ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Reliance Industries Chairman Mukesh Ambani) ಅವರಿಗೆ ಕೊಲೆ ಬೆದರಿಕೆಯೊಂದು (Threat) ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಮೇಲ್ ಮೂಲಕ ಬೆದರಿಕೆ ಹಾಕಿರುವ ವ್ಯಕ್ತಿ, 20 ಕೋಟಿ ಕೊಡಬೇಕು ಎಂಬುದಾಗಿ ಬೇಡಿಕೆ ಇಟ್ಟಿದ್ದಾನೆ. ನೀವು ನಮಗೆ 20 ಕೋಟಿ ರೂಪಾಯಿ ನೀಡದಿದ್ದರೆ, ನಾವು ನಿಮ್ಮನ್ನು ಕೊಲ್ಲುತ್ತೇವೆ. ನಾವು ಭಾರತದಲ್ಲಿ ಅತ್ಯುತ್ತಮ ಶೂಟರ್ ಗಳನ್ನು ಹೊಂದಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾನೆ.
Advertisement
Advertisement
ಅಕ್ಟೋಬರ್ 27 ರಂದು ಶಾದಾಬ್ ಖಾನ್ ಎಂಬ ಹೆಸರಿನಿಂದ ಈ ಬೆದರಿಕೆ ಮೇಲ್ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಅಂಬಾನಿ ನಿವಾಸ ಆಂಟಿಲಿಯಾದಲ್ಲಿ ಭದ್ರತಾ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಸದ್ಯ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಪ್ರತಿಯೊಬ್ಬರ ನಡೆ ಕೂಡ ನಮಗೆ ಗೊತ್ತಿದೆ- ಶಾಸಕರಿಗೆ ಡಿಕೆಶಿ ಖಡಕ್ ಎಚ್ಚರಿಕೆ
Advertisement
Advertisement
ಕಳೆದ ವರ್ಷ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸಿಕೊಂಡು ಅನಾಮಧೇಯ ಕರೆಗಳನ್ನು ಮಾಡಿದ್ದಕ್ಕಾಗಿ ಬಿಹಾರದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ದಕ್ಷಿಣ ಮುಂಬೈನಲ್ಲಿರುವ ಅಂಬಾನಿ ಕುಟುಂಬದ ನಿವಾಸ ಆಂಟಿಲಿಯಾದ ಜೊತೆಗೆ ಎಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದಿತ್ತು.
Web Stories