ಮೈಸೂರು: ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ನಾಯಿಗಳಿದ್ದಂತೆ. ಈ ಬಾರಿ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿ ಎಂದು ಪ್ರಚಾರದ ವೇಳೆ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ನಗರದ ಆಂದೋಲನ ವೃತ್ತದ ಬಳಿ ಪ್ರಗತಿಪರರು ನಡೆಸಿದ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇನ್ನು ಮುಂದೆ ಬಾಗಿಲಿಗೆ ನಾಯಿ ಇದೆ ಎಚ್ಚರಿಕೆ ಅನ್ನುವ ಬದಲು ಬಿಜೆಪಿಯಿದೆ ಎಚ್ಚರಿಕೆ, ಜೆಡಿಎಸ್ ಇದೆ ಎಚ್ಚರಿಕೆ ಅಂತಾ ಬೋರ್ಡ್ ಹಾಕಿಕೊಳ್ಳಬೇಕಿದೆ ಎಂದು ಹೇಳಿ ಲೇವಡಿ ಮಾಡಿದರು.
Advertisement
ಕ್ವಿಟ್ ಇಂಡಿಯಾ ಮೂಲಕ ಬ್ರಿಟೀಷರೆ ದೇಶ ಬಿಟ್ಟು ತೊಲಗಿ ಅಂತಾ ಹೇಳುತ್ತಾ ಇದ್ವಿ. ಈಗ ಬಿಜೆಪಿಯವರೇ ಅಧಿಕಾರ ಬಿಟ್ಟು ತೊಲಗಿ. ಸಾಧ್ಯವಾದಲ್ಲಿ ಭಾರತ ಬಿಟ್ಟು ತೊಲಗಿ. ಜೆಡಿಎಸ್ ನವರೇ ಜಾತಿ ಬಿಟ್ಟು ತೊಲಗಿ ಎನ್ನಬೇಕಿದೆ ಎಂದು ವಾಗ್ದಾಳಿ ನಡೆಸಿದರು.
Advertisement
ಒಂದು ಕಡೆ ಕೋಮುವಾದ ಮತ್ತೊಂದು ಕಡೆ ಜಾತಿವಾದವಿದೆ. ಸಾಮಾಜಿಕ ನ್ಯಾಯವನ್ನು ಕೊಡುವ ಪಕ್ಷ ಕಾಂಗ್ರೆಸ್. ನಮ್ಮ ಉದ್ದೇಶ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು. ಎಲ್ಲರನ್ನ ಒಂದಾಗಿ ಕರೆದುಕೊಂಡು ಹೋಗೋದು ಕಾಂಗ್ರೆಸ್ ಮಾತ್ರ ಎಂದು ಸಿದ್ದರಾಮಯ್ಯನವರ ಪರ ಪ್ರಚಾರ ಮಾಡಿದರು.
Advertisement
ಸಿದ್ದರಾಮಯ್ಯನವರನ್ನು ಗೆಲ್ಲಿಸುವುದರ ಮೂಲಕ ಪ್ರಗತಿಪರರ ಉದ್ದೇಶ ಸಂವಿಧಾನದ ಉಳಿವು ಮತ್ತು ಕೋಮುವಾದದ ಅಳಿವಿಗೆ ನಾಂದಿ ಹಾಡಬೇಕಾಗಿ ಕೇಳಿಕೊಂಡರು.
Advertisement
ಈ ಕಾರ್ಯಕ್ರಮದಲ್ಲಿ ಕೆ.ಎಸ್ ಭಗವಾನ್, ಮುಖ್ಯಮಂತ್ರಿ ಚಂದ್ರು, ಜನಾರ್ದನ್, ಅರವಿಂದ ಮಾಲಗತ್ತಿ, ಡಾ.ಎಸ್‍ಜಿ ಸಿದ್ದರಾಮಯ್ಯ ,ಡಾ ಮರುಳಸಿದ್ದಪ್ಪ ಅವರು ಭಾಗಿಯಾಗಿದ್ದರು.