ಲೇಷಣೆ ಆರಂಭವಾಗಿದೆ.
ಮುಕುಲ್ ರಾಯ್ ಅವರ ಮಗ ಶುಬ್ರನ್ಸು ರಾಯ್ ಪ್ರತಿಕ್ರಿಯಿಸಿದ್ದು, ತಂದೆ ರಾಜೀನಾಮೆ ನೀಡಿದರೂ ನಾನು ಟಿಎಂಸಿ ತೊರೆಯುವುದಿಲ್ಲ ಎಂದು ಹೇಳಿದ್ದಾರೆ.