LatestLeading NewsMain PostNational

ಸಲೂನ್ ಉದ್ಯಮಕ್ಕೂ ರಿಲಯನ್ಸ್ ಎಂಟ್ರಿ

ಮುಂಬೈ: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ನೇತೃತ್ವದ ರಿಲಯನ್ಸ್ ಕಂಪನಿ ಇದೀಗ ಸಲೂನ್ ಉದ್ಯಮಕ್ಕೂ ಕಾಲಿಡುತ್ತಿದೆ. ಅದಕ್ಕಾಗಿ ಚೆನ್ನೈ ಮೂಲದ `ನ್ಯಾಚುರಲ್ಸ್ ಸಲೂನ್ ಅಂಡ್ ಸ್ಪಾ’ (Naturals Salon and Spa) ಕಂಪನಿಯ ಶೇ.49ರಷ್ಟು ಪಾಲನ್ನು ಖರೀದಿಸಲು ಮಾತುಕತೆ ನಡೆಸುತ್ತಿದ್ದು, ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

ರಿಲಯನ್ಸ್ ಸಲೂನ್ ಉದ್ಯಮಕ್ಕೆ (Reliance Industries) ಕಾಲಿಡುವ ಮೂಲಕ ಹಿಂದೂಸ್ತಾನ್ ಯುನಿಲೀವರ್‌ನ ಲ್ಯಾಕ್ಮೆ ಬ್ರ‍್ಯಾಂಡ್, ಎನ್ರಿಚ್ ಮತ್ತು ಗೀತಾಂಜಲಿಯಂಥ ಇತರ ಸ್ಥಳೀಯ ಬ್ರ‍್ಯಾಂಡ್‌ಗಳಿಗೂ ಪೈಪೋಟಿ ನೀಡಲಿದೆ ಎಂದು ರಿಲಯನ್ಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಾಕ್ ರಿಜ್ವಾನ್ ಹಿಂದಿಕ್ಕಿ ನಂ.1 ಪಟ್ಟಕ್ಕೆ ಏರಿದ ಸೂರ್ಯ

ಈ ಕುರಿತು ಮಾತನಾಡಿರುವ ನ್ಯಾಚುರಲ್ಸ್ ಸಲೂನ್ ಅಂಡ್ ಸ್ಪಾ ಸಿಇಒ ಸಿಕೆ ಕಮಾರವೇಲ್ ಮಾತನಾಡಿ, ದೇಶಾದ್ಯಂತ ಗ್ರೂಮ್‌ ಇಂಡಿಯಾ ಸಲೂನ್ಸ್ ಅಂಡ್ ಸ್ಪಾ (Groom India Salons & Spa) 700 ನ್ಯಾಚುರಲ್ ಸಲೂನ್‌ಗಳನ್ನು ನಡೆಸುತ್ತಿದೆ. ರಿಲಯನ್ಸ್ ಹೂಡಿಕೆಯಿಂದ ನಮ್ಮ ನೆಟ್‌ವರ್ಕ್ ಅನ್ನು ಇನ್ನಷ್ಟು ವಿಸ್ತರಿಸಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ED ಪ್ರಕರಣದಲ್ಲಿ ಬಂಧನದ ಭೀತಿ – ಮಧ್ಯಂತರ ರಕ್ಷಣೆ ಕೋರಿ ಡಿಕೆಶಿ ಕೋರ್ಟ್ ಮೊರೆ

ಯಾವುದೇ ಸಂಭಾವ್ಯ ಒಪ್ಪಂದದ ಬಗ್ಗೆ ಉಲ್ಲೇಖಿಸಲಾಗಿಲ್ಲ. ಸರಿ ಸುಮಾರು 2 ಸಾವಿರ ಇಸ್ವಿಯಲ್ಲಿ ಸ್ಥಾಪಿಸಲಾದ ಚೆನ್ನೈ ಮೂಲದ ನ್ಯಾಚುರಲ್ಸ್ ಸಲೂನ್ ಅಂಡ್ ಸ್ಪಾ 2025ರ ವೇಳೆಗೆ 3,000 ಸಲೂನ್‌ಗಳನ್ನು ನಡೆಸುವ ಗುರಿಯನ್ನು ಹೊಂದಿದೆ ಎಂದು ಅದರ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

Live Tv

Leave a Reply

Your email address will not be published. Required fields are marked *

Back to top button