ಮುಂಬೈ: ಮುಂಬೈನಲ್ಲಿರುವ (Mumbai) ಸರ್ ಎಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಬಾಂಬ್ ಹಾಕುವುದಾಗಿ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದ್ದು, ಮುಖೇಶ್ ಅಂಬಾನಿ (Mukesh Ambani), ನೀತಾ ಅಂಬಾಣಿ (Nita Ambani) ಮತ್ತು ಕುಟುಂಬದ ಕೆಲ ಸದಸ್ಯರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.
ಬುಧವಾರ ಮಧ್ಯಾಹ್ನ 12:57ರ ಸುಮಾರಿಗೆ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ (Reliance hospital) ದೂರಾವಾಣಿ ಸಂಖ್ಯೆಗೆ ಕರೆ ಬಂದಿದ್ದು, ನಂತರ ಈ ಬಗ್ಗೆ ಡಿಬಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ಸಿಗರ ಭಾರತ ಬಿಟ್ಟು ಓಡೋ ಯಾತ್ರೆ: ನಳೀನ್ ಕುಮಾರ್ ಕಟೀಲ್
ಇದಕ್ಕೂ ಮುನ್ನ ಆಗಸ್ಟ್ 15 ರಂದು ಎಚ್‍ಎನ್ ರಿಲಯನ್ಸ್ ಆಸ್ಪತ್ರೆಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಂಬಾನಿ ಕುಟುಂಬಕ್ಕೆ ಜೀವ ಬೆದರಿಕೆಯೊಡ್ಡಲಾಗಿತ್ತು. ಸುಮಾರು 8 ಬಾರಿ ಕರೆ ಮಾಡಿದ್ದವರನ್ನು ಡಿಬಿ ಮಾರ್ಗ್ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದರು. ಇದನ್ನೂ ಓದಿ: ಕೊಟ್ಟ ಮಾತಿಗೆ ತಪ್ಪಿದ ಪಂಜಾಬ್ ಸರ್ಕಾರ – ಪೆಟ್ರೋಲ್ ಹಿಡಿದು ನೀರಿನ ಟ್ಯಾಂಕ್ ಏರಿ ಪ್ರತಿಭಟನೆಗೆ ಮುಂದಾದ ಶಿಕ್ಷಕಿಯರು
ಇದೀಗ ಮತ್ತೆ, ಸರ್ ಎಚ್‍ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಲ್ಯಾಂಡ್‍ಲೈನ್ ಸಂಖ್ಯೆಗೆ ಇಂದು ಮಧ್ಯಾಹ್ನ ಅನಾಮಧೇಯ ವ್ಯಕ್ತಿ ಕರೆ ಮಾಡಿ ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಜೊತೆಗೆ ಅಂಬಾನಿ ಮತ್ತು ಅವರ ಪತ್ನಿ ಕೆಲ ಕುಟುಂಬಸ್ಥರನ್ನು ಸಹ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.