ಧಾರವಾಡ: ಕಾಮಿಡಿ ಯೂಟ್ಯೂಬರ್ ಮುಕಳೆಪ್ಪನ ಮದುವೆ ಕಥೆ (Mukaleppa Marriage Story) ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಇಷ್ಟು ದಿನ ಮುಕಳೆಪ್ಪನ ಮದುವೆ ವಿಚಾರವಾಗಿ ಪೊಲೀಸ್ ಠಾಣೆ ಮೇಟ್ಟಿಲೇರುತಿದ್ದ ಮುಕಳೆಪ್ಪ ಪತ್ನಿಯ ತಾಯಿ ಶಿವಕ್ಕ ಈಗ ಧಾರವಾಡ ಹೈಕೋರ್ಟ್ (High Court) ಮೇಟ್ಟಿಲೇರಿದ್ದಾರೆ.
ಹೈಕೋರ್ಟ್ ಕೊಟ್ಟ ಸಮನ್ಸ್ ಮುಕಳೆಪ್ಪನ ಮನೆಗೆ ತಲುಪಿಸಲು ಸ್ವತಃ ಶಿವಕ್ಕಳೇ ಶ್ರೀರಾಮ ಸೇನೆ ಕಾರ್ಯಕರ್ತರ ಜೊತೆಗೆ ಆಗಮಿಸಿದ್ದರು. ಇದನ್ನೂ ಓದಿ: ಉತ್ತರ ಕರ್ನಾಟಕ ಶಾಸಕರಲ್ಲಿ ಒಗ್ಗಟ್ಟಿಲ್ಲ: ನಿಖಿಲ್ ಕತ್ತಿ
ಧಾರವಾಡ ನಗರದ ಭಾರತ ಕಾಲೋನಿಯ ಮುಕಳೆಪ್ಪನ ಮನೆಗೆ ಬಂದ ಶಿವಕ್ಕ, ಸಮನ್ಸ್ ಕೊಡಬೇಕು ಎಂದು ಮುಕಳೆಪ್ಪನ ಮನೆ ಬಾಗಿಲು ತಟ್ಟಿದ್ದಾರೆ. ಆದರೆ ಅಲ್ಲಿ ಯಾರೂ ಇಲ್ಲದ ಕಾರಣ ಸಮನ್ಸ್ ಕೈಯಲ್ಲೇ ಹಿಡಿದುಕೊಂಡು ಅಳಿಯ ಮುಕಳೆಪ್ಪನ ಮೇಲೆ ಮತ್ತೇ ಹಿಂದೆ ಮಾಡಿದ್ದ ಆರೋಪಗಳೇ ಮಾಡಿದ್ದಾರೆ. ಇದನ್ನೂ ಓದಿ: ಯೂಟ್ಯೂಬರ್ ಮುಕಳೆಪ್ಪ ಮದುವೆ ಪ್ರಕರಣ – ವಿವಾಹ ನೋಂದಣಾಧಿಕಾರಿ ಕಚೇರಿ ಬಂದ್


