ಗಾಂಧೀನಗರ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ (Mukesh Ambani), ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವದ ಅತಿದೊಡ್ಡ ಡೇಟಾ ಸೆಂಟರ್ ಅನ್ನು ನಿರ್ಮಿಸಲು ಸಜ್ಜಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಈ ಮಹತ್ವಾಕಾಂಕ್ಷೆಯ ಯೋಜನೆಯು ಭಾರತದ ವೇಗವಾಗಿ ಬೆಳೆಯುತ್ತಿರುವ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯಗಳಿಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ. ಇದನ್ನೂ ಓದಿ: ಗಣರಾಜ್ಯೋತ್ಸವ 2025 – ಈ ಬಾರಿಯ ವಿಶೇಷತೆಗಳೇನು?
Advertisement
Advertisement
ದೇಶದ ಡಿಜಿಟಲ್ ಮೂಲಸೌಕರ್ಯ ಸುಧಾರಿಸುವಲ್ಲಿ ಈ ಡೇಟಾ ಸೆಂಟರ್ ಪ್ರಮುಖ ಪಾತ್ರ ವಹಿಸುತ್ತದೆ. ಜಾಗತಿಕ AI ವಲಯದಲ್ಲಿ ಭಾರತವು ಹೆಚ್ಚು ಸ್ಪರ್ಧಾತ್ಮಕವಾಗಲು ಸಹಾಯ ಮಾಡುತ್ತದೆ.
Advertisement
ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್, ಪ್ರಮುಖ AI ತಂತ್ರಜ್ಞಾನ ಡೆವಲಪರ್ NVIDIAನಿಂದ ವಿಶ್ವದ ಮುಂದುವರಿದ ಸೆಮಿಕಂಡಕ್ಟರ್‌ಗಳನ್ನು ಖರೀದಿಸುವ ಮೂಲಕ AI ತಂತ್ರಜ್ಞಾನಗಳಲ್ಲಿ ಕಾರ್ಯತಂತ್ರದ ಹೂಡಿಕೆ ಮಾಡುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಇನ್ಮುಂದೆ ಹಣ ಇಲ್ಲದಿದ್ರೂ ಟಿಕೆಟ್ ಬುಕ್ ಮಾಡಬಹುದು!
Advertisement
2024 ರ ಅಕ್ಟೋಬರ್ ವೇಳೆ, NVIDIA AI ಶೃಂಗಸಭೆಯ ಸಂದರ್ಭದಲ್ಲಿ ಭಾರತದಲ್ಲಿ AI ಮೂಲಸೌಕರ್ಯವನ್ನು ಸ್ಥಾಪಿಸಲು ರಿಲಯನ್ಸ್ ಮತ್ತು NVIDIA ಪಾಲುದಾರಿಕೆ ಹೊಂದಿವೆ ಎಂದು ಘೋಷಿಸಲಾಗಿತ್ತು.