ಜೈಪುರ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಅವರಿಂದು ಕುಟುಂಬಸ್ಥರೊಂದಿಗೆ ಮತಚಲಾಯಿಸಿದರು. ಮುಂಬೈನ ಮಲಬಾರ್ ಹಿಲ್ ಮತಗಟ್ಟೆಯಲ್ಲಿ ಪತ್ನಿ ನೀತಾ ಅಂಬಾನಿ, ಪುತ್ರ ಆಕಾಶ್ ಅಂಬಾನಿಯೊಂದಿಗೆ (Akash Ambani) ಬಂದು ಹಕ್ಕು ಚಲಾಯಿಸಿದರು.
#WATCH | Maharashtra: Reliance Industries Chairman Mukesh Ambani says, “Every Indian should vote and I appeal to everyone to vote.” #LokSabhaElection2024 pic.twitter.com/ynL0zQM2qF
— ANI (@ANI) May 20, 2024
Advertisement
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮುಕೇಶ್ ಅಂಬಾನಿ, ಭಾರತೀಯ ಪ್ರಜೆಯಾಗಿ ಮತದಾನ ಮಾಡಬೇಕಾದದ್ದು ನಮ್ಮ ಕರ್ತವ್ಯ. ಇದು ಪ್ರಜಾಪ್ರಭುತ್ವ ದೇಶ, ಪ್ರತಿಯೊಬ್ಬ ಭಾರತೀಯನೂ ವೋಟ್ (Vote) ಮಾಡಬೇಕು ಎಂಬುದು ನನ್ನ ಮನವಿ ಎಂದು ನುಡಿದರು. ಇದೇ ವೇಳೆ, ಭಾರತೀಯ ಪ್ರಜೆಯಾಗಿ ಮತದಾನ ಮಾಡುವುದು ಮುಖ್ಯ. ಏಕೆಂದರೆ ಇದು ನಮ್ಮ ಹಕ್ಕು ಮತ್ತು ಕರ್ತವ್ಯ ಎಂದು ಪತ್ನಿ ನೀತಾ ಅಂಬಾನಿ (Nita Ambani) ಮತದಾನಕ್ಕೆ ಕರೆ ಕೊಟ್ಟರು.
Advertisement
ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಇಂದು (ಸೋಮವಾರ) ನಡೆದಿದೆ. 6 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 49 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೂ ಮತದಾನ ನಡೆದಿದೆ. ಇನ್ನೂ 2 ಹಂತದ ಚುನಾವಣೆ ಬಾಕಿಯಿದ್ದು, ಮೇ 25 ರಂದು 6ನೇ ಹಂತ ಹಾಗೂ ಜೂನ್ 1ರಂದು 7ನೇ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಜೂನ್ 4ರಂದು 7 ಹಂತಗಳ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.
Advertisement
Advertisement
ಮತದಾನ ನಡೆದ ಪ್ರಮುಖ ಕ್ಷೇತ್ರಗಳು:
ಲಕ್ನೋ, ರಾಯ್ ಬರೇಲಿ, ಅಮೇಥಿ, ಫತೇಪುರ್, ಫೈಜಾಬಾದ್, ಕೈಸರ್‌ಗಂಜ್, ನಾಸಿಕ್, ಪಾಲ್ಘರ್, ಕಲ್ಯಾಣ್, ಥಾಣೆ, ಮುಂಬೈ ಉತ್ತರ ಮತ್ತು ಮಹಾರಾಷ್ಟ್ರದ ಮುಂಬೈ ದಕ್ಷಿಣ, ಬಂಗಾವ್, ಬ್ಯಾರಕ್‌ಪೋರ್, ಹೌರಾ ಮತ್ತು ಪಶ್ಚಿಮ ಬಂಗಾಳದ ಹೂಗ್ಲಿ, ಬಿಹಾರದ ಮುಜಾಫರ್‌ಪುರ, ಸರನ್ ಮತ್ತು ಹಾಜಿಪುರ, ಸುಂದರ್‌ಗಢ, ಒಡಿಶಾದ ಬೋಲಂಗೀರ್ ಮತ್ತು ಕಂಧಮಾಲ್, ಜಾರ್ಖಂಡ್‌ನ ಕೋಡರ್ಮಾ ಮತ್ತು ಹಜಾರಿಬಾಗ್, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ.
ಚುನಾವಣಾ ಕಣದಲ್ಲಿದ್ದವರು:
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವ ಪಿಯೂಷ್ ಗೋಯಲ್, ರಾಹುಲ್ ಗಾಂಧಿ, ಸ್ಮೃತಿ ಇರಾನಿ, ಒಮರ್ ಅಬ್ದುಲ್ಲಾ, ಸಜ್ಜದ್ ಗನಿ ಲೋನ್, ಸಾಧ್ವಿ ನಿರಂಜನ್ ಜ್ಯೋತಿ, ಲಲ್ಲು ಸಿಂಗ್, ಕರಣ್ ಭೂಷಣ್ ಸಿಂಗ್, ಕೀರ್ತಿ ವರ್ಧನ್ ಸಿಂಗ್, ತನುಜ್ ಪೂಧನ್ ಸಿಂಗ್, ನರೇಶ್ ಉತ್ತಮ್ ಪಟೇಲ್, ಉಜ್ವಲ್ ನಿಕಮ್, ರಾಹುಲ್ ಶೆವಾಲೆ, ಅನಿಲ್ ದೇಸಾಯಿ, ವರ್ಷ ಗಾಯಕ್ವಾಡ್, ಸಂಜಯ್ ದಿನ ಪಾಟೀಲ್, ರವೀಂದ್ರ ವೈಕರ್, ಶ್ರೀಕಾಂತ್ ಶಿಂಧೆ, ಹೇಮಂತ್ ಗೋಡ್ಸೆ, ಭಾರತಿ ಪವಾರ್, ಕಪಿಲ್ ಮೊರೇಶ್ವರ್ ಪಾಟೀಲ್, ಸುಭಾಷ್ ರಾಮರಾವ್ ಭಮ್ರೆ, ಶಾಂತನು ಠಾಕೂರ್, ಅರ್ಜುನ್ ಸಿಂಗ್, ಪ್ರಸೂನೆಟ್ ಚಟರ್ಜಿ, ಕಲ್ಯಾಣ್ ಬ್ಯಾನರ್ಜಿ, ದೇವೇಶ್ ಚಂದ್ರ ಠಾಕೂರ್, ಅಲಿ ಅಶ್ರಫ್ ಫಾತ್ಮಿ, ಅಜಯ್ ನಿಶಾದ್, ರಾಜೀವ್ ಪ್ರತಾಪ್ ರೂಡಿ, ರೋಹಿಣಿ ಆಚಾರ್ಯ, ಚಿರಾಗ್ ಪಾಸ್ವಾನ್, ಜುಯಲ್ ಓರಮ್, ದಿಲೀಪ್ ಟಿರ್ಕಿ, ಅಚ್ಯುತ ಸಮಂತಾ, ಸಂಗೀತಾ ಕುಮಾರಿ ಸಿಂಗ್ ಡಿಯೋ, ಅನ್ನಪೂರ್ಣ ದೇವಿ ಮತ್ತು ಜೈ ಪ್ರಕಾಶ್ ಭಾಯಿ ಪಟೇಲ್ ಸೇರಿದಂತೆ ಹಲವಾರು ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದರು.