ಮುಂಬೈ: 2030ರ ವೇಳೆಗೆ ಭಾರತ ವಿಶ್ವದ 3ನೇ ಅತೀ ದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್‍ಐಎಲ್) ಮುಖ್ಯಸ್ಥ ಮುಕೇಶ್ ಅಂಬಾನಿ ಭವಿಷ್ಯ ನುಡಿದಿದ್ದಾರೆ.
ಏಷ್ಯಾ ಆರ್ಥಿಕ ಸಂವಾದ(ಎಇಡಿ)ದಲ್ಲಿ ಮಾತನಾಡಿದ ಕೋಟ್ಯಧಿಪತಿ ಉದ್ಯಮಿ ಅಂಬಾನಿ ಈಗಿನ ಪ್ರಪಂಚದ ಮೂರನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ದೇಶ ಜಪಾನ್‍ಅನ್ನು ಭಾರತ ಹಿಂದಿಕ್ಕಲಿದೆ. ಈ ಮೂಲಕ ಭಾರತ ಏಷ್ಯಾದ 2ನೇ ಅತೀ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಲಿದೆ ಎಂಬ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: 100 ಡಾಲರ್ ಗಡಿಯಲ್ಲಿ ಕಚ್ಚಾ ತೈಲ – ಭಾರೀ ಬೆಲೆ ಏರಿಕೆ ಸಾಧ್ಯತೆ
Advertisement
Advertisement
ಮುಂದಿನ 20 ವರ್ಷಗಳಲ್ಲಿ ಭಾರತ ಹಸಿರು ಶಕ್ತಿ ಸೂಪರ್ ಪವರ್ ರಫ್ತು ಮಾಡುವ ರಾಷ್ಟ್ರವಾಗಲಿದೆ. ಭಾರತ ಸ್ವಾವಲಂಬಿಯಾಗಿ ಹಸಿರು ಹಾಗೂ ಶುದ್ಧ ಶಕ್ತಿಯನ್ನು ಉತ್ಪಾದಿಸುತ್ತಿದ್ದಂತೆ ಜಾಗತಿಕವಾಗಿ ಇತರ ದೇಶಗಳನ್ನು ಹಿಂದಿಕ್ಕಲು ಸಾಧ್ಯವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ವಿಶ್ವದ ನಂ.1 ಚೆಸ್ ಆಟಗಾರನ ವಿರುದ್ಧ ಗೆಲುವು – ಮೋದಿಯಿಂದ ಪ್ರಜ್ಞಾನಂದನಿಗೆ ಅಭಿನಂದನೆ
Advertisement
ಕಳೆದ 20 ವರ್ಷಗಳಲ್ಲಿ ಭಾರತ ತಂತ್ರಜ್ಞಾನದಲ್ಲಿ ಮುಂದುವರಿದು ಈ ಹಂತಕ್ಕೆ ತಲುಪಿದೆ. ಇದೇ ರೀತಿ ಮುಂದಿನ 20 ವರ್ಷಗಳಲ್ಲಿ ಶಕ್ತಿ ಹಾಗೂ ಜೀವವಿಜ್ಞಾನದಲ್ಲಿ ಮಹಾಶಕ್ತಿಯಾಗಿ ಹೊರಹೊಮ್ಮಲಿದೆ ಎಂಬ ಬಗ್ಗೆ ನನಗೆ ನಂಬಿಕೆ ಇದೆ ಎಂದು ಹೇಳಿದರು. ಇದರೊಂದಿಗೆ 2030ರ ಹೊತ್ತಿಗೆ ಏಷ್ಯಾ ಜಾಗತಿಕ ಬೆಳವಣಿಗೆಗೆ ಶೇ. 60ರಷ್ಟು ಕೊಡುಗೆ ನೀಡಲಿದೆ ಎಂದು ಅಂಬಾನಿ ಭವಿಷ್ಯ ನುಡಿದಿದ್ದಾರೆ.