ಮುಂಬೈ: ನನ್ನ ಪ್ರಕಾರ NVIDIA ಅಂದರೆ ವಿದ್ಯೆ. ಇದರರ್ಥ ಭಾರತದಲ್ಲಿ ಜ್ಞಾನ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಹೇಳಿದ್ದಾರೆ.
NVIDIA AI ಸಮ್ಮೇಳನದಲ್ಲಿ ಮುಕೇಶ್ ಅಂಬಾನಿ ಮತ್ತು ಎನ್ವಿಡಿಯಾ ಸಿಇಒ ಜೆನ್ಸನ್ ಹುವಾಂಗ್(Jensen Huang) ಅವರು ಪರಸ್ಪರ ಸಂವಾದ ನಡೆಸಿದರು. ಈ ವೇಳೆ ಅಂಬಾನಿ ಎನ್‌ವಿಡಿಯಾ ಪದದ ಅರ್ಥವನ್ನು ವಿವರಿಸಿದರು.
Advertisement
ʼಎನ್ವಿಡಿಯಾʼ ಹಿಂದಿಯಲ್ಲಿರುವ ʼವಿದ್ಯಾʼ ಪದವನ್ನು ಪ್ರತಿಧ್ವನಿಸುತ್ತದೆ. ವಿದ್ಯೆ ಅಂದರೆ ʼಜ್ಞಾನʼ ಎಂದರ್ಥ. ಹಿಂದೂ ಧರ್ಮದಲ್ಲಿ ಸರಸ್ವತಿಯನ್ನು ಜ್ಞಾನದ ದೇವತೆಯಾಗಿ ಕಾಣುತ್ತೇವೆ. ಸರಸ್ವತಿಗೆ ನಿಮ್ಮನ್ನು ನೀವು ಅರ್ಪಿಸಿದಾಗ ಸಂಪತ್ತು, ಸಮೃದ್ಧಿ ಬರುತ್ತದೆ. ನಮ್ಮ ಸಂಪ್ರದಾಯದ ಪ್ರಕಾರ ಸಂಪತ್ತಿನ ದೇವತೆ ಲಕ್ಷ್ಮಿ. ಎನ್‌ವಿಡಿಯಾ ಈಗ ವಿಶ್ವದಲ್ಲಿ ಜ್ಞಾನದ ಕ್ರಾಂತಿ ಮಾಡುತ್ತಿದೆ ಎಂದು ಬಣ್ಣಿಸಿದರು. ಇದನ್ನೂ ಓದಿ: ಭಾರತ ಎಲ್ಲರಿಗಿಂತ ಮೊದಲು 6G ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಿದೆ: ಪಿಯೂಷ್ ಗೋಯಲ್
Advertisement
#NvidiaAiSummit 🚨 | 🗣️ Mukesh Ambani: “My version of Nvidia is vidya, which means knowledge in India”
Huang reacts, “I knew I had named the company right…22 years ago I knew this!” 🎙️
Mukesh Ambani and Jensen Huang during their fireside chat at the Nvidia Ai Summit in Mumbai… pic.twitter.com/wyHtIhbxIL
— Moneycontrol (@moneycontrolcom) October 24, 2024
Advertisement
ಅಂಬಾನಿ ಮಾತಿಗೆ ಜೆನ್ಸನ್ ಹುವಾಂಗ್ ಮೆಚ್ಚುಗೆ ವ್ಯಕ್ತಪಡಿಸಿ, ಆರಂಭದಲ್ಲಿ ನಾನು ಕಂಪನಿಗೆ NVIDIA ಎಂದು ಹೆಸರನ್ನು ಇರಿಸಿದಾಗ ಬಹಳಷ್ಟು ಟೀಕೆಗಳನ್ನು ಎದುರಿಸಿದ್ದೆ. ಏನಿದು ಕೆಟ್ಟ ಹೆಸರು ಎಂದಿದ್ದರು. ಕೊನೆಗೂ 32 ವರ್ಷದ ನಂತರ ನನ್ನ ಕಂಪನಿಗೆ ನಾನು ಸರಿಯಾದ ಹೆಸರನ್ನು ಇರಿಸಿದ್ದೇನೆ ಎನ್ನುವುದು ಗೊತ್ತಾಯಿತು ಎಂದು ಬಣ್ಣಿಸಿ ಚಪ್ಪಾಳೆ ತಟ್ಟಿದರು.
Advertisement
ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ಮೂಲಸೌಕರ್ಯವನ್ನು (AI infrastructure) ನಿರ್ಮಿಸಲು ರಿಲಯನ್ಸ್ ಜೊತೆ ಎನ್‌ವಿಡಿಯಾ ಪಾಲುದಾರಿಕೆಯನ್ನು ಘೋಷಿಸಿದೆ.
ಭಾರತವು ತನ್ನದೇ ಆದ AI ಅನ್ನು ತಯಾರಿಸಬೇಕು ಎಂಬುದು ಸಂಪೂರ್ಣ ಅರ್ಥಪೂರ್ಣವಾಗಿದೆ. ಬುದ್ಧಿವಂತಿಕೆಯನ್ನು ಆಮದು ಮಾಡಿಕೊಳ್ಳಲು ನೀವು ಡೇಟಾವನ್ನು ರಫ್ತು ಮಾಡಬಾರದು. ಭಾರತವು ಬ್ರೆಡ್ ಆಮದು ಮಾಡಿಕೊಳ್ಳಲು ಹಿಟ್ಟು ರಫ್ತು ಮಾಡಬಾರದು ಜೆನ್ಸನ್ ಹುವಾಂಗ್ ಅಭಿಪ್ರಾಯ ವ್ಯಕ್ತಪಡಿಸಿದರು.